ಅಮರಾವತಿ (ಆಂಧ್ರಪ್ರದೇಶ): ಸರ್ಕಾರದ ಮಾರ್ಗಸೂಚಿಗಳ ಪ್ರಕಾರ ಔಷಧಿಯನ್ನು ವಿತರಿಸಲಾಗುವುದು ಎಂದು ಆಯುರ್ವೇದ ವೈದ್ಯ ಆನಂದಯ್ಯ ಪ್ರತಿಕ್ರಿಯೆ ನೀಡಿದ್ದಾರೆ. ನೆಲ್ಲೂರು ಜಿಲ್ಲೆಯ ಅಧಿಕಾರಿಗಳೊಂದಿಗೆ ಔಷಧಿ ವಿತರಣೆ ಕುರಿತು ಆನಂದಯ್ಯ ಸಭೆ ನಡೆಸಿದರು.
ಶೀಘ್ರದಲ್ಲೇ ಕಚ್ಚಾವಸ್ತುಗಳನ್ನು ಸಿದ್ಧಪಡಿಸಿಕೊಂಡು ಎರಡು ಮೂರು ದಿನಗಳಲ್ಲಿ ಔಷಧಿ ತಯಾರಿಕೆಯನ್ನು ಪ್ರಾರಂಭಿಸಲಾಗುವುದು. ಮೆಡಿಸಿನ್ ತಯಾರಿಕೆಗೆ ಸಹಾಯ ಮಾಡಲು ಅನೇಕರು ಬರುತ್ತಿದ್ದಾರೆ. ಉತ್ಪಾದನಾ ಪ್ರಕ್ರಿಯೆ ಪೂರ್ಣಗೊಂಡ ನಂತರ, ಸೋಮವಾರದಿಂದ ಔಷಧಿ ವಿತರಿಸಲಾಗುವುದು ಎಂದರು.
ಇದನ್ನೂ ಓದಿ: ಆನಂದಯ್ಯ ಕೋವಿಡ್ ಔಷಧಕ್ಕೆ ಆಂಧ್ರ ಸರ್ಕಾರ ಅನುಮೋದನೆ
ಆನ್ಲೈನ್ ಮೂಲಕ ಔಷಧಿ ವಿತರಣೆ
ಈ ಔಷಧಿಯನ್ನು ಆನ್ಲೈನ್ ಮೂಲಕ ವಿತರಿಸಲು ಆಂಧ್ರ ಸರ್ಕಾರ ಕ್ರಮ ಕೈಗೊಂಡಿದೆ. ಕೊರೊನಾ ನಿಯಮಗಳನ್ನು ಅನುಸರಿಸಿ, ಸರ್ಕಾರದ ಸೂಚನೆಯಂತೆ ಮೆಡಿಸಿನ್ ವಿತರಿಸುತ್ತೇವೆ. ಯಾರೂ ನೇರವಾಗಿ ಆನಂದಯ್ಯನವರಿಂದ ಔಷಧಿ ಪಡೆಯಲು ಅವಕಾಶವಿಲ್ಲ. ಆರ್ಡರ್ ಮಾಡಿದರೆ, ನೀವು ಸೂಚಿಸಿದ ಪ್ರದೇಶಕ್ಕೆ ಔಷಧಿ ವಿತರಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಆನಂದಯ್ಯ ಕೊರೊನಾ ಮೆಡಿಸಿನ್ಗೆ ಆಂಧ್ರ ಹೈಕೋರ್ಟ್ ಗ್ರೀನ್ ಸಿಗ್ನಲ್