ETV Bharat / bharat

Amrit Bharat Station Scheme: ಬಿಎಸ್​ಪಿ MP-ಬಿಜೆಪಿ MLC ನಡುವೆ ಮಾತಿನ ಚಕಮಕಿ- ವಿಡಿಯೋ - ಪ್ರಧಾನಿ ಮೋದಿ

Amrit Bharat Station Scheme: ಉತ್ತರ ಪ್ರದೇಶದ ಅಮ್ರೋಹದಲ್ಲಿ ಅಮೃತ್ ಭಾರತ್ ಸ್ಟೇಷನ್​ ಯೋಜನೆ​ ಕಾರ್ಯಕ್ರಮದಲ್ಲಿ ಬಿಎಸ್​ಪಿ ಸಂಸದ ಡ್ಯಾನಿಶ್ ಅಲಿ ಹಾಗೂ ವಿಧಾನ ಪರಿಷತ್ತಿನ ಬಿಜೆಪಿ ಸದಸ್ಯ ಹರಿಸಿಂಗ್​ ಧಿಲ್ಲೋನ್​ ಮಧ್ಯೆ ಮಾತಿನ ಚಕಮಕಿ ನಡೆದಿದೆ.

heated-argument-between-bsp-mp-danish-ali-and-bjp-mlc-hari-singh-dhillon-in-amroha
ಬಿಎಸ್​ಪಿ ಸಂಸದ ಡ್ಯಾನಿಶ್ ಅಲಿ ಮತ್ತು ಬಿಜೆಪಿ ಎಂಎಲ್​ಸಿ ಹರಿಸಿಂಗ್ ನಡುವೆ ಮಾತಿನ ಚಕಮಕಿ
author img

By

Published : Aug 6, 2023, 8:22 PM IST

ಬಿಎಸ್​ಪಿ ಸಂಸದ ಡ್ಯಾನಿಶ್ ಅಲಿ ಮತ್ತು ಬಿಜೆಪಿ ಎಂಎಲ್​ಸಿ ಹರಿಸಿಂಗ್ ನಡುವೆ ಮಾತಿನ ಚಕಮಕಿ

ಅಮ್ರೋಹ (ಉತ್ತರ ಪ್ರದೇಶ): ಸರ್ಕಾರಿ ಕಾರ್ಯಕ್ರಮದಲ್ಲಿ ಬಹುಜನ ಸಮಾಜ ಪಕ್ಷದ (ಬಿಎಸ್​ಪಿ) ಸಂಸದ ಕುನ್ವರ್ ಡ್ಯಾನಿಶ್ ಅಲಿ ಹಾಗೂ ವಿಧಾನ ಪರಿಷತ್ ಬಿಜೆಪಿ ಸದಸ್ಯ ಹರಿಸಿಂಗ್​ ಧಿಲ್ಲೋನ್​ ನಡುವೆ ಪರಸ್ಪರ ವಾಗ್ವಾದ ನಡೆದ ಘಟನೆ ಉತ್ತರ ಪ್ರದೇಶದ ಅಮ್ರೋಹದಲ್ಲಿ ಇಂದು ನಡೆದಿದೆ.

ಇಂದು ದೇಶಾದ್ಯಂತ ಅಮೃತ್ ಭಾರತ್ ಸ್ಟೇಷನ್​ ಯೋಜನೆಯಡಿ 508 ರೈಲ್ವೆ ನಿಲ್ದಾಣಗಳ ನವೀಕರಣ ಕಾರ್ಯಕ್ಕೆ ಪ್ರಧಾನಿ ಮೋದಿ ವರ್ಚುವಲ್ ಮೂಲಕ ಚಾಲನೆ ನೀಡಿದರು. ಅಮ್ರೋಹ ರೈಲ್ವೆ ನಿಲ್ದಾಣದಲ್ಲೂ ಕಾರ್ಯಕ್ರಮ ಆಯೋಜಿಸಲಾಗಿತ್ತು. ಅಮ್ರೋಹ ಕ್ಷೇತ್ರದ ಸಂಸದ ಡ್ಯಾನಿಶ್​ ಅಲಿ ಹಾಗೂ ಇತರ ಜನಪ್ರತಿನಿಧಿಗಳೂ ಸಹ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಈ ವೇಳೆ, ಘೋಷಣೆಗಳ ವಿಷಯವಾಗಿ ಡ್ಯಾನಿಶ್​ ಅಲಿ ಹಾಗೂ ಬಿಜೆಪಿ ಎಂಎಲ್​ಸಿ ಹರಿಸಿಂಗ್​ ಧಿಲ್ಲೋನ್ ಮಧ್ಯೆ ಮಾತಿನ ಚಕಮಕಿ ಉಂಟಾಯಿತು.

