ಅಮರಾವತಿ (ಆಂಧ್ರಪ್ರದೇಶ): ರಾಜ್ಯದಲ್ಲಿ ಶೈಕ್ಷಣಿಕ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಿಎಂ ವೈ.ಎಸ್.ಜಗನ್ಮೋಹನ್ ರೆಡ್ಡಿ ಕೆಲ ಮಹತ್ವದ ನಿರ್ಧಾರಗಳನ್ನು ತೆಗೆದುಕೊಂಡಿದ್ದಾರೆ. ಒಂದು ಕಿಲೋ ಮೀಟರ್ಗೆ ಒಂದು ಪೂರ್ವ ಪ್ರಾಥಮಿಕ ಹಾಗೂ ಪ್ರಾಥಮಿಕ ಶಾಲೆ (Foundational Scool) ಗಳನ್ನು ತೆರೆಯುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
ಪೂರ್ವ-ಪ್ರಾಥಮಿಕ (ಅಂಗನವಾಡಿ ಕೇಂದ್ರ), 1 ಮತ್ತು 2 ತರಗತಿಗಳನ್ನು ವಿಲೀನಗೊಳಿಸುವ ಮೂಲಕ ಚಟುವಟಿಕೆ ಆಧಾರಿತ ಶಾಲೆಗಳನ್ನು ತೆರೆಯಲು ಸಿಎಂ ತಿಳಿಸಿದ್ದಾರೆ.
ಈ ಯೋಜನೆ ಮಗುವಿನ ಶೈಕ್ಷಣಿಕ ಕಲಿಕೆಗೆ ಸಹಾಯ ಮಾಡುತ್ತದೆ. ಈ ಶಾಲೆಗಳು ಪ್ರತಿ ಒಂದು ಕಿಲೋ ಮೀಟರ್ಗೆ ಒಂದರಂತೆ ಇರಬೇಕು. ಪ್ರೌಢಶಾಲೆಗಳು ಪ್ರತಿ 3 ಕಿಲೋ ಮೀಟರ್ಗೆ ಒಂದರಂತೆ ಇರಬೇಕು. ಪ್ರಾಥಮಿಕ ಶಾಲೆಯಲ್ಲಿ 3 ರಿಂದ 8 ವರ್ಷದೊಳಗಿನ ಮಕ್ಕಳಿಗೆ ಶಿಕ್ಷಣ ನೀಡಲಾಗುವುದು ಎಂದು ಸಿಎಂ ತಿಳಿಸಿದ್ದಾರೆ.
ರಾಜ್ಯ ಮಹಿಳಾ ಮತ್ತು ಮಕ್ಕಳ ಕಲ್ಯಾಣ ವಿಭಾಗದ ನಿರ್ದೇಶಕಿ ಕೃತಿಕಾ ಶುಕ್ಲಾ ಮಾತನಾಡಿ, ಮಗುವಿನ ಸಂಚಿತ ಮಿದುಳಿನ ಬೆಳವಣಿಗೆಯು ಶೇಕಡಾ 85 ರಷ್ಟು ಆರು ವರ್ಷಕ್ಕಿಂತ ಮೊದಲೇ ವೃದ್ಧಿಗೊಳ್ಳುತ್ತದೆ.
ಭಾಷೆ, ಸಂಖ್ಯಾಶಾಸ್ತ್ರ ಮತ್ತು ಅರಿವಿನ ಸಾಮರ್ಥ್ಯಗಳ ವಿಷಯದಲ್ಲಿ ಕಲಿಕೆಯ ಹಂತವನ್ನು ಪೂರ್ವ - ಪ್ರಾಥಮಿಕ, 1 ಮತ್ತು 2 ನೇ ತರಗತಿಯಲ್ಲಿ ಪರಿಚಯಿಸಬೇಕು. ಮಗು 2 ನೇ ತರಗತಿಯನ್ನು ಪೂರ್ಣಗೊಳಿಸಿದ ನಂತರ, ಅವರನ್ನು ಹತ್ತಿರದ ಪ್ರಾಥಮಿಕ ಶಾಲೆಗಳು ಮತ್ತು ಪ್ರೌಢ ಶಾಲೆಗಳಿಗೆ ವರ್ಗಾಯಿಸಲಾಗುತ್ತದೆ. ಈ ನಿಟ್ಟಿನಲ್ಲಿ ಉನ್ನತ ಪ್ರಾಥಮಿಕ ಶಾಲೆಯನ್ನು ಪ್ರೌಢ ಶಾಲೆಗಳಾಗಿ ಪರಿವರ್ತಿಸುವಲ್ಲಿ ಮುಖ್ಯಮಂತ್ರಿ ಪ್ರಮುಖ ನಿರ್ಧಾರ ಕೈಗೊಂಡಿದ್ದಾರೆ.
ನಾಡು-ನೆಡು, ವೈಎಸ್ಆರ್ ಸಂಪೂರ್ಣ ಪೋಷಣ ಮತ್ತು ಈಗ ವೈಎಸ್ಆರ್ ಪ್ರಿ ಪ್ರೈಮರಿ ಶಾಲೆಗಳ ಅಡಿಯಲ್ಲಿ ಈ ಯೋಜನೆ ಪರಿಚಯಿಸಿದ್ದಾರೆ.