ಕ್ರೀಡಾಂಗಣಕ್ಕಿಳಿದು ಕ್ರಿಕೆಟ್ ಬ್ಯಾಟ್ ಹಿಡಿದ ಆಂಧ್ರ ಸಿಎಂ ಜಗನ್ - ಜಗನ್ ಕ್ರಿಕೆಟ್
ಆಂಧ್ರದ ಕಡಪ ಜಿಲ್ಲೆಯ ರಾಜಾ ರೆಡ್ಡಿ ಸ್ಟೇಡಿಯಂನಲ್ಲಿ ಸಿಎಂ ಜಗನ್ ಮೋಹನ್ ರೆಡ್ಡಿ ಸ್ವಲ್ಪ ಹೊತ್ತು ಕ್ರಿಕೆಟ್ ಆಡಿ ರಾಜಕೀಯ ಚಟುವಟಿಕೆಯಿಂದ ನಿರಾಳರಾದರು.

ಕ್ರೀಡಾಂಗಣಕ್ಕಿಳಿದು ಕ್ರಿಕೆಟ್ ಬ್ಯಾಟ್ ಹಿಡಿದ ಆಂಧ್ರ ಸಿಎಂ ಜಗನ್ ರಿಲೀಫ್
ಕಡಪ(ಆಂಧ್ರಪ್ರದೇಶ): ಹಲವಾರು ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲು ಕಡಪ ಜಿಲ್ಲೆಗೆ ಆಗಮಿಸಿದ್ದ ಸಿಎಂ ಜಗನ್ ಮೋಹನ್ ರೆಡ್ಡಿ, ಅಲ್ಲಿನ ಕ್ರೀಡಾಂಗಣದಲ್ಲಿ ಸ್ವಲ್ಪ ಹೊತ್ತು ಕ್ರಿಕೆಟ್ ಆಟವಾಡಿ ಖುಷಿ ಪಟ್ಟರು.
ಕ್ರಿಕೆಟ್ ಬ್ಯಾಟ್ ಹಿಡಿದ ಜಗನ್
ಜಗನ್ ಕ್ರಿಕೆಟ್ ಆಡಿದ್ದನ್ನು ಹಲವು ಅಧಿಕಾರಿಗಳು ಮತ್ತು ರಾಜಕಾರಣಿಗಳು ವೀಕ್ಷಿಸಿದ್ದು, ಹುರಿದುಂಬಿಸಿದ್ದಾರೆ. ಆಟದ ವೇಳೆ ಮೊದಲನೇ ಎಸೆತಕ್ಕೆ ಸ್ವಲ್ಪ ಮುಜುಗರವಾದಂತೆ ಕಂಡರೂ, ನಂತರ ನೋಡುಗರ ಒತ್ತಾಯಕ್ಕೆ ಎರಡನೇ ಎಸೆತವನ್ನು ಅವರು ಎದುರಿಸಿದ್ದಾರೆ.

ಕ್ರಿಕೆಟ್ ಆಡಿದ ನಂತರ ಬ್ಯಾಟ್ ಮತ್ತು ಚೆಂಡಿನ ಮೇಲೆ ತಮ್ಮ ಹಸ್ತಾಕ್ಷರ ಹಾಕಿರುವ ಜಗನ್ ಅದನ್ನು ಸ್ಟೇಡಿಯಂನ ಅಧಿಕಾರಿಗಳಿಗೆ ನೀಡಿದ್ದಾರೆ. ರಾಜಾ ರೆಡ್ಡಿ ಸ್ಟೇಡಿಯಂನಲ್ಲಿ ಜಗನ್ ಕ್ರಿಕೆಟ್ ಆಡಿದ್ದು, ಕ್ರೀಡಾಂಗಣದ ಅಭಿವೃದ್ಧಿ ಕಾಮಗಾರಿಗೂ ಚಾಲನೆ ನೀಡಿದ್ದಾರೆ.
