ETV Bharat / bharat

ಏಕಕಾಲಕ್ಕೆ 15 ಜನರ ಚಿತ್ರಿಸುವ ಪವಾಡ ಕಲಾವಿದೆ: ಆನಂದ್​ ಮಹೀಂದ್ರಾ ವಿಡಿಯೋ ಸುಳ್ಳೆಂದ ನೆಟ್ಟಿಗರು

author img

By

Published : Oct 27, 2022, 10:25 PM IST

ಉದ್ಯಮಿ ಆನಂದ್​ ಮಹೀಂದ್ರಾ ಅವರು ಟ್ವಿಟ್ಟರ್​ನಲ್ಲಿ ಹಂಚಿಕೊಂಡಿರುವ ಚಿತ್ರ ಕಲಾವಿದೆಯ ವಿಡಿಯೋವೊಂದು ವೈರಲ್​ ಆಗಿದೆ. ಇದರಲ್ಲಿ ಆಕೆ 15 ಮಹನೀಯರ ಚಿತ್ರವನ್ನು ಏಕಕಾಲಕ್ಕೆ ಚಿತ್ರಿಸುತ್ತಾಳೆ. ಆದರೆ, ಸುಳ್ಳು ಎಂದು ನೆಟ್ಟಿಗರು ವಾದಿಸಿದ್ದಾರೆ.

painter Drawing 15 picture at a time
ಏಕಕಾಲಕ್ಕೆ 15 ಜನರ ಚಿತ್ರಿಸುವ ಪವಾಡ ಕಲಾವಿದೆ

ನವದೆಹಲಿ: ಉಕ್ಕಿನ ಮನುಷ್ಯ ಸರ್ದಾರ್​ ವಲ್ಲಭಬಾಯಿ ಪಟೇಲ್​, ಗಾಂಧೀಜಿ, ಅಂಬೇಡ್ಕರ್​, ಭಗತ್​ ಸಿಂಗ್ ಸೇರಿದಂತೆ 15 ಮಹನೀಯರ ಚಿತ್ರವನ್ನು ಏಕಕಾಲದಲ್ಲಿ ಒಂದೇ ಹಾಳೆಯ ಮೇಲೆ ಚಿತ್ರ ಬಿಡಿಸುವ ಪ್ರಚಂಡ ಕಲಾವಿದೆಯ ವಿಡಿಯೋ ಈಚೆಗೆ ಭಾರಿ ವೈರಲ್​ ಆಗಿದೆ. ಇದನ್ನು ಉದ್ಯಮಿ ಆನಂದ್​ ಮಹೀಂದ್ರಾ ಅವರು ಟ್ವೀಟ್​ ಮಾಡಿ ಶೇರ್​ ಮಾಡಿದ್ದು, ಈ ಪವಾಡ ಚಿತ್ರಕಲಾವಿದೆಗೆ ನೆರವು ನೀಡಲು ನಾನು ಸಿದ್ಧ ಎಂದು ಹೇಳಿದ್ದರು. ಆದರೆ, ಈ ಚಿತ್ರಕಲಾವಿದೆಯ ಅಸ್ತಿತ್ವವೇ ಸುಳ್ಳು ಎಂದು ನೆಟ್ಟಿಗರು ಆರೋಪಿಸಿದ್ದಾರೆ.

ಏನಿದು ವಿಚಿತ್ರ ವಿಡಿಯೋ?: ನೂರ್​ ಜಹಾನ್​ ಆರ್ಟಿಸ್ಟ್​ ಎಂಬ ಹೆಸರಿನ ಯೂಟ್ಯೂಬ್​ ಚಾನಲ್​ನಲ್ಲಿನ ವಿಡಿಯೋ ಈಗ ಎಲ್ಲೆಡೆ ವೈರಲ್​ ಆಗಿದೆ. ಚಿತ್ರ ಕಲಾವಿದೆಯ ಹೆಸರು ನೂರ್​ಜಹಾನ್​ ಎಂದು ಹೇಳಲಾಗಿದೆ. ಈಕೆ ಕಟ್ಟಿಗೆಯ ಸಹಾಯದಿಂದ 15 ಪೆನ್​ಗಳನ್ನು ಸಮಾನಾಂತರವಾಗಿ ಕಟ್ಟಿ ಒಂದೇ ಹಾಳೆಯಲ್ಲಿ ಸ್ವಾತಂತ್ರ್ಯ ಹೋರಾಟಗಾರರು, ರಾಜ, ರಾಣಿಯರು ಸೇರಿದಂತೆ 15 ಜನರ ಚಿತ್ರವನ್ನು ಏಕಕಾಲಕ್ಕೆ ಬಿಡಿಸುತ್ತಾಳೆ.

  • How is this even possible?? Clearly she’s a talented artist. But to paint 15 portraits at once is more than art—it’s a miracle! Anyone located near her who can confirm this feat? If valid, she must be encouraged & I’d be pleased to provide a scholarship & other forms of support. pic.twitter.com/5fha3TneJi

    — anand mahindra (@anandmahindra) October 27, 2022 " class="align-text-top noRightClick twitterSection" data=" ">

ಇದು ನಂಬಲು ಅಸಾಧ್ಯವಾದರೂ ವ್ಯಕ್ತಿಯೊಬ್ಬ ವಿಡಿಯೋವನ್ನು ಹಿನ್ನೆಲೆ ಹೇಳಿಕೆಯಲ್ಲಿ ವಿವರಿಸುತ್ತಾನೆ. ಈಕೆಯ ಭಾರತ ಒಂದು ಕುಗ್ರಾಮದ ಬಡ ಬುದ್ಧಿವಂತೆಯಾಗಿದ್ದಾಳೆ. ಈ ವಿಡಿಯೋವನ್ನು ಸಾಧ್ಯವಾದಷ್ಟು ಪಸರಿಸಿ ಮಾಡಿ ಎಂದು ಕೇಳಿಕೊಳ್ಳುತ್ತಾನೆ.

