ETV Bharat / bharat

ಖಲಿಸ್ತಾನ್ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್ ಬಂಧನ: ಅಸ್ಸೋಂ ಜೈಲಿಗೆ ಶಿಫ್ಟ್​

ಖಲಿಸ್ತಾನ್​ ಪ್ರತ್ಯೇಕತಾವಾದಿ ಹೋರಾಟಗಾರ ಅಮೃತ್​ಪಾಲ್​ ಸಿಂಗ್​ ಪಂಜಾಬ್​ನ ಮೊಗಾದಲ್ಲಿ ಬಂಧಿಸಲಾಗಿದೆ. ಕಳೆದ 36 ದಿನಗಳಿಂದ ಅಮೃತ್​ಪಾಲ್ ಸಿಂಗ್ ತಲೆಮರೆಸಿಕೊಂಡು ಓಡಾಡುತ್ತಿದ್ದರು.

ಖಲಿಸ್ತಾನ ಪ್ರತ್ಯೇಕತಾವಾದಿ ಅಮೃತ್​ಪಾಲ್​ ಸಿಂಗ್

author img

By

Published : Apr 23, 2023, 7:58 AM IST

Updated : Apr 23, 2023, 9:09 AM IST

ಮೊಗಾ (ಪಂಜಾಬ್): ತಿಂಗಳಿಂದ ಕಣ್ಮರೆಯಾಗಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ಖಲಿಸ್ತಾನ್​ ಪ್ರತ್ಯೇಕತಾವಾದಿ, ವಾರಿಸ್​ ಪಂಜಾಬ್​ ದಿ ಮುಖ್ಯಸ್ಥ ಅಮೃತ್​​ಪಾಲ್​ ಸಿಂಗ್​ನನ್ನು ಇಂದು ಬೆಳಗ್ಗೆ ಪಂಜಾಬ್​ನ ಮೋಗಾದಲ್ಲಿ ಬಂಧಿಸಲಾಗಿದೆ. ಈ ಬಗ್ಗೆ ಪಂಜಾಬ್ ಪೊಲೀಸರು ಟ್ವಿಟ್ ಮಾಡಿ, ಅಧಿಕೃತ ಪಡಿಸಿದ್ದಾರೆ.

ಪಂಜಾಬ್​ ಪೊಲೀಸರು ಮತ್ತು ಗುಪ್ತಚರ ದಳಗಳು ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಅಮೃತಪಾಲ್ ಸಿಂಗ್​ನನ್ನು ಕೊನೆಗೂ ಸೆರೆ ಹಿಡಿಯಲಾಗಿದೆ. ಮಾರ್ಚ್ 18 ರಂದು ಅಮೃತ್​ಪಾಲ್​ ಪರಾರಿಯಾಗಿ ಕಣ್ಮರೆಸಿಕೊಂಡಿದ್ದ. ಅಂದಿನಿಂದ ನಿರಂತರವಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದರು.

ಕೆಲ ದಿನಗಳ ಹಿಂದಷ್ಟೇ ಅಮೃತ್​ಪಾಲ್​ ಪತ್ನಿಯನ್ನು ಅಮೃತಸರ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆಯಲಾಗಿತ್ತು. ವಿದೇಶಕ್ಕೆ ಪರಾರಿಯಾಗಲು ಅವರು ಯತ್ನಿಸಿದ್ದ ಮಾಹಿತಿ ಸಿಕ್ಕ ಬಳಿಕ ನಿಲ್ದಾಣದಲ್ಲೇ ಅವರನ್ನು ಬಂಧಿಸಲಾಗಿತ್ತು. ಇದಾದ ಬಳಿಕ ಅಮೃತ್​ಪಾಲ್​ ಶರಣಾಗಲಿದ್ದಾನೆ ಎಂದು ಭಾವಿಸಲಾಗಿತ್ತು. ನಿರೀಕ್ಷೆಯಂತೆ ಅಮೃತ್​ಪಾಲ್​ ಬಂಧನವಾಗಿದೆ.

36 ದಿನಗಳ ಕಾರ್ಯಾಚರಣೆ: ಅಮೃತ್​ಪಾಲ್​ ಸಿಂಗ್​ನನ್ನು ಬಂಧಿಸಲು ಮಾರ್ಚ್​ 18 ರಂದು ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಈ ವೇಳೆ ಸಿನಿಮೀಯ ಶೈಲಿಯಲ್ಲಿ ಎರಡು ಬಾರಿ ತಪ್ಪಿಸಿಕೊಂಡಿದ್ದರು. ಇದಾದ ಬಳಿಕ ಭೂಗತವಾಗಿದ್ದ ಆತ, ಹಲವು ನೆರೆ ರಾಜ್ಯಗಳು ಸೇರಿದಂತೆ ನೇಪಾಳದಲ್ಲಿ ಕಣ್ಮರೆಸಿಕೊಂಡಿದ್ದ. 36 ದಿನಗಳ ಸತತ ಶೋಧದ ಬಳಿಕ ಪಂಜಾಬ್​ನ ಮೊಗಾದಲ್ಲಿ ಬಂಧಿಸಲಾಗಿದೆ.

