ETV Bharat / bharat

ಲೇಹ್​ಗೆ IAF ಮುಖ್ಯಸ್ಥ ಆರ್.ಕೆ.ಎಸ್. ಭದೌರಿಯಾ ಭೇಟಿ, ಪರಿಶೀಲನೆ - ಚೀನಾ ಪಡೆಗಳು

ವಾಯುಪಡೆಯು ಲೇಹ್ ಮತ್ತು ಥೋಯಿಸ್‌ನಲ್ಲಿ ಎರಡು ಪ್ರಮುಖ ನೆಲೆಗಳನ್ನು ಹೊಂದಿದೆ. ಇದು ಚೀನಾ ಮತ್ತು ಪಾಕಿಸ್ತಾನ ಗಡಿಯನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಪೂರ್ವ ಲಡಾಖ್ ಸೆಕ್ಟರ್ ಜೊತೆಗೆ ನ್ಯೋಮಾ ಅಡ್ವಾನ್ಸಡ್ ಲ್ಯಾಂಡಿಂಗ್ ಗ್ರೌಂಡ್ ಮತ್ತು ದೌಲತ್ ಬೇಗ್ ಓಲ್ಡಿಯಲ್ಲಿನ ವಾಯುನೆಲೆ ಸೇರಿದಂತೆ ಹಲವೆಡೆ ಭಾರತ ಸೈನ್ಯವನ್ನು ನಿಯೋಜಿಸಿದೆ.

IAF ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ
IAF ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ
author img

By

Published : May 28, 2021, 9:17 PM IST

ಲೇಹ್ (ಲಡಾಖ್) : ಚೀನಾ ಪಡೆಗಳು ತಮ್ಮ ತರಬೇತಿ ಪ್ರದೇಶಗಳಲ್ಲಿ ಶಸ್ತ್ರಾಭ್ಯಾ ನಡೆಸುತ್ತಿರುವ ಸಮಯದಲ್ಲಿ, IAF ಮುಖ್ಯಸ್ಥ ಆರ್.ಕೆ.ಎಸ್ ಭದೌರಿಯಾ ಇಂದು ಲೇಹ್‌ಗೆ ಭೇಟಿ ನೀಡಿ ಅಲ್ಲಿ ನಿಯೋಜಿಸಲಾಗಿರುವ ವಾಯುಪಡೆ ಕಾರ್ಯಾಚರಣೆಯ ಸನ್ನದ್ಧತೆಯನ್ನು ಪರಿಶೀಲಿಸಿದ್ದಾರೆ.

ಕಾರ್ಯಾಚರಣೆಯ ಸನ್ನದ್ಧತೆ ಮತ್ತು ಚೀನಾ ಗಡಿಯಲ್ಲಿ ನಡೆಯುತ್ತಿರುವ ಕಾರ್ಯಾಚರಣೆಗಳ ಬಗ್ಗೆ ವಾಯುನೆಲೆ ಅಧಿಕಾರಿಗಳು, ಭದೌರಿಯಾಗೆ ಮಾಹಿತಿ ನೀಡಿದರು.

ಭಾರತೀಯ ಸೇನೆ ಮತ್ತು ಅಲ್ಲಿನ ಅರೆ ಸೈನಿಕ ಪಡೆಗಳನ್ನು ಬೆಂಬಲಿಸುವ ಸಲುವಾಗಿ ವಾಯು ನಿರ್ವಹಣಾ ಕಾರ್ಯಾಚರಣೆಗಳ ಬಗ್ಗೆ ಮುಖ್ಯಸ್ಥರಿಗೆ ವಿವರವಾಗಿ ತಿಳಿಸಲಾಗಿದೆ. ವಾಯುಪಡೆಯು ಲೇಹ್ ಮತ್ತು ಥೋಯಿಸ್‌ನಲ್ಲಿ ಎರಡು ಪ್ರಮುಖ ನೆಲೆಗಳನ್ನು ಹೊಂದಿದೆ. ಇದು ಚೀನಾ ಮತ್ತು ಪಾಕಿಸ್ತಾನ ಗಡಿಯನ್ನು ನೋಡಿಕೊಳ್ಳಲು ಸಹಾಯ ಮಾಡುತ್ತದೆ. ಪೂರ್ವ ಲಡಾಖ್ ಸೆಕ್ಟರ್ ಜೊತೆಗೆ ನ್ಯೋಮಾ ಅಡ್ವಾನ್ಸಡ್ ಲ್ಯಾಂಡಿಂಗ್ ಗ್ರೌಂಡ್ ಮತ್ತು ದೌಲತ್ ಬೇಗ್ ಓಲ್ಡಿಯಲ್ಲಿನ ವಾಯುನೆಲೆ ಸೇರಿದಂತೆ ಹಲವೆಡೆ ಸೈನ್ಯವನ್ನು ಭಾರತ ನಿಯೋಜಿಸಿದೆ.

ಇದನ್ನೂ ಓದಿ:ಕೋವಿಡ್ ವಿರುದ್ಧದ ಹೋರಾಟಕ್ಕೆ ನೆರವು, ಗಡಿಯಲ್ಲೂ ಬೀಡು ಬಿಟ್ಟ ವಾಯುಸೇನೆ..!

ಚೀನಾದ ಮಿಲಿಟರಿ ತನ್ನ ವಾಯುಪಡೆ ಮತ್ತು ಸೇನೆಯನ್ನು ಒಗ್ಗೂಡಿಸಿ ಯುದ್ಧ ಅಭ್ಯಾಸಗಳನ್ನು ನಡೆಸುತ್ತಿದೆ. ಹಾಗಾಗಿ ರಫೇಲ್ ಯುದ್ಧ ವಿಮಾನವನ್ನು ಈ ವಲಯದಲ್ಲಿ ನಿಯೋಜಿಸಲಾಗಿದ್ದು, ಮಿಗ್ -29 ಯೋಧರು ಅಲ್ಲಿ ಕಾವಲು ಕಾಯುತ್ತಿದ್ದಾರೆ. ಕಳೆದ ವರ್ಷದಿಂದ ವಾಯುಪಡೆಯು ತನ್ನ ಟ್ಯಾಂಕ್‌ಗಳು ಮತ್ತು ಕಾಲಾಳುಪಡೆ ಯುದ್ಧ ವಾಹನಗಳನ್ನು ವೇಗವಾಗಿ ಪಡೆಯಲು ಸಹಾಯ ಮಾಡುವ ಮೂಲಕ ಸೈನ್ಯವನ್ನು ಬೆಂಬಲಿಸಿ ವ್ಯಾಪಕವಾಗಿ ಹಾರಾಟ ನಡೆಸಿದೆ. ಈ ವರ್ಷವೂ, ಕೋವಿಡ್ ಪರಿಹಾರ ಕಾರ್ಯಗಳಲ್ಲಿ ತೊಡಗಿರುವ ಕಾರಣ ಉತ್ತರದ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳು ಪರಿಣಾಮ ಬೀರದಂತೆ ಐಎಎಫ್ ಖಚಿತಪಡಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.