ಇದನ್ನು ಉದ್ಯಮಿ ಆನಂದ್ ಮಹೀಂದ್ರಾ ತಮ್ಮ ಟ್ವೀಟ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಈ ರೀತಿ ಚಿತ್ರಿಸಲು ಹೇಗೆ ಸಾಧ್ಯ? ಒಂದೇ ಬಾರಿಗೆ 15 ಭಾವಚಿತ್ರಗಳನ್ನು ಚಿತ್ರಿಸುವುದು ನಿಜಕ್ಕೂ ಪವಾಡವೇ ಸರಿ. ಇದನ್ನು ಯಾರಾದರೂ ದೃಢೀಕರಿಸಬಹುದೇ? ಮಾನ್ಯವಾಗಿದ್ದರೆ ಆಕೆಯನ್ನು ಪ್ರೋತ್ಸಾಹಿಸಬೇಕು. ವಿದ್ಯಾರ್ಥಿವೇತನ ಸೇರಿದಂತೆ ಇತರ ಬೆಂಬಲವನ್ನು ಒದಗಿಸಲು ನಾನು ಇಚ್ಚಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ವಿಡಿಯೋ ಸುಳ್ಳು ಎಂದ ನೆಟ್ಟಿಗರು: ಗಿನ್ನೆಸ್ ರೆಕಾರ್ಡ್ಸ್‌ನಲ್ಲಿ ಈ ವಿಡಿಯೋ ದಾಖಲಾಗಿದೆ ಎಂದು ಹೇಳಲಾದ ಈ ವಿಡಿಯೋ ಸುಳ್ಳು ಎಂದು ನೆಟ್ಟಿಗರು ವಾದಿಸಿದ್ದಾರೆ. ಈ ಬಗ್ಗೆ ಯಾವುದೇ ಅಧಿಕೃತ ದಾಖಲೆಗಳಲ್ಲ. ನಾನು ಗಿನ್ನೆಸ್ ವರ್ಲ್ಡ್ ರೆಕಾರ್ಡ್‌ನಲ್ಲಿ ಈ ಹೆಸರನ್ನು ಚೆಕ್ ಮಾಡಿದ್ದು, ಅಲ್ಲಿಲ್ಲ ಎಂದು ಯೂಟ್ಯೂಬ್ ಬಳಕೆದಾರರು ತಿಳಿಸಿದ್ದಾರೆ.

ಏಕಕಾಲದಲ್ಲಿ 15 ಚಿತ್ರಗಳನ್ನು ಬಿಡಿಸುವ ವಿಡಿಯೋದ ಸತ್ಯಾಸತ್ಯತೆಯನ್ನು ಪ್ರಶ್ನಿಸುವ ಜನರಿರುವಂತೆ, ಅದನ್ನು ನಂಬುವವರೂ ಅಷ್ಟೇ ಪ್ರಮಾಣದಲ್ಲಿದ್ದಾರೆ ಎಂದು ವ್ಯಂಗ್ಯವಾಗಿ ಇನ್ನೊಬ್ಬರು ಬರೆದಿದ್ದಾರೆ. ಇನ್ನೊಬ್ಬ ಬಳಕೆದಾರ "ವಾಹ್..ವಾಟ್ ಎ ಎಡಿಟಿಂಗ್ ಎಂದಿದ್ದಾರೆ.

ಇನ್ನೂ ಕುತೂಹಲಕಾರಿಯಾಗಿ ವಿಷಯವೆಂದರೆ ನೂರ್​ಜಹಾನ್ ಅವರ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಈ ವಿಡಿಯೋವೇ ಇಲ್ಲ ಎಂದು ಮತ್ತೊಬ್ಬ ಬಳಕೆದಾರರು ಬರೆದಿದ್ದಾರೆ. ಇದು ಪ್ರತಿಭೆ ಅಲ್ಲ. ವಂಚನೆ. ಚಿತ್ರಗಳನ್ನು ಒಟ್ಟಾಗಿ ಮೊದಲೇ ಜೋಡಿಸಿದ್ದು, ವಿಡಿಯೋ ವೇಗವಾಗಿ ಚಲಿಸುತ್ತಿರುವ ಕಾರಣ ಅದರ ವಂಚನೆ ಕಾಣುತ್ತಿಲ್ಲ ಎಂದು ಇನ್ನೊಬ್ಬರು ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಸಾಲ ತೀರಿಸಲು ಬಾಲಕಿಯರ ಹರಾಜು, ತಾಯಂದಿರ ಮೇಲೆ ಅತ್ಯಾಚಾರ: ಇದು ಜಾತಿ ಪಂಚಾಯತ್​ಗಳ ವಿಕೃತಿ!

ETV Bharat Logo

Copyright © 2024 Ushodaya Enterprises Pvt. Ltd., All Rights Reserved.