ETV Bharat / bharat

ಸಾಂಕ್ರಾಮಿಕದಂತೆ ಆಗಿರುವ ಬೀದಿ ನಾಯಿ ಹಾವಳಿ: ಇದಕ್ಕೆ ಹೊಣೆ ಯಾರು? - ಭೀಕರ ದಾಳಿ ಆತಂಕದಲ್ಲಿ ಜನರಿದ್ದರಾರೆ

ಬೀದಿ ನಾಯಿಗಳ ಹಾವಳಿಗಳಿಂದ ಮಕ್ಕಳು ಸಾವನ್ನಪ್ಪುತ್ತಿರುವ ಪ್ರಕರಣಗಳು ನಡೆಯುತ್ತಲೇ ಇದೆ. ನಾಯಿಗಳ ಹಾವಳಿ ಕಡಿಮೆ ಮಾಡಲು ತೆಗೆದುಕೊಳ್ಳುವ ಕ್ರಮದಲ್ಲಿ ಯಾರು ಎಡವುತ್ತಿದ್ದಾರೆ ಎಂಬುದು ತಿಳಿಯದಂತೆ ಆಗಿದೆ

an-epidemic-of-stray-dogs-who-is-responsible-for-this

author img

By

Published : Mar 4, 2023, 4:01 PM IST

ಹೈದರಾಬಾದ್​: ಇಲ್ಲಿನ ಅಂಬರ್​​ಪೇಟೆ ಪ್ರದೇಶದಲ್ಲಿ ಬೀದಿನಾಯಿ ಹಾವಳಿಗೆ 4 ವರ್ಷದ ಬಾಲಕ ಸಾವನ್ನಪ್ಪಿದ ವಿಚಾರ ಇಂದಿಗೂ ಅನೇಕರಿಗೆ ಭಯ ಮೂಡಿಸುತ್ತದೆ. ಇದಾದ ಬಳಿಕ ನಗರ ಮತ್ತು ರಸ್ತೆಗಳಲ್ಲಿ ಬೀದಿ ನಾಯಿಗಳ ಹಾವಳಿ ಮುಂದುವರೆದಿದ್ದು, ಅನೇಕ ಕಡೆ ನಾಯಿಗಳ ಭೀಕರ ದಾಳಿ ಆತಂಕದಲ್ಲಿ ಜನರಿದ್ದರಾರೆ ಎಂಬುದು ಸುಳ್ಳಲ್ಲ.

ಸಾಂಕ್ರಾಮಿಕದಂತೆ ಆಗುತ್ತಿರುವ ನಾಯಿ ಹಾವಳಿ ವಿಚಾರದಲ್ಲಿ ಮೂಡುವ ಪ್ರಶ್ನೆ ಎಂದರೆ, ಯಾಕೆ ಈ ಬಗ್ಗೆ ನಗರದ ಅಧಿಕಾರಿಗಳು ಕಾಳಜಿ ಹೊಂದಿಲ್ಲ ಎಂಬುದಾಗಿದೆ. ಯಾಕೆ ಈ ಬೀದಿ ನಾಯಿಗಳ ಸಂಖ್ಯೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಯಲು ಬಿಡುತ್ತಿದ್ದಾರೆ ಎಂಬುದು. ಈ ಬೀದಿ ನಾಯಿಗಳ ಸಮಸ್ಯೆಗಳನ್ನು ಎದುರಿಸುತ್ತಿರುವ ಬಗ್ಗೆ ಯಾಕೆ ಅಸಡ್ಡೆ ತೋರುತ್ತಿದ್ದಾರೆ ಎಂಬುದು ಆಗಿದೆ.

ಸಾರ್ವಜನಿಕರ ಕಾಳಜಿ ವಿಚಾರವಾಗಿರುವ ಇದರಲ್ಲಿ ಪರಿಹಾರವನ್ನು ಹುಡುಕುವ ಬದಲಾಗಿ ಕಾರ್ಪೊರೇಷನ್​​ಗಳು ಪರಸ್ಪರ ಆರೋಪ - ಪ್ರತ್ಯಾರೋಪ ಮಾಡುತ್ತಿದ್ದಾರೆ. ಸ್ಥಳೀಯರ ನಿರಾಸಕ್ತಿ, ನಿರ್ಲಕ್ಷ್ಯಗಳು ಈ ವಿಚಾರಕ್ಕೆ ಕಾರಣ ಎಂದರೆ, ಇತ್ತ ಅಧಿಕಾರಿಗಳು ನಾಯಿಗಳ ಹಾವಳಿ ತಡೆಗೆ ವಿವಿಧ ಸಮಸ್ಯೆಗಳ ಕಾರಣ ಹುಡುಕುತ್ತಿದ್ದಾರೆ.

