ಹೈದರಾಬಾದ್: ತಮಿಳುನಾಡಿನ ನೀಲಿಗಿರಿಯ ಕುನೂರಿನಲ್ಲಿ ನಡೆದ ಸೇನಾ ಹೆಲಿಕಾಪ್ಟರ್ ಪತನ ಅವಘಡದಲ್ಲಿ ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಸೇರಿದಂತೆ 13 ಜನರು ಸಾವನ್ನಪ್ಪಿದ್ದಾರೆ. ಇದರಲ್ಲಿ ಕೆಲವರು ಅತಿ ಕಡಿಮೆ ವಯಸ್ಸಿನ ಯೋಧರು ಕೂಡ ಪ್ರಾಣ ಕಳೆದುಕೊಂಡಿದ್ದಾರೆ.
ಇಂದು ಬೆಳಗ್ಗೆ ನಡೆದಿರುವ ಸೇನಾ ಹೆಲಿಕಾಪ್ಟರ್ ಅವಘಡದಲ್ಲಿ ಕೇವಲ 27 ವರ್ಷದ ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ನಿಧನರಾಗಿದ್ದಾರೆ. ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿ ಆಗಿದ್ದ ಸಾಯಿ ತೇಜ್ ಮೂಲತಃ ಆಂಧ್ರಪ್ರದೇಶದವರು. 2012ರಲ್ಲಿ ಭಾರತೀಯ ಸೇನೆಯ ಬೆಂಗಳೂರು ರೆಜಿಮೆಂಟ್ಗೆ ಸೇರಿದ್ದ ಇವರಿಗೆ ಪತ್ನಿ ಹಾಗೂ ಇಬ್ಬರು ಮಕ್ಕಳಿದ್ದಾರೆ. ಅದರಲ್ಲಿ ಮೂರು ವರ್ಷದ ಗಂಡು ಮಗು ಹಾಗೂ ಎರಡು ವರ್ಷದ ಹೆಣ್ಣು ಮಗುವಿದೆ. ಕಳೆದ ಕೆಲ ದಿನಗಳ ಹಿಂದೆ ಇವರು ಸೇನಾ ಮುಖ್ಯಸ್ಥ ಬಿಪಿನ್ ರಾವತ್ ಅವರ ವೈಯಕ್ತಿಕ ಭದ್ರತಾ ಅಧಿಕಾರಿಯಾಗಿ ಸೇರಿಕೊಂಡಿದ್ದರು.
-
In pictures from left to right- Madhulika Rawat, wife of CDS Gen Bipin Rawat, Lance Naik Vivek Kumar 1 Para (SF), NK Gurushewak Singh 9 Para (SF), Lance Naik BS Teja 11 Para (SF)
— ANI (@ANI) December 8, 2021 " class="align-text-top noRightClick twitterSection" data="
Gen Rawat, his wife, & 11 Army, IAF personnel died in a chopper crash in Coonoor, Tamil Nadu today pic.twitter.com/8wy5qKxFFl
">In pictures from left to right- Madhulika Rawat, wife of CDS Gen Bipin Rawat, Lance Naik Vivek Kumar 1 Para (SF), NK Gurushewak Singh 9 Para (SF), Lance Naik BS Teja 11 Para (SF)
— ANI (@ANI) December 8, 2021
Gen Rawat, his wife, & 11 Army, IAF personnel died in a chopper crash in Coonoor, Tamil Nadu today pic.twitter.com/8wy5qKxFFlIn pictures from left to right- Madhulika Rawat, wife of CDS Gen Bipin Rawat, Lance Naik Vivek Kumar 1 Para (SF), NK Gurushewak Singh 9 Para (SF), Lance Naik BS Teja 11 Para (SF)
— ANI (@ANI) December 8, 2021
Gen Rawat, his wife, & 11 Army, IAF personnel died in a chopper crash in Coonoor, Tamil Nadu today pic.twitter.com/8wy5qKxFFl
ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ಮನೆಗೆ ಭೇಟಿ ನೀಡಿದ್ದರು. ಇನ್ನು ಇವರ ಸಹೋದರ ಮಹೇಶ್ ಬಾಬು ಕೂಡ ಭಾರತೀಯ ಸೇನೆಯಲ್ಲಿದ್ದು, ಹಿಮಾಚಲ ಪ್ರದೇಶದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.
ಇದನ್ನೂ ಓದಿರಿ: ಹೆಲಿಕಾಪ್ಟರ್ ಪತನದಲ್ಲಿ ಬಿಪಿನ್ ರಾವತ್ ನಿಧನ: ಶುಕ್ರವಾರ ಅಂತ್ಯಕ್ರಿಯೆ
ಲ್ಯಾನ್ಸ್ ನಾಯ್ಕ್ ಸಾಯಿ ತೇಜ್ ಸಾವನ್ನಪ್ಪಿರುವ ಮಾಹಿತಿ ತಿಳಿಯುತ್ತಿದ್ದಂತೆ ಕುರಬಾಳ ಮಂಡಲದ ಯಗುವರೆಗಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ. ಪಾರ್ಥಿವ ಶರೀರ ನಾಳೆ ಆಂಧ್ರಪ್ರದೇಶಕ್ಕೆ ಬರಲಿದ್ದು, ಶುಕ್ರವಾರ ಸಕಲ ಸರ್ಕಾರಿ ಗೌರವದೊಂದಿಗೆ ಅಂತ್ಯಕ್ರಿಯೆ ನಡೆಯುವ ಸಾಧ್ಯತೆ ಇದೆ.