ETV Bharat / bharat

'ಸೇವಾ ಹಿ ಸಂಘಟನ್​' ಕಾರ್ಯಕ್ರಮದಡಿ 5 'ಮೋದಿ ವ್ಯಾನ್'ಗಳಿಗೆ ಅಮಿತ್​ ಶಾ ಹಸಿರು ನಿಶಾನೆ - ಕೌಶಂಬಿ ವಿಕಾಶ್ ಪರಿಷತ್

ಈ ವ್ಯಾನ್‌ಗಳು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿಗೆ ಅರ್ಹ ಕಾರ್ಮಿಕರ ಮತ್ತು ವಿವಿಧ ವರ್ಗಗಳ ಜನರ ನೋಂದಣಿಗೆ ಸಹಾಯ ಮಾಡುತ್ತದೆ. ವಿಧವೆಯರ ಪಿಂಚಣಿ, ವಿಶೇಷ ಚೇತನರ ಪಿಂಚಣಿ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಅಡಿ 100 ಪ್ರತಿಶತ ನೋಂದಣಿಗೆ ವ್ಯಾನ್‌ಗಳು ಸಹಾಯ ಮಾಡುತ್ತವೆ. ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೂ ಅರಿವು ಮೂಡಿಸಲಾಗುವುದು..

Modi Vans
ಮೋದಿ ವ್ಯಾನ್
author img

By

Published : Oct 19, 2021, 4:53 PM IST

ನವದೆಹಲಿ : ಚುನಾಯಿತ ಪ್ರತಿನಿಧಿಯಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರು 20 ವರ್ಷಗಳನ್ನು ಪೂರೈಸಿದರ ಸಲುವಾಗಿ ಆರಂಭಿಸಿದ ಭಾರತೀಯ ಜನತಾ ಪಕ್ಷದ 'ಸೇವಾ ಹಿ ಸಂಘಟನ್​' ಕಾರ್ಯಕ್ರಮದಡಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಮಂಗಳವಾರ ಐದು 'ಮೋದಿ ವ್ಯಾನ್'ಗಳಿಗೆ ಹಸಿರು ನಿಶಾನೆ ತೋರಿಸಿದ್ದಾರೆ.

ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ವಿನೋದ್ ಸೋಂಕರ್ ನಡೆಸುತ್ತಿರುವ ಕೌಶಂಬಿ ವಿಕಾಶ್ ಪರಿಷತ್ ನೇತೃತ್ವದಲ್ಲಿ ಮೋದಿ ವ್ಯಾನ್‌ಗಳು ಕಾರ್ಯನಿರ್ವಹಿಸಲಿವೆ. ಐದು 'ಮೋದಿ ವ್ಯಾನ್‌ಗಳು' ಉತ್ತರಪ್ರದೇಶದ ಕೌಶಂಬಿ ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತವೆ.

ಈ ಸಂದರ್ಭದಲ್ಲಿ ಮಾತನಾಡಿದ ಸೋಂಕರ್, "ಪ್ರತಿ ವ್ಯಾನ್​ ಟಿವಿಯನ್ನು ಒಳಗೊಂಡಿದೆ ಹಾಗೂ ಹೈಸ್ಪೀಡ್ ಇಂಟರ್​ನೆಟ್​ ಸೇವೆ ಒಳಗೊಂಡಿದೆ. ಜೊತೆಗೆ 39 ರೀತಿಯ ರಕ್ತ ಪರೀಕ್ಷಾ ಸೌಲಭ್ಯಗಳು, ಟೆಲಿಮೆಡಿಸಿನ್, ಜಿಪಿಎಸ್ ಟ್ರ್ಯಾಕಿಂಗ್ ಸಿಸ್ಟಮ್, ವೈದ್ಯರ ಲಭ್ಯತೆ ಮತ್ತು ನರ್ಸ್, ಕಂಪ್ಯೂಟರ್ ಆಪರೇಟರ್​​ಗಳನ್ನು ಒಳಗೊಂಡಿದೆ ಎಂದು ತಿಳಿಸಿದ್ದಾರೆ.

ಈ ವ್ಯಾನ್‌ಗಳು ಐದು ವಿಧಾನಸಭಾ ಕ್ಷೇತ್ರಗಳಲ್ಲಿನ ಹಳ್ಳಿಗಳಲ್ಲಿ ವಾಸಿಸುವ ಜನರಿಗೆ ಸ್ವಚ್ಛತೆಯ ಬಗ್ಗೆ ಅರಿವು ಮೂಡಿಸಲಿವೆ ಮತ್ತು ತಮ್ಮ ಗ್ರಾಮಗಳನ್ನು ಪ್ಲಾಸ್ಟಿಕ್ ಮುಕ್ತವಾಗಿಸಲು ಪ್ರಮಾಣವಚನ ಬೋಧಿಸಲಿದೆ ಎಂದು ಹೇಳಿದರು.

