ETV Bharat / bharat

ಸಿಎಂ ಜಗನ್​ ವಿರುದ್ಧ 11 ಕೇಸ್​ ದಾಖಲು ಮಾಡಿದ ಆಂಧ್ರ ಹೈಕೋರ್ಟ್​​

ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನ್ ಮೋಹನ್​ ರೆಡ್ಡಿ ವಿರುದ್ಧ ಹೈಕೋರ್ಟ್​ನಲ್ಲಿ ಸ್ವಯಂ ಪ್ರೇರಿತವಾಗಿ 11 ಕೇಸ್​ ದಾಖಲಾಗಿವೆ.

CM Jagan
CM Jagan
author img

By

Published : Jun 24, 2021, 3:34 PM IST

ವಿಜಯವಾಡ(ಆಂಧ್ರಪ್ರದೇಶ): ಮುಖ್ಯಮಂತ್ರಿ ವೈಎಸ್​​​ ಜಗನ್​ ಮೋಹನ್​ ರೆಡ್ಡಿ ವಿರುದ್ಧ ಆಂಧ್ರಪ್ರದೇಶ ಹೈಕೋರ್ಟ್​ ಸ್ವಯಂ ಪ್ರೇರಿತವಾಗಿ 11 ಪ್ರಕರಣ Suo Moto ದಾಖಲು ಮಾಡಿಕೊಂಡಿದೆ. ಜಗನ್​ ಮೋಹನ್​​ ರೆಡ್ಡಿ ಈ ಹಿಂದೆ(2016) ಪ್ರತಿಪಕ್ಷದಲ್ಲಿದ್ದ ಸಂದರ್ಭದಲ್ಲಿ ನ್ಯಾಯಾಲಯದ ಬಗ್ಗೆ ಮಾಡಿದ್ದ ಕೆಲವೊಂದು ಕಮೆಂಟ್ಸ್​​ಗಳ ಆಧಾರದ ಮೇಲೆ ಈ ಕೇಸ್​ ದಾಖಲಾಗಿವೆ.

Andhra Pradesh High Court
ಆಂಧ್ರಪ್ರದೇಶ ಹೈಕೋರ್ಟ್​​

ಇದರ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ಕಣ್ಣಂಗೇಟಿ ಲಲಿತಾ, ಪೊಲೀಸರಿಗೆ ನೋಟಿಸ್​ ಜಾರಿ ಮಾಡುವುದನ್ನ ತಪ್ಪಿಸಿದ್ದಾರೆ. ಆದರೆ ಹೈಕೋರ್ಟ್​ನ ಆಡಳಿತಾತ್ಮಕ ಸಮಿತಿಯ ಶಿಫಾರಸಿನ ಮೇರೆಗೆ ಸ್ವಯಂ ಪ್ರೇರಿತ ಕೇಸ್ ದಾಖಲಿಸಿಕೊಳ್ಳಲಾಗಿದೆ. ವಿಪಕ್ಷದಲ್ಲಿದ್ದ ಸಂದರ್ಭದಲ್ಲಿ ಜಗನ್​ ಮೋಹನ್​​ ಅಡ್ವೊಕೇಟ್ ಜನರಲ್ ಸುಬ್ರಮಣ್ಯಂ ಶ್ರೀರಾಮ್ ವಿರುದ್ಧ ಹಾಗೂ ನ್ಯಾಯಾಲಯದ ಕುರಿತು ಕಮೆಂಟ್​ ಮಾಡಿದ್ದರು.

ಇದನ್ನೂ ಓದಿರಿ: Bigg Boss Kannada: ಸುದೀಪ್​ ಮುಂದೆ ಹೇಳಿದ ಮಾತು ಮರೆತು ಈ ಕೆಲಸ ಮಾಡಿದ ಪಾವಗಡ!

2016ರಲ್ಲಿ ವೈಎಸ್​ಆರ್​ ಜಗನ್​ ಪ್ರತಿಪಕ್ಷದಲ್ಲಿದ್ದರು. ಈ ವೇಳೆ ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿದ್ದರು. ಈ ವೇಳೆ ಅಮರಾವತಿ ಭೂ ಹಗರಣ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಜಗನ್​ ಕೆಲವು ಟೀಕೆ ಮಾಡಿದ್ದರು.

ಹೀಗಾಗಿ ಅವರ ವಿರುದ್ಧ ಅನಂತಪುರ ಮತ್ತು ಗುಂಟೂರು ಜಿಲ್ಲೆಗಳಲ್ಲಿ ಕೆಲವೊಂದು ಪ್ರಕರಣ ದಾಖಲಾಗಿದ್ದವು. ಇದರ ಪರಿಶೀಲನೆ ನಡೆಸಿದ್ದ ಪೊಲೀಸರು ಇದೀಗ ಅಂತಿಮ ವರದಿ ಸಲ್ಲಿಕೆ ಮಾಡಿದ್ದಾರೆ. ಇದಾದ ಬಳಿಕ ಕೆಳ ನ್ಯಾಯಾಲಯಗಳಲ್ಲಿ ಪ್ರಕರಣಗಳನ್ನ ಮುಚ್ಚಿಹಾಕಲಾಗಿತ್ತು.

ಆದರೆ ಇದೀಗ ಹೈಕೋರ್ಟ್​ ಖುದ್ದಾಗಿ ಪ್ರಕರಣ ದಾಖಲು ಮಾಡಿಕೊಂಡಿದೆ. ಐಪಿಸಿ ಸೆಕ್ಷನ್​​ 397, 401, 482 ಮತ್ತು 483 ರ ಅಡಿಯಲ್ಲಿ ಅಧಿಕಾರ ಬಳಕೆ ಮಾಡಿಕೊಂಡು ಸುಮೊಟು ಪ್ರಕರಣ ದಾಖಲಾಗಿವೆ. ನ್ಯಾಯಾಂಗ ವ್ಯವಸ್ಥೆ ಇತಿಹಾಸದಲ್ಲೇ ಇದೇ ಮೊದಲ ಸಲ ಆಡಳಿತಾತ್ಮಕ ನಿರ್ಧಾರ ಆಧರಿಸಿ ಸುಮೊಟು ಪ್ರಕರಣ ದಾಖಲು ಮಾಡಲಾಗಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.