ETV Bharat / bharat

ಅಮೆರಿಕದ ಶೀತ ಚಂಡಮಾರುತಕ್ಕೆ ಭಾರತೀಯ ದಂಪತಿ ಬಲಿ; ಮತ್ತೋರ್ವ ಕಣ್ಮರೆ

ಶೀತ ಚಂಡಮಾರುತಕ್ಕೆ ತತ್ತರಿಸಿದ ಅಮೆರಿಕ- ಪ್ರವಾಸಕ್ಕೆ ತೆರಳಿದ್ದ ಭಾರತೀಯ ದಂಪತಿ ಸಾವು- ಅದೃಷ್ಟವಶಾತ್​ ಮಕ್ಕಳ ರಕ್ಷಣೆ

ಅಮೆರಿಕದ ಶೀತ ಚಂಡಮಾರುತಕ್ಕೆ ಸಾವನ್ನಪ್ಪಿದ ತೆಲುಗು ದಂಪತಿ; ಮತ್ತೊರ್ವ ಕಣ್ಮರೆ
telugu-couple-who-died-due-to-snow-storm-in-america-another-disappearance
author img

By

Published : Dec 28, 2022, 1:36 PM IST

ಹೈದರಾದ್​/ಅರಿಜೋನ್​: ಅಮೆರಿಕ ಜನರು ಶೀತ ಚಂಡಮಾರುತಕ್ಕೆ ತತ್ತರಿಸಿದ್ದಾರೆ. ಶೀತ ಚಂಡಮಾರುತದಿಂದ ಜನರು ಸಾಕಷ್ಟು ತೊಂದರೆ ಅನುಭವಿಸಿದ್ದು, ಆಂಧ್ರ ಪ್ರದೇಶದ ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಅರಿಜೋನ್​ನಲ್ಲಿ ಉಂಟಾಗುತ್ತಿರುವ ಶೀತಗಾಳಿಗೆ ಗುಂಟೂರಿನ ಪಲಪರ್ರುನ ಮುದ್ದಣ್ಣ ನಾರಾಯಣ (40) ಮತ್ತು ಹರಿತ (36) ಮೃತ ದಂಪತಿ. ಹರಿತ ದೇಹ ಮಂಗಳವಾರ ಪತ್ತೆಯಾಗಿದ್ದು, ಇಂದು ನಾರಾಯಣ ದೇಹವನ್ನು ರಕ್ಷಣಾ ಸಿಬ್ಬಂದಿ ಪತ್ತೆ ಹಚ್ಚಿದ್ದಾರೆ. ಇನ್ನು, ಮತ್ತೊಬ್ಬ ತೆಲುಗು ನಾಡಿನ ನಿವಾಸಿ ಮಡಿಶೆಟ್ಟಿ ಗೋಖುಲ್​ ಕೂಡ ಶೀತ ಮಾರುತದಿಂದ ಸಾವನ್ನಪ್ಪಿದ್ದು, ಅವರ ದೇಹಕ್ಕೆ ಹುಡುಕಾಟ ನಡೆಸಲಾಗಿದೆ.

ಕಳೆದ ಏಳು ವರ್ಷದಿಂದ ಆರಿಜೋನ್​ನಲ್ಲಿ ನಾರಾಯಣ ದಂಪತಿ ನೆಲೆಸಿದ್ದರು. ರಜೆ ಹಿನ್ನೆಲೆ ಅವರು ಮಕ್ಕಳಾದ ಪೂಜಿತಾ (12) ಮತ್ತು ಹರ್ಷಿತಾ (10) ಜೊತೆ ಪ್ರವಾಸಕ್ಕೆ ತೆರಳಿದ್ದರು. ಈ ವೇಳೆ ಫೋಟೋ ತೆಗೆಯುವಾಗ ದಂಪತಿ ಆಕಸ್ಮಿಕವಾಗಿ ಕೆರೆಗೆ ಬಿದ್ದು, ಕಣ್ಮರೆಯಾದರು. ಇವರ ಮಕ್ಕಳು ಸುರಕ್ಷಿತವಾಗಿದ್ದಾರೆ ಎಂದು ತಿಳಿದುಬಂದಿದೆ.

ಈ ಅಪಘಾತ ಸುದ್ದಿ ತಿಳಿದ ನಾರಾಯಣ ಅವರ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಇದೇ ಜೂನ್​ನಲ್ಲಿ ದಂಪತಿ ಮಕ್ಕಳ ಸಮೇತ ಹುಟ್ಟೂರಿಗೆ ಭೇಟಿ ನೀಡಿದ್ದ ಕ್ಷಣವನ್ನು ನೆನೆದು ಕಣ್ಣೀರು ಹಾಕಿದ್ದಾರೆ. ಕಳೆದ ಸೋಮವಾರ ನಾರಾಯಣ ಅವರಿಗೆ ತಂದೆ ವೆಂಕಟ​ ಸುಬ್ಬರಾವ್​ ಕರೆ ಮಾಡಿ ಶೀತ ಚಂಡಮಾರುತದ ಬಗ್ಗೆ ವಿಚಾರಿಸಿದ್ದರು. ಈ ವೇಳೆ ತಾವು ನೆಲೆಸಿರುವ ಪ್ರದೇಶದಲ್ಲಿ ಯಾವುದೇ ಸಮಸ್ಯೆಯಿಲ್ಲ. ಪ್ರವಾಸಕ್ಕೆ ಹೋಗುತ್ತಿರುವುದಾಗಿ ಅವರು ತಿಳಿಸಿದ್ದರಂತೆ.

ಸಾಧಾರಣ ಕುಟುಂಬದಲ್ಲಿ ಜನಿಸಿದ ನಾರಾಯಣ ಅವರು ಎಂಎಸ್ಸಿ ಮುಗಿಸಿದ್ದು, ಕೆಲ ಕಾಲ ಮಲೇಷಿಯಾದಲ್ಲಿ ಕೆಲಸ ಮಾಡಿದ್ದರು. ಬಳಿಕ ಅಮೆರಿಕಕ್ಕೆ ತೆರಳಿದ್ದರು.

ಇದನ್ನೂ ಓದಿ: ಚಳಿ ಮಾರುತಕ್ಕೆ ಅಮೆರಿಕ ತತ್ತರ: ಸಾವಿನ ಸಂಖ್ಯೆ 27ಕ್ಕೆ ಏರಿಕೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.