ರಜೌರಿ: ಭಾರಿ ಮಳೆ ಮತ್ತು ಚಳಿಯ ನಡುವೆ ಭಾರತೀಯ ಸೇನೆ 30 ಅಡಿ ಉದ್ದದ ಸೇತುವೆಯನ್ನು ಜಮ್ಮು ಕಾಶ್ಮೀರದ ಸತರ್ಬನ್ ಪ್ರದೇಶದ ಜಮೈ ನಾಲಾದ ಮೇಲೆ ನಿರ್ಮಿಸಿದೆ. ಈ ಬಗ್ಗೆ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ ಮಾಹಿತಿ ನೀಡಿದ್ದಾರೆ.
ಕಳೆದ ರಾತ್ರಿ ಸುರಿದ ಭಾರಿ ಮಳೆಯಿಂದಾಗಿ ಸೇತುವೆ ಕೊಚ್ಚಿಹೋಗಿದೆ. ಈ ಹಿನ್ನೆಲೆಯಲ್ಲಿ ಸೇನೆ ತಾತ್ಕಾಲಿಕ ಸೇತುವೆ ನಿರ್ಮಾಣ ಮಾಡಿದೆ. ಇನ್ನು 1500 ಜಾನುವಾರುಗಳನ್ನು ಹೊಂದಿರುವ 8 ಡೇರಾ ವಲಸೆ ಕುಟುಂಬಗಳನ್ನು ಭಾರತೀಯ ಸೇನೆ ರಕ್ಷಣೆ ಮಾಡಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ರಕ್ಷಣಾ ಸಾರ್ವಜನಿಕ ಸಂಪರ್ಕ ಅಧಿಕಾರಿ, ನೆಲದಿಂದ 9000 ಅಡಿ ಎತ್ತರದಲ್ಲಿರುವ ಪ್ರದೇಶದಲ್ಲಿ ಭಾರಿ ಮಳೆ ಸುರಿಯುತ್ತಿದೆ. ಈ ಹಿನ್ನೆಲೆಯಲ್ಲಿ ಸೇತುವೆ ಕೊಚ್ಚಿಹೋಗಿದ್ದು, ಸೇನೆ ತಾತ್ಕಾಲಿಕವಾಗಿ ಮತ್ತೊಂದು ಸೇತುವೆ ನಿರ್ಮಾಣ ಮಾಡಿದೆ" ಎಂದು ಹೇಳಿದೆ.