ಚೆನ್ನೈ/ ವಿಜಯವಾಡ : ಮ್ಯಾಂಡೌಸ್ ಚಂಡಮಾರುತದ ಪರಿಣಾಮದ ರಾಜ್ಯದಲ್ಲೆಡೆ ದಟ್ಟ ಚಳಿ ವಾತಾವರಣ ಮೂಡಿದ್ದು, ಕರಾವಳಿ ಮತ್ತು ರಾಯಲಸೀಮೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದೆ.
ನೆಲ್ಲೂರು ಜಿಲ್ಲೆಯ ಮುಥುಕುರ್ ಮಂಡಲ್ನ ಬ್ರಹ್ಮನ್ದೇವಂನಲ್ಲಿ 125.75ಎಂಎಂ ದಾಖಲೆ ಮಳೆಯಾಗಿದ್ದು, ನೆಲ್ಲೂರು ಜಿಲ್ಲೆಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ಕರಾವಳಿ ಪ್ರದೇಶ ಪ್ರಕ್ಷಬ್ದವಾಗಿದ್ದು, ಮೈಪಾಡು ಕಡಲ ತೀರದಲ್ಲಿ ಭಾರೀ ಅಲೆಗಳು ಏಳುತ್ತಿವೆ. ಭಾರಿ ಗಾಳಿಗೆ ಅಂಗಡಿಗಳು ಧರೆಗುರುಳಿದೆ.
ಅನಂತಸಾಗರಂ, ಛಸೆರ್ಲಾ, ಅತ್ಮಕುರು ಮತ್ತು ಸಂಗಂನಲ್ಲಿ ಜಿಲ್ಲಾಧಿಕಾರಿಗಳು ಕಟ್ಟೆಚ್ಚರ ಘೋಷಿಸಿದ್ದಾರೆ. ಚಂಡಮಾರತದ ಹಿನ್ನಲೆ ಕರಾವಳಿ ತೀರದ ಸಂತ್ರಸ್ತರಿಗೆ ತಾತ್ಕಲಿಕ ಆಶ್ರಯ ನಿರ್ಮಾಣ ಮಾಡಲಾಗಿದೆ. ಜಿಲ್ಲೆಯಲ್ಲಿ ಒಂದು ಎಸ್ಡಿಆರ್ಎಫ್ ಮತ್ತು ಎರಡು ಎನ್ಡಿಆರ್ಎಫ್ ತಂಡ ಬೀಡುಬಿಟ್ಟಿದೆ.
ಸೋಮಶೈಲ ಅಣೆಕಟ್ಟಿನಿಂದ ಪೆನ್ನಾ ನದಿಗೆ 20 ಸಾವಿರ ಕ್ಯೂಸೆಕ್ ನೀರನ್ನು ಬೀಡಲಾಗಿದೆ. ಕಂದಾಯ ಮತ್ತು ಪೊಲೀಸರ ತಂಡಗಳನ್ನು ಮುಂಜಾಗ್ರತೆ ಕ್ರಮಕ್ಕಾಗಿ ರಚಿಸಲಾಗಿದೆ.
ತಿರುಮಲದಲ್ಲೂ ಮ್ಯಾಂಡೌಸ್ ಚಂಡಮಾರುತದ ಅಬ್ಬರ ಹೆಚ್ಚಿದ್ದು, ಭಾರಿ ಮಳೆಯಿಂದ ಭಕ್ತರು ಪರದಾಡುವಂತೆ ಆಗಿದೆ. ಭಾರಿ ಚಳಿ ಮಳೆಯಿಂದಾಗಿ ದರ್ಶನಕ್ಕೆ ಬಂದ ವಯಸ್ಸಾದವರು ಮತ್ತು ಮಕ್ಕಳು ನಡುಗಿದ್ದಾರೆ.
ಚಂಡಮಾರುತ ಪರಿಣಾಮ ಕಡಪದಲ್ಲೂ ಭಾರಿ ಮಳೆಯಾಗುತ್ತಿದ್ದು, ಜಿಲ್ಲೆಯ ಕೆರೆ ಮತ್ತು ಕಾಲುವೆಗಳ ಬಗ್ಗೆ ಹೆಚ್ಚಿನ ಗಮನವಹಿಸುವಂತೆ ಅಧಿಕಾರಿಗಳಿಗೆ ಡಿಸಿ ಸೂಚನೆ ನೀಡಿದ್ದಾರೆ. ರಾಯಲಸೀಮಾ ಮತ್ತು ದಕ್ಷಿಣ ಕರಾವಳಿಯಲ್ಲೂ ಇಂದು ಚಂಡಮಾರುತದ ಪರಿಣಾಮ ಕಾಣಬಹುದಾಗಿದೆ.
ಈಗಷ್ಟೇ ಭತ್ತದ ಕೊಯ್ಲು ಮಾಡಿದ್ದ ರೈತರಿಗೆ ಮಳೆ ಸಂಕಷ್ಟ ತಂದೊಡ್ಡಿದೆ. ಒಣಗಿದ ಧಾನ್ಯಗಳ ರಕ್ಷಣೆಗಾಗಿ ಹರಸಾಹಸ ಮಾಡುತ್ತಿದ್ದು, ಹಾನಿಯಾಗುವ ಭೀತಿಯಲ್ಲಿದ್ದಾರೆ.
ಇದನ್ನೂ ಓದಿ: ಮ್ಯಾಂಡೌಸ್ ಚಂಡಮಾರುತ: ಬೆಂಗಳೂರಲ್ಲಿ ಜಿಟಿಜಿಟಿ ಮಳೆ, ಬಾಗಲಕೋಟೆಯಲ್ಲಿ ಅತೀ ಕನಿಷ್ಠ ಉಷ್ಣಾಂಶ ದಾಖಲು