ಆಂಧ್ರ ಪ್ರದೇಶ: ಆಂಧ್ರ ಚುನಾವಣಾ ಆಯೋಗದ ಕಾರ್ಯದರ್ಶಿ ವಾಣಿ ಮೋಹನ್ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿದೆ. ಈ ಕುರಿತು ಚುನಾವಣಾ ಆಯುಕ್ತ ನಿಮ್ಮಗಡ್ಡ ರಮೇಶ್ ಕುಮಾರ್ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದಾರೆ.
ನಿನ್ನೆಯಷ್ಟೇ ಜಂಟಿ ನಿರ್ದೇಶಕ (ಜೆಡಿ) ಜಿ.ವಿ.ಸೈಪ್ರಸಾದ್ ಅವರನ್ನು ವಜಾಗೊಳಿಸಲಾಗಿತ್ತು. ಪಂಚಾಯತ್ ಚುನಾವಣೆಗೆ ಅಡ್ಡಿಯಾಗಲು ಯತ್ನಿಸಿದ ಆರೋಪದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿದು ಬಂದಿದೆ.
ಇನ್ನು ಜಂಟಿ ನಿರ್ದೇಶಕರ ವಿರುದ್ಧ ಇಂತಹ ಕಠಿಣ ಕ್ರಮ ಕೈಗೊಂಡಿರುವುದು ಆಯೋಗದ ಇತಿಹಾಸದಲ್ಲಿ ಇದೇ ಮೊದಲಾಗಿದೆ.