ETV Bharat / bharat

ಆಂಧ್ರದಲ್ಲಿ ಗ್ರಾಮ ಸಮರ: ಇಂದು ಎರಡನೇ ಹಂತದ ಚುನಾವಣೆ - ಆಂಧ್ರಪ್ರದೇಶದಲ್ಲಿ ಗ್ರಾಮ ಪಂಚಾಯತ್ ಚುನಾವಣೆ

ಆಂಧ್ರಪ್ರದೇಶದಲ್ಲಿ ಇಂದು ಎರಡನೇ ಹಂತದ ಗ್ರಾಮ ಪಂಚಾಯತ್ ಚುನಾವಣೆ ನಡೆಯುತ್ತಿದ್ದು, 2,786 ಪಂಚಾಯಿತಿಗಳಲ್ಲಿ ಅಭ್ಯರ್ಥಿಗಳ ಹಣೆಬರಹ ಬರೆಯಲಿದ್ದಾನೆ ಮತದಾನ ಪ್ರಭು.

Andhra Pradesh
ಆಂಧ್ರ
author img

By

Published : Feb 13, 2021, 1:04 PM IST

ಆಂಧ್ರಪ್ರದೇಶ: ಇಂದು ಆಂಧ್ರಪ್ರದೇಶದಲ್ಲಿ ಎರಡನೇ ಹಂತದ ಗ್ರಾಮ ಪಂಚಾಯತ್​ ಚುನಾವಣೆ ನಡೆಯುತ್ತಿದ್ದು, ಒಟ್ಟು 2,786 ಪಂಚಾಯಿತಿಗಳಲ್ಲಿ ಮತದಾನ ಮಾಡಲಾಗುತ್ತಿದೆ.

ಎರಡನೇ ಹಂತದ ಮತದಾನಕ್ಕೆ 3,328 ಪಂಚಾಯಿತಿಗಳಿಗೆ ಅಧಿಸೂಚನೆ ಹೊರಡಿಸಿಲಾಗಿತ್ತು. ಅದರಲ್ಲಿ 539 ಮಂದಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ನಾಮಪತ್ರ ಸಲ್ಲಿಕೆಯಾಗದ ಕಾರಣ ಕರ್ನೂಲ್ ಮತ್ತು ಶ್ರೀಕಾಕುಳಂ ಜಿಲ್ಲೆಗಳ 2 ಪಂಚಾಯಿತಿಗಳಲ್ಲಿ ಚುನಾವಣೆ ನಡೆಯುತ್ತಿಲ್ಲ. ಉಳಿದಂತೆ 2,786 ಪಂಚಾಯತ್​ ಸ್ಥಾನಗಳಲ್ಲಿ 7,507 ಅಭ್ಯರ್ಥಿಗಳು ಕಣದಲ್ಲಿದ್ದಾರೆ.

ಪಂಚಾಯತ್ ಚುನಾವಣೆಯು ಫೆಬ್ರವರಿ 9 ರಂದು ಪ್ರಾರಂಭವಾಗಿ ಫೆಬ್ರವರಿ 21 ರವರೆಗೆ ನಾಲ್ಕು ಹಂತಗಳಲ್ಲಿ ನಡೆಯಲಿದೆ.

ಮೊದಲ ಹಂತದ ಚುನಾವಣೆಯು ಫೆಬ್ರವರಿ 9 ರಂದು ನಡೆಯಿತು. 20,817 ವಾರ್ಡ್ ಸದಸ್ಯರ ಆಯ್ಕೆಗಾಗಿ ಚುನಾವಣೆ ನಡೆಯಲಿದೆ. ಮತದಾನ ಬೆಳಗ್ಗೆ 6.30 ರಿಂದ ಪ್ರಾರಂಭವಾಗಿ ಮಧ್ಯಾಹ್ನ 3.30 ರವರೆಗೆ ಮುಂದುವರಿಯುತ್ತದೆ. ಆದರೆ ಮತ ಎಣಿಕೆ ಸಂಜೆ 4 ಗಂಟೆಗೆ ಪ್ರಾರಂಭವಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

3,328 ಪಂಚಾಯತ್ ಸರ್ಪಂಚರಿಗೆ ಚುನಾವಣೆ ನಡೆಯಬೇಕಿದ್ದರೂ, 539 ಜನರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದ್ದು, ಮೂರು ಗ್ರಾಮಗಳಲ್ಲಿ ನಾಮಪತ್ರ ಸಲ್ಲಿಸಲಾಗಿಲ್ಲ ಎಂದು ತಿಳಿಸಿದೆ.

ಸರ್ಪಂಚ್ ಹುದ್ದೆಗಳಿಗೆ 7,507 ಅಭ್ಯರ್ಥಿಗಳು ಸ್ಪರ್ಧಿಸುತ್ತಿದ್ದರೆ, ವಾರ್ಡ್ ಸದಸ್ಯರಿಗಾಗಿ 44,876 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಚುನಾವಣೆಗಳನ್ನು ಬ್ಯಾಲೆಟ್ ಪೇಪರ್ ಬಳಸಿ, ಯಾವುದೇ ರಾಜಕೀಯ ಪಕ್ಷದ ಚಿಹ್ನೆಗಳಿಲ್ಲದೆ ನಡೆಸಲಾಗುತ್ತಿದೆ. ಒಟ್ಟಾರೆಯಾಗಿ, 29,304 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಅದರಲ್ಲಿ 5,480 ಸೂಕ್ಷ್ಮ ಮತ್ತು 4,181 ಅತಿಸೂಕ್ಷ್ಮ ಎಂದು ಗುರುತಿಸಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.

ಬಿಗಿ ಭದ್ರತೆಯ ಮಧ್ಯೆ ಕೋವಿಡ್​ -19 ಪ್ರೋಟೋಕಾಲ್‌ಗಳ ಪ್ರಕಾರ ಎಲ್ಲ ಅಗತ್ಯ ಮುನ್ನೆಚ್ಚರಿಕೆಗಳು ಕ್ರಮಗಳೊಂದಿಗೆ ಮತದಾನ ನಡೆಸಲಾಗುತ್ತಿದೆ. ಸೋಂಕಿತ ಮತದಾರರಿಗೆ ಪಿಪಿಇ ಕಿಟ್‌ಗಳನ್ನು ಒದಗಿಸಿ ಮುನ್ನೆಚ್ಚರಿಕಾ ಕ್ರಮ ಕೈಗೊಳ್ಳಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.