ಗುವಾಹಟಿ(ಅಸ್ಸೋಂ): ಪ್ರಸಿದ್ಧ ಕಾಮಾಖ್ಯ ದೇವಸ್ಥಾನದಲ್ಲಿ ಅಂಬುಬಾಚಿ ಮೇಳ ಇಂದಿನಿಂದ ಆರಂಭವಾಗಿದ್ದು, ಸಖಲ ಸಿದ್ಧತೆಗಳು ಕೈಗೊಳ್ಳಲಾಗಿದೆ. ಅಂಬುಬಾಚಿ ಮೇಳದ ಸಂದರ್ಭದಲ್ಲಿ ನೀಲಾಚಲ ಬೆಟ್ಟಗಳು ಸಾಧು ಸನ್ಯಾಸಿಗಳಿಂದ ತುಂಬಿರುತ್ತವೆ. ಅಂಬುಬಾಚಿ ಮೇಳ ಪ್ರಯುಕ್ತ ಬುಧವಾರ ರಾತ್ರಿ 8.18 ರಿಂದ ಜೂನ್ 23, 24, ಮತ್ತು 25 ರಂದು ದೇವಾಲಯದ ಬಾಗಿಲು ಮುಚ್ಚಿರುತ್ತದೆ. ಜೂನ್ 26 ರಂದು ದೇವಿಯ ಸ್ನಾನ ಮತ್ತು ದೈನಂದಿನ ಪೂಜೆಯ ಆಚರಣೆಗಳ ನಂತರ ದೇವಾಲಯದ ಬಾಗಿಲುಗಳನ್ನು ಭಕ್ತರಿಗೆ ತೆರೆಯಲಾಗುತ್ತದೆ.
ಅಂಬುಬಾಚಿ ಉತ್ಸವಕ್ಕೆ ಸಾಧು ಸನ್ಯಾಸಿಗಳ ಸುತ್ತಮುತ್ತಲಿನ ದೇಶ ಮತ್ತು ವಿದೇಶಗಳಿಂದ ಅನೇಕ ಭಕ್ತರು ಕಾಮಾಖ್ಯ ದೇವಸ್ಥಾನಕ್ಕೆ ಭೇಟಿ ನೀಡುತ್ತಾರೆ. ಆಡಳಿತವು ವಿವಿಧ ಸ್ಥಳಗಳಿಂದ ಬರುವ ಭಕ್ತರಿಗಾಗಿ ಫ್ಯಾನ್ಸಿ ಬಜಾರ್, ಕಾಮಾಖ್ಯ ನಿಲ್ದಾಣ ಮತ್ತು ಪಾಂಡು ಬಂದರಿನಲ್ಲಿರುವ ಓಲ್ಡ್ ಜೈಲ್ ಕಾಂಪ್ಲೆಕ್ಸ್‌ನಲ್ಲಿ 3 ಶಿಬಿರಗಳನ್ನು ಏರ್ಪಡಿಸಿದೆ.
ಓದಿ: ಅಸ್ಸೋಂನಲ್ಲಿ ಪ್ರವಾಹ ಪರಿಸ್ಥಿತಿ ಇನ್ನೂ ಭೀಕರ: ಈವರೆಗೆ 73 ಮಂದಿ ಬಲಿ
ಈ ಶಿಬಿರಗಳಲ್ಲಿ 15-20 ಸಾವಿರ ಜನರಿಗೆ ವಸತಿ ವ್ಯವಸ್ಥೆ ಇದೆ. ಅಗತ್ಯವಿದ್ದಲ್ಲಿ 25-30 ಸಾವಿರ ಜನರಿಗೆ ಅವಕಾಶ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಎನ್‌ಜಿಒಗಳು ಆಹಾರ, ನೀರು ಇತ್ಯಾದಿಗಳನ್ನು ಪೂರೈಸುತ್ತಿವೆ ಎಂದು ಪ್ರವಾಸೋದ್ಯಮ ಸಚಿವ ಜಯಂತ್ ಮಲ್ಲ ಬರುವಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಈ ಬಾರಿ ಅಂಬುಬಾಚಿ ಮೇಳದಲ್ಲಿ ಯಾವುದೇ ಉದ್ಘಾಟನಾ ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಇರುವುದಿಲ್ಲ. ಈ ಬಾರಿ ವಿಐಪಿ, ವಿವಿಐಪಿಗಳಿಗೂ ಅವಕಾಶ ಇರುವುದಿಲ್ಲ. ಯಾವುದೇ ಖಾಸಗಿ ವಾಹನಗಳು ದೇವಸ್ಥಾನಕ್ಕೆ ಹೋಗಲು ಬಿಡುವುದಿಲ್ಲ. ಪ್ರವಾಸಿಗರು ನಡೆದುಕೊಂಡು ದೇವಸ್ಥಾನಕ್ಕೆ ಹೋಗಬೇಕು. ಹಿರಿಯ ನಾಗರಿಕರು, ಅನಾರೋಗ್ಯ ಪೀಡಿತರಿಗೆ ದೋಣಿ ವ್ಯವಸ್ಥೆ ಮಾಡಲಾಗಿದೆ ಎಂದು ಜಯಂತ್ ಮಲ್ಲ ಬರುವಾ ಹೇಳಿದರು.