ETV Bharat / bharat

ಆಂಧ್ರದಲ್ಲಿ 13 ಹೊಸ ಜಿಲ್ಲೆಗಳ ರಚನೆ; ಡಿಸಿ, ಎಸ್ಪಿಗಳ ನೇಮಿಸಿದ ಜಗನ್‌ ಸರ್ಕಾರ - ಆಂಧ್ರದಲ್ಲಿ ಈಗ 26 ಜಿಲ್ಲೆಗಳು

2019ರ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿ ಲೋಕಸಭಾ ಕ್ಷೇತ್ರಗಳನ್ನು ಜಿಲ್ಲೆಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ವೈ.ಎಸ್.ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದರು.

ನಾಳೆಯಿಂದ ಆಂಧ್ರದಲ್ಲಿ ಅಧೀಕೃತವಾಗಿ 13 ಹೊಸ ಜಿಲ್ಲೆಗಳು:  ಅಧಿಕಾರಿಗಳನ್ನು ನೇಮಿಸಿದ ಸರ್ಕಾರ

author img

By

Published : Apr 3, 2022, 1:01 PM IST

ಅಮರಾವತಿ: ಆಂಧ್ರಪ್ರದೇಶ ಸರ್ಕಾರವು ಈಗಾಗಲೇ ಅಸ್ತಿತ್ವದಲ್ಲಿರುವ 13 ಜಿಲ್ಲೆಗಳ ಜೊತೆ ಈಗ ನೂತನವಾಗಿ ಮತ್ತೆ 13 ಜಿಲ್ಲೆಗಳನ್ನು ರಚಿಸಿದೆ. ಈ ಮೂಲಕ ರಾಜ್ಯದಲ್ಲಿ 26 ಜಿಲ್ಲೆಗಳಾಗಿವೆ. ಎಲ್ಲಾ ಹೊಸ ಜಿಲ್ಲೆಗಳು ಏಪ್ರಿಲ್ 4 (ಸೋಮವಾರ) ರಿಂದ ಅಸ್ತಿತ್ವಕ್ಕೆ ಬರಲಿವೆ ಎಂದು ಶನಿವಾರ ರಾತ್ರಿ ಹೊರಡಿಸಲಾದ ಗೆಜೆಟ್​ನಲ್ಲಿ ತಿಳಿಸಲಾಗಿದೆ.

ಅಧಿಸೂಚನೆ ಹೊರಡಿಸಿದ ಕೂಡಲೇ ವೈ.ಎಸ್.ಜಗನ್ ಮೋಹನ್ ರೆಡ್ಡಿ ನೇತೃತ್ವದ ವೈಎಸ್ಆರ್ ಕಾಂಗ್ರೆಸ್ ಸರ್ಕಾರವು ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳನ್ನು ಹೊಸ ಜಿಲ್ಲೆಗಳಿಗೆ ಜಿಲ್ಲಾಧಿಕಾರಿಗಳು ಮತ್ತು ಪೊಲೀಸ್ ವರಿಷ್ಠಾಧಿಕಾರಿಗಳನ್ನಾಗಿ ನೇಮಿಸಿದೆ.

ರಾಜ್ಯ ಸರ್ಕಾರವು 13 ಜಿಲ್ಲೆಗಳಿಂದ ಮತ್ತೆ 13 ಜಿಲ್ಲೆಗಳನ್ನು ವಿಭಜಿಸಲು ಕರಡು ಅಧಿಸೂಚನೆ ಹೊರಡಿಸಿತ್ತು. ಈ ಕುರಿತಂತೆ ಸಲಹೆ ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. 2019ರ ವಿಧಾನಸಭಾ ಚುನಾವಣೆಯ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ತಮ್ಮ ಪಕ್ಷವು ಅಧಿಕಾರಕ್ಕೆ ಬಂದರೆ ಪ್ರತಿ ಲೋಕಸಭಾ ಕ್ಷೇತ್ರಗಳನ್ನು ಜಿಲ್ಲೆಗಳನ್ನಾಗಿ ಪರಿವರ್ತಿಸುತ್ತೇವೆ ಎಂದು ವೈ.ಎಸ್.ಜಗನ್ ಮೋಹನ್ ರೆಡ್ಡಿ ಭರವಸೆ ನೀಡಿದ್ದರು. ರಾಜ್ಯ 25 ಲೋಕಸಭಾ ಸ್ಥಾನಗಳನ್ನು ಹೊಂದಿದ್ದು, ಪೂರ್ವ ಗೋದಾವರಿ ಮತ್ತು ವಿಶಾಖಪಟ್ಟಣಂನಲ್ಲಿನ ಬುಡಕಟ್ಟು ಪ್ರದೇಶಗಳನ್ನು ಸೇರಿಸಿ ಒಂದು ಜಿಲ್ಲೆಯನ್ನು ಹೆಚ್ಚುವರಿಯಾಗಿ ರಚಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.