ಮುಂಬೈ (ಮಹಾರಾಷ್ಟ್ರ): ಹನುಮಾನ್ ಚಾಲೀಸಾ ಪಠಿಸುವ ಸವಾಲು ಹಾಕಿದ್ದ ಪ್ರಕರಣ ಸಂಬಂಧ ಮಹಾರಾಷ್ಟ್ರದ ಅಮರಾವತಿ ಕ್ಷೇತ್ರ ಪಕ್ಷೇತರ ಸಂಸದೆ ನವನೀತ್ ರಾಣಾ ಹಾಗೂ ಪತಿ, ಶಾಸಕ ರವಿ ರಾಣಾ ಇಂದು ಮುಂಬೈನ ಬೋರಿವಲಿ ನ್ಯಾಯಾಲಯಕ್ಕೆ ಹಾಜರಾದರು.
ಈ ಹಿಂದೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿದ್ದ ಶಿವಸೇನೆ ಮುಖ್ಯಸ್ಥ ಉದ್ಧವ್ ಠಾಕ್ರೆ ಮನೆ ಮುಂದೆ ಹನುಮಾನ್ ಚಾಲೀಸ ಪಠಿಸುವ ಸವಾಲನ್ನು ರಾಣಾ ದಂಪತಿ ಹಾಕಿದ್ದರು. ಈಗ ಕಾನೂನು ಸುವ್ಯವಸ್ಥೆಗೆ ಭಂಗ ತರುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಅಲ್ಲದೇ, ಕೋಮು ದ್ವೇಷಕ್ಕೆ ಯತ್ನಿಸಿದ್ದಾರೆ ಎಂಬ ಆರೋಪದ ಮೇಲೆ ರಾಣಾ ದೇಶದ್ರೋಹ ಪ್ರಕರಣ ಪ್ರಕರಣ ದಾಖಲಿಸಲಾಗಿತ್ತು. ಇದೇ ಪ್ರಕರಣದಲ್ಲಿ ಸಂಸದೆ, ಶಾಸಕ ದಂಪತಿ ಜೈಲಿಗೂ ಹೋಗಿದ್ದರು.
ಇಂದು ಪ್ರಕರಣದ ವಿಚಾರವಾಗಿ ಸಂಸದೆ ನವನೀತ್ ರಾಣಾ ಮತ್ತು ಶಾಸಕ ರವಿ ರಾಣಾ ಬೋರಿವಲಿ ನ್ಯಾಯಾಲಯ ಮುಂದೆ ಹಾಜರಾದರು. ಈ ವೇಳೆ ಮಾತನಾಡಿದ ರಾಣಾ ದಂಪತಿ, ನಮಗೆ ಯಾವಾಗ ಕರೆದರೂ ನ್ಯಾಯಾಲಯಕ್ಕೆ ಹಾಜರಾಗುತ್ತೇವೆ. ನಮ್ಮ ವಿರುದ್ಧ ಉದ್ಧವ್ ಠಾಕ್ರೆ ಸುಳ್ಳು ತಪ್ಪು ಪ್ರಕರಣ ದಾಖಲಿಸಿದ್ದರು. ಇದರ ಫಲವನ್ನೂ ಅನುಭವಿಸುತ್ತಿದ್ದಾರೆ ಎಂದು ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ: ಯುವಕನ ವಿರುದ್ಧ ಲವ್ ಜಿಹಾದ್ ಆರೋಪ: ಪೊಲೀಸರೊಂದಿಗೆ ವಾಗ್ವಾದ ಮಾಡಿದ್ದ ಸಂಸದೆ ರಾಣಾ ವಿರುದ್ಧ ಕೇಸ್