"ಈ ವಾಹನಗಳು ಗ್ರಾಮಸ್ಥರನ್ನು ನೀರಿನ ಮೂಲಗಳ ಸಂರಕ್ಷಣೆಗಾಗಿ, ನದಿಯ ಸ್ವಚ್ಛತೆ ಮತ್ತು ತಮ್ಮ ಗ್ರಾಮಗಳಲ್ಲಿನ ನದಿಗಳ ಸ್ವಚ್ಛತೆಗಾಗಿ ಪ್ರತಿಜ್ಞೆ ಮಾಡಲು ಮನವೊಲಿಸುತ್ತವೆ" ಎಂದು ಸೋಂಕರ್ ಹೇಳಿದರು. ಈ ವ್ಯಾನ್‌ಗಳ ಮುಖ್ಯ ಉದ್ದೇಶವೆಂದರೆ ಪರಿಸರ ಸ್ವಚ್ಛತೆ, ಆರೋಗ್ಯ, ಸಾಮಾಜಿಕ ಭದ್ರತೆ, ಉದ್ಯೋಗ, ಪಿಎಂ ಕಿಸಾನ್ ಸಮ್ಮಾನ್ ನಿಧಿ ಅಡಿಯಲ್ಲಿ ರೈತರ ನೋಂದಣಿ ಎಂದು ಅವರು ಹೇಳಿದರು.

ಈ ವ್ಯಾನ್‌ಗಳು ಪ್ರಧಾನಿ ನರೇಂದ್ರ ಮೋದಿ ಅವರ ರೇಡಿಯೋ ಕಾರ್ಯಕ್ರಮ 'ಮನ್ ಕಿ ಬಾತ್' ಅನ್ನು ಪ್ರಸಾರ ಮಾಡುತ್ತವೆ. ನಾಯಕರ ಸಾರ್ವಜನಿಕ ರ್ಯಾಲಿಗಳು ಮತ್ತು ಭಾಷಣಗಳನ್ನು ಸಹ ಪ್ರಸಾರ ಮಾಡಲಾಗುತ್ತದೆ. 'ಮೋದಿ ವ್ಯಾನ್' ದೂರದ ಹಳ್ಳಿಗಳಲ್ಲಿ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಲಸಿಕೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.

ಈ ವ್ಯಾನ್‌ಗಳು ಕೇಂದ್ರ ಸರ್ಕಾರದ ಹಲವಾರು ಯೋಜನೆಗಳಿಗೆ ಅರ್ಹ ಕಾರ್ಮಿಕರ ಮತ್ತು ವಿವಿಧ ವರ್ಗಗಳ ಜನರ ನೋಂದಣಿಗೆ ಸಹಾಯ ಮಾಡುತ್ತದೆ. ವಿಧವೆಯರ ಪಿಂಚಣಿ, ವಿಶೇಷ ಚೇತನರ ಪಿಂಚಣಿ ಮತ್ತು ಪಿಎಂ ಕಿಸಾನ್ ಸಮ್ಮಾನ್ ನಿಧಿ ಯೋಜನೆಗಳ ಅಡಿ 100 ಪ್ರತಿಶತ ನೋಂದಣಿಗೆ ವ್ಯಾನ್‌ಗಳು ಸಹಾಯ ಮಾಡುತ್ತವೆ. ಸರ್ಕಾರದ ಯೋಜನೆಗಳ ಬಗ್ಗೆ ಗ್ರಾಮಸ್ಥರಿಗೂ ಅರಿವು ಮೂಡಿಸಲಾಗುವುದು.

'ದಿವ್ಯಾಂಗ'ರಿಗೆ UDID (Unique Disability ID) ಕಾರ್ಡ್‌ಗಳನ್ನು ತಯಾರಿಸುವುದು ಸಹ ಈ ವ್ಯಾನ್‌ಗಳಿಂದ ಒದಗಿಸಲಾಗುತ್ತಿರುವ ಸೌಲಭ್ಯಗಳ ಭಾಗವಾಗಿದೆ. ವ್ಯಾನ್​ ಜೊತೆ ಸ್ವಯಂಸೇವಕರು ಯಾವುದೇ ಹಳ್ಳಿಯ ಐದು ಮುಖ್ಯ ನಿವಾಸಿಗಳ ಹೆಸರಿನಲ್ಲಿ ಗಿಡಗಳನ್ನು ನೆಡಲು ಜನರಿಗೆ ಸಹಾಯ ಮಾಡುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.