ETV Bharat / bharat

ಆಂಧ್ರದಲ್ಲಿ ಬ್ಲ್ಯಾಕ್​ ಫಂಗಸ್ ಪ್ರಕರಣಗಳು 2,303ಕ್ಕೆ ಏರಿಕೆ: 157 ಮಂದಿ ಸಾವು

author img

By

Published : Jun 15, 2021, 7:37 AM IST

Updated : Jun 15, 2021, 8:43 AM IST

ಆಂಧ್ರಪ್ರದೇಶದಲ್ಲಿ ಇಲ್ಲಿಯವರೆಗೆ 2,303 ಬ್ಲ್ಯಾಕ್​ ಫಂಗಸ್ ಕೇಸ್​ಗಳು ಪತ್ತೆಯಾಗಿದ್ದು, ಈ ಪೈಕಿ 1,328 ಕೇಸ್​ಗಳು ಸಕ್ರಿಯವಾಗಿವೆ. 157 ಮಂದಿ ಮೃತಪಟ್ಟಿದ್ದಾರೆ.

Andhra's black fungus cases reach 2,303
ಆಂಧ್ರದಲ್ಲಿ ಬ್ಲಾಕ್​ ಫಂಗಸ್ ಕೇಸ್​ 2,303ಕ್ಕೆ ಏರಿಕೆ

ಅಮರಾವತಿ (ಆಂಧ್ರಪ್ರದೇಶ): ಆಂಧ್ರಪ್ರದೇಶದಲ್ಲಿ ಈವರೆಗೆ 2,303 ಕಪ್ಪು ಶಿಲೀಂಧ್ರ ಅಥವಾ ಮ್ಯೂಕಾರ್ಮೈಕೋಸಿಸ್ ಪ್ರಕರಣಗಳು ವರದಿಯಾಗಿವೆ. ಅಲ್ಲದೇ 157 ಮಂದಿ ಬ್ಲ್ಯಾಕ್​ ಫಂಗಸ್​​ಗೆ ತುತ್ತಾಗಿ ಸಾವನ್ನಪ್ಪಿದ್ದಾರೆ ಎಂದು ರಾಜ್ಯ ವೈದ್ಯಕೀಯ ಮತ್ತು ಆರೋಗ್ಯ ಪ್ರಧಾನ ಕಾರ್ಯದರ್ಶಿ ಅನಿಲ್ ಕುಮಾರ್ ಸಿಂಘಾಲ್ ತಿಳಿಸಿದ್ದಾರೆ.

ಅಮರಾವತಿಯಲ್ಲಿ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಸಿಂಘಾಲ್, ಆಂಧ್ರದಲ್ಲಿ ಇಲ್ಲಿಯವರೆಗೆ ಪತ್ತೆಯಾಗಿರುವ 2,303 ಕಪ್ಪು ಶಿಲೀಂಧ್ರ ಪ್ರಕರಣಗಳ ಪೈಕಿ 1,328 ಕೇಸ್​ಗಳು ಸಕ್ರಿಯವಾಗಿವೆ. ಬ್ಲ್ಯಾಕ್​ ಫಂಗಸ್ ಚಿಕಿತ್ಸೆಗೆ ಬಳಸುವ ಆಂಫೊಟೆರಿಸಿನ್-ಬಿ ಇಂಜೆಕ್ಷನ್ ಮತ್ತು ಪೋಸಾಕೋನಾಜೋಲ್ ಮಾತ್ರೆಗಳು ರಾಜ್ಯಾದ್ಯಂತ ಲಭ್ಯವಿದೆ ಎಂದು ಮಾಹಿತಿ ನೀಡಿದ್ದಾರೆ.

ಕೊರೊನಾದಿಂದ ಮೃತಪಟ್ಟ ವೈದ್ಯಕೀಯ ಸಿಬ್ಬಂದಿ​ ಕುಟುಂಬಕ್ಕೆ ಪರಿಹಾರ

ಕೋವಿಡ್​ನಿಂದ ಸಾವನ್ನಪ್ಪಿದ ವೈದ್ಯರ ಕುಟುಂಬಕ್ಕೆ ತಲಾ 25 ಲಕ್ಷ ರೂ. ಹಾಗೂ ನರ್ಸ್ ಕುಟುಂಬಕ್ಕೆ ತಲಾ 20 ಲಕ್ಷ ರೂ. ನೀಡುವುದಾಗಿ ಆಂಧ್ರಪ್ರದೇಶ ಸರ್ಕಾರವು ಘೋಷಿಸಿದೆ. ಅಲ್ಲದೇ ಇತರ ವೈದ್ಯಕೀಯ ಸಿಬ್ಬಂದಿಗೆ ಅವರ ಹುದ್ದೆಗನುಸಾರವಾಗಿ 10-15 ಲಕ್ಷ ರೂ. ಪರಿಹಾರ ನೀಡುವುದಾಗಿ ಸರ್ಕಾರ ಭರವಸೆ ನೀಡಿರುವುದಾಗಿ ಇದೇ ವೇಳೆ ಅನಿಲ್ ಕುಮಾರ್ ಸಿಂಘಾಲ್ ಹೇಳಿದರು.

ರಾಜ್ಯಗಳಿಗೆ ಆಂಫೊಟೆರಿಸಿನ್ -ಬಿ ಹಂಚಿಕೆ

ಬ್ಲ್ಯಾಕ್​ ಫಂಗಸ್ ವಿರುದ್ಧ ಹೋರಾಡಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಚಿಕಿತ್ಸೆಗೆ ಬೇಕಾದ 1,06,300 ಲಿಪೊಸೋಮಲ್ ಆಂಫೊಟೆರಿಸಿನ್-ಬಿ ವಯಲ್ಸ್​ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಮಾಹಿತಿ ನೀಡಿದ್ದಾರೆ.

Last Updated : Jun 15, 2021, 8:43 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.