ETV Bharat / bharat

ಗುಜರಾತ್‌ನಲ್ಲಿ ಅಮುಲ್ ಒಂಟೆ ಹಾಲು ಸಂಸ್ಕರಣಾ ಘಟಕ ಆರಂಭ - ಲೀಟರ್ ಒಂಟೆ ಹಾಲು 51 ರೂಪಾಯಿಗೆ ಮಾರಾಟ

ಭಾರತದಲ್ಲಿ ಇತ್ತೀಚಿನ ದಿನಗಳಲ್ಲಿ ಒಂಟೆ ಹಾಲಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಗುಜರಾತ್‌ನ ಕಛ್‌ನ ಚಂದ್ರನಿ ಗ್ರಾಮದಲ್ಲಿ ಏಷ್ಯಾದ ಪ್ರಥಮ ಡಿಯೋಡರೈಸ್ಡ್ ಒಂಟೆ ಹಾಲು ಸಂಸ್ಕರಣಾ ಘಟಕ ಆರಂಭವಾಗಿದೆ.

asias-first-deodorised-camel-milk-plant-in-kutchh-boosts-prospects-of-herdsmen

author img

By

Published : Jan 19, 2023, 12:31 PM IST

ಕಛ್ (ಗುಜರಾತ್): ಏಷ್ಯಾದ ಮೊದಲ ಡಿಯೋಡರೈಸ್ಡ್ ಒಂಟೆ ಹಾಲು ಸಂಸ್ಕರಣಾ ಘಟಕವು ಗುಜರಾತ್‌ನ ಕಛ್‌ನ ಚಂದ್ರನಿ ಗ್ರಾಮದಲ್ಲಿ ಕಾರ್ಯಾರಂಭಗೊಂಡಿದೆ. ಇದರೊಂದಿಗೆ, ಒಂಟೆ ಸಾಕಾಣಿಕೆದಾರರ ಆದಾಯ ಮತ್ತು ಜೀವನ ಪರಿಸ್ಥಿತಿಗಳು ಸುಧಾರಿಸುತ್ತಿವೆ. ಒಂದೊಮ್ಮೆ ಪ್ರತಿ ಲೀಟರ್ ಒಂಟೆ ಹಾಲಿಗೆ ಕೇವಲ 20 ರೂ.ಗೆ ಸಿಗುತ್ತಿತ್ತು. ಆದರೆ ಇವಾಗ ಲೀಟರ್ ಒಂಟೆ ಹಾಲು 51 ರೂಪಾಯಿಗೆ ಮಾರಾಟವಾಗುತ್ತಿದೆ. ಹೀಗಾಗಿ ಈಗ ಒಂಟೆ ಸಾಕಾಣಿಕೆ ಕೇವಲ ಹವ್ಯಾಸವಾಗಿರದೆ ಜೀವನೋಪಾಯದ ಮೂಲವಾಗಿದೆ.

ಅಮುಲ್‌ ಕಂಪನಿ ಆರಂಭಿಸಿರುವ ಕಛ್ ಹಾಲು ಘಟಕವು ಒಂಟೆ ಸಾಕಾಣಿಕೆದಾರರಲ್ಲಿ ಜೀವನೋಪಾಯದ ಭರವಸೆ ಹುಟ್ಟಿಸಿದ್ದು, ಒಂಟೆ ಮೇಯಿಸುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿದೆ. ಇಡೀ ಪ್ರಪಂಚದಲ್ಲಿ ದುಬೈ ಮತ್ತು ಪಾಕಿಸ್ತಾನಗಳಲ್ಲಿ ಮಾತ್ರ ಒಂಟೆ ಹಾಲು ಸಂಸ್ಕರಿಸುವ ಒಟ್ಟು ಮೂರು ಕೇಂದ್ರಗಳಿವೆ. ಈಗ ಅಲ್ಟ್ರಾ ಮಾಡರ್ನ್​ ಸಂಸ್ಕರಣಾ ಯಂತ್ರದೊಂದಿಗೆ ನಾಲ್ಕನೇ ಸಂಸ್ಕರಣಾ ಕೇಂದ್ರವನ್ನು ಕಛ್‌ನ ಅಂಜಾರ್ ತಾಲೂಕಿನ ಚಂದ್ರನಿ ಗ್ರಾಮದಲ್ಲಿ ಪ್ರಾರಂಭಿಸಲಾಗಿದೆ.