ಇತರ ಮುಖಂಡರು ಸಮಾಧಾನಪಡಿಸಲು ಯತ್ನಿಸಿದರು. ಆದರೆ, ವೇದಿಕೆ ಮೇಲೆಯೇ ಇಬ್ಬರು ನಾಯಕರು ಪರಸ್ಪರ ತೀವ್ರ ವಾಗ್ವಾದ ನಡೆಸಿದ ಪರಿಣಾಮ ಗದ್ದಲದ ವಾತಾವರಣ ನಿರ್ಮಾಣವಾಯಿತು. ಬಿಜೆಪಿ ಕಾರ್ಯಕರ್ತರು ಭಾರತ್ ಮಾತಾ ಕೀ ಜೈ ಹಾಗೂ ಜೈ ಶ್ರೀರಾಮ್ ಘೋಷಣೆಗಳನ್ನು ಕೂಗಲಾರಂಭಿಸಿದರು. ಸ್ವಲ್ಪ ಸಮಯದ ಬಳಿಕ ರೈಲ್ವೇ ಅಧಿಕಾರಿಗಳು ಹಾಗೂ ಪೊಲೀಸರು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು. ಬಿಎಸ್​ಪಿ ಸಂಸದ ಹಾಗೂ ಬಿಜೆಪಿ ಎಂಎಲ್​ಸಿಯ ವಾಗ್ವಾದದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಸಾಮಾಜಿಕ ಜಾಲತಾಣದಲ್ಲೂ ಇದರ ವಿಡಿಯೋ ಹರಿದಾಡುತ್ತಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಜೆಪಿ ಎಂಎಲ್​ಸಿ ಹರಿಸಿಂಗ್​ ಧಿಲ್ಲೋನ್, ''ಭಾರತ್ ಮಾತಾ ಕೀ ಜೈ ಘೋಷಣೆ ಹಾಕಿದ ವಿಷಯವಾಗಿಯೇ ವಾಗ್ವಾದ ಭುಗಿಲೆದ್ದಿದೆ. ಅವರು (ಡ್ಯಾನಿಶ್​ ಅಲಿ) ಈ ಘೋಷಣೆ ಕೂಗಬಾರದು ಎಂದು ಹೇಳುತ್ತಿದ್ದಾರೆ. ಸರ್ಕಾರಿ ಕಾರ್ಯಕ್ರಮದಲ್ಲಿ ಭಾರತ್ ಮಾತಾ ಕೀ ಜೈ ಎಂದು ಹೇಳುವುದರಲ್ಲಿ ತಪ್ಪೇನಿದೆ'' ಎಂದು ಪ್ರಶ್ನಿಸಿದ್ದಾರೆ.

''ಬಿಜೆಪಿ ಯಾವುದೇ ಸರ್ಕಾರಿ ಕಾರ್ಯಕ್ರಮವನ್ನು ತನ್ನ ಪಕ್ಷದ ಕಾರ್ಯಕ್ರಮ ಎಂಬ ರೀತಿಯಾಗಿ ಪರಿವರ್ತಿಸುತ್ತಿದೆ. ಬಿಜೆಪಿ ಕಾರ್ಯಕರ್ತರು ಪಕ್ಷ ಹಾಗೂ ಪಕ್ಷದ ನಾಯಕರ ಪರವಾಗಿ ಘೋಷಣೆಗಳು ಕೂಗಲು ಶುರು ಮಾಡಿದರು. ಇದು ಒಂದು ಪಕ್ಷದ ಕಾರ್ಯಕ್ರಮವಲ್ಲ. ಇದಕ್ಕೆ ಒಂದು ಪಕ್ಷದಿಂದ ಹಣ ಖರ್ಚು ಮಾಡುವುದಿಲ್ಲ. ತೆರಿಗೆದಾರರ ಹಣ ಖರ್ಚು ಮಾಡಲಾಗುತ್ತದೆ. ಇದೇ ಕಾರಣಕ್ಕೆ ನಾವು ಧ್ವನಿಯನ್ನು ಎತ್ತಬೇಕಾಯಿತು. ಈಗ ಘಟನೆಗೆ ಅವರು (ಬಿಜೆಪಿಯವರು) ಹೊಸ ತಿರುವ ಕೊಡಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದನ್ನು ಜನರು ಅರ್ಥ ಮಾಡಿಕೊಂಡಿದ್ದಾರೆ'' ಎಂದು ಸಂಸದ ಡ್ಯಾನಿಶ್​ ಅಲಿ ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕದ 13 ಸೇರಿ 508 ರೈಲು ನಿಲ್ದಾಣಗಳ ನವೀಕರಣಕ್ಕೆ ಪ್ರಧಾನಿ ಮೋದಿ ವಿದ್ಯುಕ್ತ ಚಾಲನೆ.. I.N.D.I.A ಒಕ್ಕೂಟದ ವಿರುದ್ಧ ಟೀಕೆ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.