ETV Bharat / bharat

ಪಿಜಿ ಕೋರ್ಸ್​​ ಮುಗಿಸಿದ ಖುಷಿಯಲ್ಲಿ ಬೀಚ್​ಗೆ ಹೋಗಿ ಸಮುದ್ರಪಾಲಾದ ಆಂಧ್ರದ ವಿದ್ಯಾರ್ಥಿ - ಇಟಲಿಯ ಮಿಲಾನ್​​ ವಿಶ್ವವಿದ್ಯಾಲಯ

ಕರ್ನೂಲ್​​​ ಜಿಲ್ಲೆಯ 24 ವರ್ಷದ ದಿಲೀಪ್​ ಎಂಬ ಯುವಕ ಇಟಲಿಯಲ್ಲಿ ಎಂ.ಎಸ್ಸಿ ಅಗ್ರಿ ವ್ಯಾಸಂಗ ಮಾಡುತ್ತಿದ್ದ. ಓದು ಮುಕ್ತಾಯವಾದ ಖುಷಿಯಲ್ಲಿ ಶುಕ್ರವಾರ ಮೊಂಟೆರೊಸ್ಸೊ ಬೀಚ್​ಗೆ ತೆರಳಿದ್ದಾಗ ದುರ್ಘಟನೆ ಸಂಭವಿಸಿದೆ.

andhra-pradesh-student-drowns-in-italy
ಇಟಲಿಯಲ್ಲಿ ಆಂಧ್ರ ವಿದ್ಯಾರ್ಥಿ ಸಮುದ್ರ ಪಾಲು
author img

By

Published : Jun 14, 2022, 7:33 PM IST

Updated : Jun 14, 2022, 7:49 PM IST

ಕರ್ನೂಲ್​ (ಆಂಧ್ರಪ್ರದೇಶ): ಇಟಲಿಯಲ್ಲಿ ಆಂಧ್ರಪ್ರದೇಶದ ಕರ್ನೂಲ್​​​ ಜಿಲ್ಲೆಯ ವಿದ್ಯಾರ್ಥಿಯೋರ್ವ ಸಮುದ್ರ ಪಾಲಾಗಿದ್ದಾನೆ. 24 ವರ್ಷದ ದಿಲೀಪ್​ ಮೃತ ವಿದ್ಯಾರ್ಥಿಯಾಗಿದ್ದು, ಬಾಲಾಜಿ ನಗರ ನಿವಾಸಿಗಳಾದ ಚಿಲುಮೂರು ಶ್ರೀನಿವಾಸಿ ರಾವ್​ ಹಾಗೂ ಶಾರದಾದೇವಿ ದಂಪತಿಯ ಪುತ್ರ. ಇಟಲಿಯ ಮಿಲಾನ್​​ ವಿಶ್ವವಿದ್ಯಾಲಯದಲ್ಲಿ ಎಂ.ಎಸ್ಸಿ ಅಗ್ರಿ ವ್ಯಾಸಂಗ ಮಾಡುತ್ತಿದ್ದನು ಎಂದು ತಿಳಿದುಬಂದಿದೆ.

2019ರಲ್ಲಿ ಸೆಪ್ಟೆಂಬರ್​​​ನಲ್ಲಿ ಇಟಲಿಗೆ ತೆರಳಿದ್ದ ದಿಲೀಪ್​​ ಕಳೆದ ವರ್ಷದ ಏಪ್ರಿಲ್​​ನಲ್ಲಿ ಸ್ವದೇಶಕ್ಕೆ ಬಂದಿದ್ದ. ನಂತರ ಮರಳಿ ಸೆಪ್ಟಂಬರ್​​ನಲ್ಲಿ ತೆರಳಿದಿದ್ದಾನೆ. ಇತ್ತೀಚೆಗೆ ಪೋಷಕರೊಂದಿಗೆ ಮಾತನಾಡಿದ್ದ ಆತ, ತನ್ನ ಓದು ಪೂರ್ಣಗೊಳಿಸಿ, ತಕ್ಷಣವೇ ಉದ್ಯೋಗ ಪಡೆದು ಮನೆಗೆ ಬರುವುದಾಗಿ ಹೇಳಿದ್ದನು.

ಆದರೆ, ಓದು ಮುಕ್ತಾಯವಾದ ಖುಷಿಯಲ್ಲಿ ಶುಕ್ರವಾರ ಮೊಂಟೆರೊಸ್ಸೊ ಬೀಚ್​ಗೆ ತೆರಳಿದ್ದಾನೆ. ಈ ವೇಳೆ ಸಂಜೆ ಹೊತ್ತಲ್ಲಿ ಅಪ್ಪಳಿಸಿದ ಅಲೆಗಳಿಗೆ ಸಮುದ್ರ ಪಾಲಾಗಿದ್ದಾನೆ. ಕೋಸ್ಟಲ್​​ ಗಾರ್ಡ್​​ ಸಿಬ್ಬಂದಿ ದಿಲೀಪ್​ನನ್ನು ರಕ್ಷಿಸಲು ಯತ್ನಿಸಿದ್ದು ಫಲಕಾರಿಯಾಗಿಲ್ಲ. ಕೊನೆಗೆ ಸಮುದ್ರದಲ್ಲಿ ಮೃತದೇಹ ಪತ್ತೆಯಾಗಿದೆ. ಶವವನ್ನು ಸ್ವದೇಶಕ್ಕೆ ತರಲು ಅಧಿಕಾರಿಗಳು ಕ್ರಮ ವಹಿಸಿದ್ದಾರೆ.

ಇದನ್ನೂ ಓದಿ: ಅಮರಾವತಿ ಐತಿಹಾಸಿಕ ತೀರ್ಪು ನೀಡಿದ ಜಡ್ಜ್​ ನಿವೃತ್ತ: ರೈತರಿಂದ ಅದ್ಧೂರಿ ಬೀಳ್ಕೊಡುಗೆ

Last Updated : Jun 14, 2022, 7:49 PM IST

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.