ಶಿರಡಿ (ಮಹಾರಾಷ್ಟ್ರ): ಪಂಜಾಬ್ ಮೂಲದ, ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವ ಅಖಿಲ್ ಶರ್ಮಾ ದಂಪತಿ ಶಿರಡಿ ಸಾಯಿ ಆಸ್ಪತ್ರೆಗೆ 50 ಸಾವಿರ ಡಾಲರ್ ಚೆಕ್ ಅನ್ನು ದಾನವಾಗಿ ನೀಡಿದ್ದಾರೆ. ಅಖಿಲ್ ಶರ್ಮಾ ಹಾಗೂ ಪತ್ನಿ ಅಪರ್ಣಾ ಶರ್ಮಾ ಮಹಾರಾಷ್ಟ್ರದಲ್ಲಿರುವ ಸಾಯಿ ಬಾಬಾ ಕ್ಷೇತ್ರಕ್ಕೆ ಇಂದು ಭೇಟಿ ನೀಡಿ ದರ್ಶನ ಪಡೆದರು. ಈ ವೇಳೆ ಅಮೆರಿಕದ 50 ಸಾವಿರ ಡಾಲರ್ ಚೆಕ್ ಅನ್ನು(ಭಾರತೀಯ ಕರೆನ್ಸಿ ಮೌಲ್ಯ 41 ಲಕ್ಷ ರೂಪಾಯಿ) ದೇಗುಲದ ಲೆಕ್ಕಾಧಿಕಾರಿ ಕೈಲಾಸ್ ಖಾರಡೆ ಅವರಿಗೆ ಹಸ್ತಾಂತರಿಸಿದರು.
ಹಣವನ್ನು ಸಾಯಿ ಸಂಸ್ಥೆಯ ಅಧೀನದಲ್ಲಿ ನಡೆಸುತ್ತಿರುವ ಆಸ್ಪತ್ರೆಗೆ ಬಳಸಿಕೊಳ್ಳುವಂತೆ ದಂಪತಿ ತಿಳಿಸಿದರು. ಪ್ರಸ್ತುತ ಕ್ಷೇತ್ರಕ್ಕೆ ದಾನ ಮಾಡಲೂ ಸಾಧ್ಯವಿಲ್ಲ. ಆದರೆ ಪತಿ, ಪತ್ನಿ ಸೇರಿಕೊಂಡು ಕೈಲಾದಷ್ಟು ಕಾಣಿಕೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ಸಾಯಿಬಾಬಾ ಸಂಸ್ಥಾನದ ಲೆಕ್ಕಾಧಿಕಾರಿ ಅವರು ಶರ್ಮಾ ಕುಟುಂಬಕ್ಕೆ ಶಾಲು ಹೊದಿಸಿ ಸನ್ಮಾನಿಸಿದರು.
ಇದನ್ನೂ ಓದಿ:ಮೇಕಪ್ಗೆ ಹಣ ನೀಡಿಲ್ಲವೆಂದು ವಿಚ್ಛೇದನಕ್ಕೆ ಅರ್ಜಿ ಹಾಕಿದ ಮಹಿಳೆ!