ಡೆಹ್ರಾಡೂನ್(ಉತ್ತರಾಖಂಡ್): ಭಾರಿ ಮಳೆಯಿಂದ ಡೆಹ್ರಾಡೂನ್-ರಾಣಿಪೋಖಾರಿ-ರಿಷಿಕೇಶ್ ಹೆದ್ದಾರಿ ಸಂಚಾರದಲ್ಲಿ ಮತ್ತೆ ಅವ್ಯವಸ್ಥೆ ಉಂಟಾಗಿದೆ. ಹೊಸದಾಗಿ ನಿರ್ಮಾಣವಾಗಿದ್ದ ರಸ್ತೆಯೂ ಕೂಡಾ ಭಾರೀ ಮಳೆಗೆ ಕೊಚ್ಚಿ ಹೋಗಿದೆ.
ಆಗಸ್ಟ್ 27 ರಂದು ಜಖಾನ್ ನದಿಯ ಮೇಲಿನ ಸೇತುವೆಯ ಭಾಗಗಳು ಕುಸಿದ ನಂತರ ಡೆಹ್ರಾಡೂನ್- ರಿಷಿಕೇಶ್ ಹೆದ್ದಾರಿಯಲ್ಲಿ ಸಂಚಾರಕ್ಕೆ ಅನುಕೂಲವಾಗುವಂತೆ ಅದರ ಪಕ್ಕದಲ್ಲೇ ರಸ್ತೆಯೊಂದನ್ನು ನಿರ್ಮಾಣ ಮಾಡಲಾಗಿತ್ತು. ಈಗ ಆ ಮಾರ್ಗವೂ ಕೊಚ್ಚಿಹೋಗಿದ್ದು, ಹೆದ್ದಾರಿ ಸಂಚಾರದಲ್ಲಿ ಅವ್ಯವಸ್ಥೆ ಉಂಟಾಗಿದೆ.
ಇದನ್ನೂ ಓದಿ: ತಾಯಿ, ಮಗನ ಹತ್ಯೆ: ಬ್ಯಾಂಕ್ ಉದ್ಯೋಗಿ ಮನೆಯಲ್ಲಿ ಡಬಲ್ ಮರ್ಡರ್