ಸಂತಾನ ಹರಣಕ್ಕೆ ನಿಧಿ ಬಳಕೆ: ಉಳಿದ ವಿಚಾರಗಳಿಗೆ ಹೋಲಿಕೆ ಮಾಡಿದಾಗ ಸ್ಥಳೀಯ ಪ್ರತಿನಿಧಿಗಳು ಅಥವಾ ನಾಗರಿಕ ಮಂಡಳಿಗಳು ಈ ನಾಯಿ ಹಾವಳಿ ವಿಚಾರಕ್ಕೆ ಕಡಿಮೆ ಪ್ರಮಾಣದ ಪ್ರಾಮುಖ್ಯತೆಯನ್ನು ನೀಡುತ್ತಾರೆ. ಅವರ ಪ್ರಮುಖ ವಿಷಯಗಳು ಏನೇ ಇದ್ದರೂ ಅದು ರಸ್ತೆ, ಕುಡಿಯುವ ನೀರು, ಚರಂಡಿ, ಮೂಲ ಸೌಕರ್ಯ ಅಭಿವೃದ್ಧಿ ಸೇರಿದಂತೆ ಇನ್ನಿತರ ಅಂಶಗಳು ಆಗಿರುತ್ತದೆ. ಇನ್ನು ಬೀದಿ ನಾಯಿಗಳ ಹಾವಳಿ ತಡೆಗೆ ನೀಡಲಾದ ಅಂದರೆ ಬೀದಿನಾಯಿಗಳ ಸಂತಾನ ಹರಣಕ್ಕೆ ನಿಗದಿಸಲಾದ ನಿಧಿಯನ್ನು ಕಾಲ ಕಾಲಕ್ಕೆ ತೆಗೆದುಕೊಳ್ಳಬೇಕಿದ್ದು, ಇದರ ನಿಯಂತ್ರಣಕ್ಕೆ ಮುಂದಾಗಬೇಕಿದೆ.

ಈ ಸಮಸ್ಯೆಯನ್ನು ನಿರ್ಲಕ್ಷಿಸುವ ಬದಲಾಗಿ, ಬೀದಿ ನಾಯಿಗಳನ್ನು ಸಂತಾನ ಹರಣ ಚಿಕಿತ್ಸೆಗೆ ನಿರಂತರವಾಗಿ ಒಳಪಡಿಸುವುದರಿಂದ ನಾಯಿಗಳ ಸಂಖ್ಯೆ ಕಡಿಮೆಯಾಗಲಿದೆ ಎಂದು ಪಶು ವೈದ್ಯರು ತಿಳಿಸುತ್ತಾರೆ. ಒಮ್ಮೆ ಈ ಸಂಖ್ಯೆಯಲ್ಲಿ ಇಳಿಕೆ ಕಂಡು ಬಂದರೆ, ಆಕ್ರಮಣಕಾರಿ ಬೀದಿ ನಾಯಿಗಳ ಸಂಖ್ಯೆಯು ಇಳಿಕೆಯಾಗಲಿದೆ. ಈ ಮೂಲಕ ನಾಯಿ ಕಡಿತ ಪ್ರಕರಣವೂ ಶೂನ್ಯವಾಗಲಿದೆ.

ಅಮರ್ಪಕ ಸ್ಥಳಾಂತರ: ಬೀದಿ ನಾಯಿಗಳ ಪ್ರಕರಣಗಳು ಬೆಳಕಿಗೆ ಬಂದಾಕ್ಷಣ ಮಾಡುವ ಕೆಲಸ ಎಂದರೆ, ಆ ಬೀದಿಯಲ್ಲಿನ ನಾಯಿಗಳನ್ನು ಸೆರೆ ಹಿಡಿದು, ಅವುಗಳನ್ನು ಬೇರೆ ಸ್ಥಳಕ್ಕೆ ಕೊಂಡೊಯ್ದು ಬಿಡುವುದು. ಇದು ಸಮಸ್ಯೆಗೆ ಯಾವುದೇ ಕಾರಣಕ್ಕೆ ಪರಿಹಾರವಾಗಿರುವುದಿಲ್ಲ. ಬದಲಾಗಿ ಇದು ಹೆಚ್ಚುತ್ತದೆ. ಈ ಹಿನ್ನೆಲೆ ಇದಕ್ಕೆ ಪರ್ಯಾಯ ಕುರಿತು ಆಲೋಚಿಸಬೇಕಿದೆ.

ಕಳೆದ ಫೆ. 19ರಂದು ಅಂಬರ್​ಪೇಟ್​ನಲ್ಲಿ ನಾಲ್ಕು ವರ್ಷದ ಕಂದಮ್ಮನ ಮೇಲೆ ಬೀದಿ ನಾಯಿಗಳು ಹಾವಳಿ ಮಾಡಿ, ಮಗುವನ್ನು ಬಲಿ ತೆಗೆದುಕೊಂಡಿತ್ತು. ಈ ಘಟನೆಯ ಭೀಕರತೆ ಸಿಸಿಟಿವಿಯಲ್ಲೂ ಸೆರೆಯಾಗಿತ್ತು. ಆದರೆ, ಈ ರೀತಿಯ ಅನೇಕ ಘಟನೆಗಳು ಸಿಸಿಟಿವಿಯಲ್ಲಿ ಸೆರೆಯಾಗದೇ ಕಣ್ಮರೆಯಾಗುತ್ತದೆ. ಈ ಸಂಬಂಧ ಅಗತ್ಯ ಪ್ರಯತ್ನ ನಡೆಸಿ, ಪರಿಹಾರಕ್ಕೆ ಮುಂದಾಗದಿದ್ದರೆ, ಇದೇ ರೀತಿ ಘಟನೆಗಳಿ ಬೇರೆ ಕಡೆ ಮುಂದುವರೆಯಬಹುದು ಎನ್ನುತ್ತಾರೆ ಸ್ಥಳೀಯರು.

ಇದನ್ನೂ ಓದಿ: ಮುತ್ತಿನ ನಗರಿಯಲ್ಲಿ ವಿದ್ಯಾರ್ಥಿ ಜೊತೆ ಶಿಕ್ಷಕಿ ನಾಪತ್ತೆ.. ಎರಡು ದಿನಗಳ ಬಳಿಕ ವಾಪಸ್ ಬಂದು ಹೇಳಿದ್ದೇನು​!?

ETV Bharat Logo

Copyright © 2025 Ushodaya Enterprises Pvt. Ltd., All Rights Reserved.