ನೆರೆಯ ರಾಜ್ಯಗಳಾದ ರಾಜಸ್ಥಾನ, ಹರಿಯಾಣ ಮತ್ತು ಉತ್ತರ ಪ್ರದೇಶ ಮತ್ತಿತರ ರಾಜ್ಯಗಳಲ್ಲಿ ನಡೆಸಿದ ಹುಡುಕಾಟಗಳು ಯಾವುದೇ ಫಲಿತಾಂಶವನ್ನು ನೀಡಿರಲಿಲ್ಲ. ಖಲಿಸ್ತಾನಿ ಪ್ರತ್ಯೇಕತಾವಾದಿಯನ್ನು ಬಂಧಿಸಲು ಪೊಲೀಸರು ಇನ್ನಿಲ್ಲದ ಕಸರತ್ತು ನಡೆಸಿದರು. ನೇಪಾಳದ ಗಡಿ ಪ್ರದೇಶಗಳಲ್ಲೂ ಈತನ ಶೋಧ ನಡೆಸಲಾಗಿತ್ತು. ಆಗಾಗ ಅಮೃತಪಾಲ್ ರಸ್ತೆಗಳಲ್ಲಿ ನಡೆದುಕೊಂಡು ಹೋಗುವುದು ಮತ್ತು ವಾಹನಗಳಲ್ಲಿ ಕಾಣಿಸಿಕೊಂಡ ದೃಶ್ಯಗಳು ಹರಿದಾಡಿದ್ದವು.

ಅಸ್ಸೋಂ ಜೈಲಿಗೆ ಶಿಫ್ಟ್​​: ಬಂಧನವಾಗಿರುವ ಅಮೃತ್​ಪಾಲ್​ ಸಿಂಗ್​ರನ್ನು ಅಸ್ಸೋಂನ ದಿಬ್ರುಗಢ ಜೈಲಿಗೆ ಸ್ಥಳಾಂತರಿಸಲು ಪೊಲೀಸರು ವ್ಯವಸ್ಥೆ ಮಾಡಿದ್ದಾರೆ. ಈಗಾಗಲೇ ಸಿಂಗ್​ನ ಕೆಲ ಸಹಚರರನ್ನು ಅದೇ ಜೈಲಿನಲ್ಲಿ ಇಡಲಾಗಿದೆ. ಅದೇ ಜೈಲಿನಲ್ಲಿ ಆತನನ್ನೂ ಇರಿಸಲು ಪೊಲೀಸರು ಯೋಜಿಸಿದ್ದಾರೆ. ಹೀಗಾಗಿ ಜೈಲಿಗೆ ಹೆಚ್ಚಿನ ಭದ್ರತೆ ನೀಡಲಾಗಿದೆ.

ಅಮೃತಪಾಲ್ ಅವರು ಸಿಖ್- ಪ್ರತ್ಯೇಕತಾವಾದಿ ಸಂಘಟನೆಯಾದ ವಾರಿಸ್ ಪಂಜಾಬ್ ದಿ ಪ್ರಸ್ತುತ ಮುಖ್ಯಸ್ಥರಾಗಿದ್ದಾರೆ. ಇದು ಖಲಿಸ್ತಾನ್ ಸ್ವತಂತ್ರ ರಾಷ್ಟ್ರವನ್ನು ಸಾಧಿಸಲು ಬದ್ಧವಾಗಿದೆ. ಅದರ ಸಂಸ್ಥಾಪಕ ದೀಪ್ ಸಿಧು 2022 ರಲ್ಲಿ ನಿಧನರಾದ ನಂತರ, ಅಮೃತಪಾಲ್ ಸಿಂಗ್ ಅದರ ಆಡಳಿತವನ್ನು ವಹಿಸಿಕೊಂಡರು ಮತ್ತು ಪಂಜಾಬ್‌ನಲ್ಲಿ ಅನೇಕ ವಿವಾದಗಳು ಮತ್ತು ದಾಳಿಗಳ ಕೇಂದ್ರವಾಯಿತು.

ಅಮೃತ್​ಪಾಲ್​ ಸಿಂಗ್ ಬಂಧನಕ್ಕಾಗಿ ಪಂಜಾಬ್​ ಪೊಲೀಸರು ಮುಂದಾಗಿದ್ದರೆ, ಖಲಿಸ್ತಾನಿ ಹೋರಾಟಗಾರರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಇಂಗ್ಲೆಂಡ್, ಅಮೆರಿಕ, ಮೆಕ್ಸಿಕೋ ಸೇರಿದಂತೆ ವಿವಿಧ ರಾಷ್ಟ್ರಗಳ ರಾಯಭಾಗಿ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ಖಲಿಸ್ತಾನಿ ಪರ ಘೋಷಣೆ ಕೂಗಿದ್ದರು. ಲಂಡನ್‌ನಲ್ಲಿ ಖಲಿಸ್ತಾನಿ ಕಾರ್ಯಕರ್ತರು ಭಾರತೀಯ ರಾಯಭಾರ ಕಚೇರಿಯ ಮೇಲೆ ಹಾರಾಡಿತ್ತಿದ್ದ ಧ್ವಜವನ್ನು ಕೆಳಗಿಳಿಸಲು ಯತ್ನಿಸಿದ್ದರು.

ಓದಿ: ಶರಣಾಗತಿಗೆ ನಿರ್ಧರಿಸಿದ ಅಮೃತ್​​ಪಾಲ್​ ಸಿಂಗ್?

Last Updated : Apr 23, 2023, 9:09 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.