ಈ ಬಗ್ಗೆ ಮಾತನಾಡಿದ ಸರ್ಹದ್ ಡೇರಿ ಅಧ್ಯಕ್ಷ ವಾಲಂಜಿಭಾಯಿ ಹೊನಬಲ್, ಪ್ರಸ್ತುತ ಕಛ್ ಜಿಲ್ಲೆಯಲ್ಲಿ ಒಂಟೆ ಹಾಲಿನ ಮಾರುಕಟ್ಟೆ ಉತ್ತಮವಾಗಿದೆ. ಸರ್ಹದ್ ಡೈರಿ, ಅಮುಲ್, ಸಹಜೀವನ್ ಮತ್ತು ಕಛ್ ಉಲ್ಹಕ್ ಮಾಲ್ಧಾರಿ ಸಂಘಟನೆಯ ವ್ಯವಸ್ಥಾಪಕ ಸಂಘಗಳು ಸೇರಿದಂತೆ ಜಿಲ್ಲೆಯ 5 ಸ್ಥಳಗಳಲ್ಲಿ ಒಂಟೆ ಹಾಲು ಸಂಗ್ರಹಿಸಲಾಗುತ್ತಿದೆ. ನಿತ್ಯ 3,500 ರಿಂದ 4,100 ಲೀಟರ್ ಹಾಲು ಸಂಗ್ರಹವಾಗುತ್ತದೆ. ಒಂಟೆಯ ಬೆಲೆ ಈ ಹಿಂದೆ 10,000 ರೂಪಾಯಿ ಇತ್ತು. ಆದರೆ ಈಗ ಒಂಟೆಯೊಂದರ ಬೆಲೆ 35,000 ರೂಪಾಯಿಗಳಿಂದ 40,000 ರೂಪಾಯಿಗಳಾಗಿದೆ. ಇತ್ತೀಚಿನ ದಿನಗಳಲ್ಲಿ ಜಾಮ್‌ನಗರ, ಪಾಟಣ್, ಬನಸ್ಕಾಂತದ ಯುವಕರು ಒಂಟೆಗಳನ್ನು ಖರೀದಿಸಿ ಹೈನುಗಾರಿಕೆ ಆರಂಭಿಸಿದ್ದಾರೆ. ಖನಿಜಾಂಶಗಳಿಂದ ಸಮೃದ್ಧವಾಗಿರುವ ಒಂಟೆ ಹಾಲು ಆರೋಗ್ಯ ಸುಧಾರಿಸಲು ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಅಂಜಾರ್ ತಾಲೂಕಿನ ಚಂದ್ರನಿ ಗ್ರಾಮದ ಸರ್ಹದ್ ಡೈರಿಯ ಹಾಲು ಉತ್ಪಾದನೆ ಮತ್ತು ಪ್ಯಾಕೇಜಿಂಗ್ ಘಟಕವು ಜನವರಿ 2023 ರಿಂದ ಕೆಲಸ ಮಾಡುತ್ತಿದೆ. 180 ಕೋಟಿ ರೂಪಾಯಿಗೂ ಹೆಚ್ಚು ವೆಚ್ಚದಲ್ಲಿ ನಿರ್ಮಿಸಲಾದ ಈ ಘಟಕದಲ್ಲಿ 'ಡಿಯೋಡರೈಸೇಶನ್' ಯಂತ್ರದ ಮೂಲಕ ಒಂಟೆ ಹಾಲಿನ ವಾಸನೆಯನ್ನು ತೆಗೆದುಹಾಕಲಾಗುತ್ತದೆ.

ಒಂಟೆ ಹಾಲಿನ ಅನೇಕ ಪ್ರಯೋಜನಗಳನ್ನು ಆಯುರ್ವೇದದ ಪುಸ್ತಕಗಳಲ್ಲಿ ಉಲ್ಲೇಖಿಸಲಾಗಿದೆ. ಇದನ್ನು ವಿವಿಧ ಸಂಸ್ಕೃತಿ - ಸಮುದಾಯಗಳ ಜನತೆ ಸಾವಿರಾರು ವರ್ಷಗಳಿಂದ ಬಳಸುತ್ತಿದ್ದಾರೆ. ಒಂಟೆ ಹಾಲು ಇನ್ಸುಲಿನ್ ತರಹದ ಪ್ರೋಟೀನ್ ಅನ್ನು ಹೊಂದಿರುತ್ತದೆ, ಇದು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ. ಒಂಟೆ ಹಾಲಿನ ಪುಡಿ ಮಧುಮೇಹದ ನಿಯಂತ್ರಣ ಮತ್ತು ತಡೆಗಟ್ಟುವಿಕೆಗೆ ಸಹಾಯ ಮಾಡುತ್ತದೆ. ಒಂಟೆ ಹಾಲಿನ ಬಗ್ಗೆ ಜನರಲ್ಲಿ ಅರಿವು ಹೆಚ್ಚಾದಂತೆ ಬೇಡಿಕೆಯೂ ಹೆಚ್ಚುತ್ತಿದೆ.

ಈ ಹಾಲಿನಿಂದ ಐಸ್ ಕ್ರೀಮ್ ಮತ್ತು ಚಾಕೊಲೇಟ್ ಕೂಡ ತಯಾರಿಸಲಾಗುತ್ತದೆ. ಒಂಟೆ ಹಾಲಿನ ಉತ್ಪಾದನೆಯಲ್ಲಿ ಈ ಘಟಕ ಭಾರತದಲ್ಲಿಯೇ ಪ್ರಥಮ ಸ್ಥಾನದಲ್ಲಿದೆ. ಮೊದಲು ಲೀಟರ್‌ಗೆ ಕೇವಲ 20 ರೂ.ಗೆ ಮಾರಾಟವಾಗುತ್ತಿದ್ದ ಒಂಟೆ ಹಾಲು ಇಂದು ಲೀಟರ್‌ಗೆ 51 ರೂ.ಗೆ ಮಾರಾಟವಾಗುತ್ತಿದೆ. ಹೀಗಾಗಿ ಇದರ ಹೈನುಗಾರಿಕೆಯಿಂದ 200 ರಿಂದ 300 ಕುಟುಂಬಗಳು ಜೀವನೋಪಾಯ ಕಂಡುಕೊಂಡಿವೆ. ಈ ಹಿಂದೆ ಒಂಟೆ ಕಾಯುತ್ತಿದ್ದವರು ಕೂಡ ಒಂಟೆ ಸಾಕಣೆಗೆ ಮರಳುತ್ತಿದ್ದಾರೆ.

ಇದನ್ನೂ ಓದಿ: ಮಂಡ್ಯ: ಮೆಗಾ ಹಾಲಿನ ಡೈರಿ ಉದ್ಘಾಟಿಸಿದ ಅಮಿತ್​ ಶಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.