ETV Bharat / bharat

ಆಂಧ್ರ ಲೋಕಲ್​ ಫೈಟ್​ ಆರಂಭ.. ಗ್ರಾಪಂ ಚುನಾವಣಾ ವೇಳಾಪಟ್ಟಿ ಬಿಡುಗಡೆ

author img

By

Published : Jan 9, 2021, 8:49 AM IST

ಫೆಬ್ರವರಿ 5, 9, 13 ಮತ್ತು 17 ರಂದು ಮತದಾನ ನಡೆಯಲಿದೆ. ಬೆಳಗ್ಗೆ 6.30 ರಿಂದ ಮಧ್ಯಾಹ್ನ 3.30 ರವರೆಗೆ ಮತದಾನ ನಡೆಯಲಿದೆ. ಮತಗಳ ಎಣಿಕೆಯನ್ನು ನಾಲ್ಕು ಹಂತಗಳ ಮೂಲಕ ಮಾಡಲಾಗುತ್ತದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

Andhra SEC announces gram panchayat polls from Feb 5
ಕರ್ನಾಟಕ ಆಯ್ತು ಆಂಧ್ರ ಪ್ರದೇಶದಲ್ಲಿ ಲೋಕಲ್​ ಫೈಟ್​ ಆರಂಭ

ಅಮರಾವತಿ : ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಆಂಧ್ರಪ್ರದೇಶ ರಾಜ್ಯ ಚುನಾವಣಾ ಆಯುಕ್ತ ಎನ್ ರಮೇಶ್ ಕುಮಾರ್ ಅವರು ಫೆಬ್ರವರಿ 5 ರಿಂದ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಎಂದು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

ಗ್ರಾಮ ಪಂಚಾಯಿತಿ ಚುನಾವಣೆ ಸೇರಿದಂತೆ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಸರ್ಕಾರ ಆಕ್ಷೇಪಣೆ ವ್ಯಕ್ತಪಡಿಸಿದೆ. ವ್ಯಾಕ್ಸಿನೇಷನ್ ಕಾರ್ಯಕ್ರಮದಲ್ಲಿ ಅಧಿಕಾರಿಗಳು ತೊಡಗಿರುತ್ತಾರೆ, ಈ ವೇಳೆ ಚುನಾವಣೆ ನಡೆಸಲು ಸಾಧ್ಯವಿಲ್ಲ ಎಂದು ಸರ್ಕಾರ ಹೇಳಿದೆ.

ಎಸ್‌ಇಸಿ ಚುನಾವಣಾ ಅಧಿಸೂಚನೆ ಪ್ರಕಾರ ಮೊದಲ ಹಂತದ ಚುನಾವಣೆ ಜನವರಿ 23, ಎರಡನೇ ಹಂತ ಜನವರಿ 27, ಮೂರನೇ ಹಂತ ಜನವರಿ 31 ಮತ್ತು 4ನೇ ಹಂತದ ಚುನಾವಣಗೆ ಫೆಬ್ರವರಿ 4 ರಂದು ಅಧಿಸೂಚನೆ ಹೊರಡಿಸಲಾಗುವುದು. ನಾಮಪತ್ರ ಸಲ್ಲಿಸಲು ಕೊನೆಯ ದಿನಾಂಕ ಪ್ರಕಟಿಸಿದ್ದು, ಕ್ರಮವಾಗಿ ಜನವರಿ 27, 31, ಫೆಬ್ರವರಿ 4 ಮತ್ತು 8 ಆಗಿದೆ.

ಓದಿ : ಆಸ್ಪತ್ರೆಯಲ್ಲಿ ಬೆಂಕಿ ಅವಘಡ... ಹತ್ತು ನವಜಾತ ಶಿಶುಗಳ ಸಜೀವ ದಹನ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.