ಅಮರಾವತಿ (ಆಂಧ್ರಪ್ರದೇಶ) : ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಆಂಧ್ರಪ್ರದೇಶ ಸಿಎಂ ವೈ.ಎಸ್. ಜಗನ್ಮೋಹನ್ರೆಡ್ಡಿ ಅವರ ನೇತೃತ್ವದ ವೈಎಸ್ಆರ್ಸಿಪಿಗೆ ಸೇರಿದ ಹತ್ತು ದಿನದಲ್ಲಿಯೇ ಪಕ್ಷದಿಂದ ಹೊರಬಂದಿದ್ದಾರೆ. ಸದ್ಯಕ್ಕೆ ರಾಜಕೀಯದಿಂದ ವಿರಾಮ ತೆಗೆದುಕೊಂಡಿದ್ದೇನೆ, ಮುಂದಿನ ಬೆಳವಣಿಗೆಯ ಬಗ್ಗೆ ತಿಳಿಸಲಾಗುವುದು ಎಂದು ರಾಯುಡು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಿದ ಬಳಿಕ ಅಂಬಟಿ ರಾಯುಡು ರಾಜಕೀಯದಲ್ಲಿ ಸಕ್ರಿಯರಾಗುವುದಾಗಿ ಹೇಳಿದ್ದರು. ಅದರಂತೆ 2023ರ ಡಿಸೆಂಬರ್ 29 ರಂದು ಸಿಎಂ ಜಗನ್ಮೋಹನ್ ರೆಡ್ಡಿ ನೇತೃತ್ವದಲ್ಲಿ ವೈಎಸ್ಆರ್ಸಿಪಿ ಸೇರಿದ್ದರು. ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ ಇಂಗಿತವನ್ನೂ ವ್ಯಕ್ತಪಡಿಸಿದ್ದರು. ಆದರೆ, ದಿಢೀರ್ ರಾಜಕೀಯದಿಂದ ದೂರವುಳಿಯುವುದಾಗಿ, ಪಕ್ಷದಿಂದ ಹೊರನಡೆದಿದ್ದಾರೆ.
ಸದ್ಯಕ್ಕೆ ರಾಜಕೀಯದಿಂದ ದೂರ: ಈ ಬಗ್ಗೆ ತಮ್ಮ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, 'ಸದ್ಯಕ್ಕೆ ರಾಜಕೀಯದಿಂದ ದೂರ ಉಳಿಯಲು ನಿರ್ಧರಿಸಿದ್ದೇನೆ. ಮುಂದಿನ ನಡೆಯನ್ನು ಸದ್ಯದಲ್ಲೇ ಪ್ರಕಟಿಸುತ್ತೇನೆ' ಎಂದು ಪೋಸ್ಟ್ ಮಾಡಿದ್ದಾರೆ. ಇದು ಆಂಧ್ರಪ್ರದೇಶ ವಿಧಾನಸಭೆ ಮತ್ತು ಲೋಕಸಭೆ ತಯಾರಿಯಲ್ಲಿರುವ ಜಗನ್ ಪಕ್ಷಕ್ಕೆ ಹಿನ್ನಡೆ ಉಂಟು ಮಾಡಿದೆ. ಜೊತೆಗೆ ರಾಯುಡು ದಿಢೀರ್ ನಿರ್ಧಾರ ಅಚ್ಚರಿಯನ್ನೂ ತಂದಿದೆ.
-
This is to inform everyone that I have decided to quit the YSRCP Party and stay out of politics for a little while. Further action will be conveyed in due course of time.
— ATR (@RayuduAmbati) January 6, 2024 " class="align-text-top noRightClick twitterSection" data="
Thank You.
">This is to inform everyone that I have decided to quit the YSRCP Party and stay out of politics for a little while. Further action will be conveyed in due course of time.
— ATR (@RayuduAmbati) January 6, 2024
Thank You.This is to inform everyone that I have decided to quit the YSRCP Party and stay out of politics for a little while. Further action will be conveyed in due course of time.
— ATR (@RayuduAmbati) January 6, 2024
Thank You.
ಅಂತಾರಾಷ್ಟ್ರೀಯ ಕ್ರಿಕೆಟಿಗೆ ವಿದಾಯ ಹೇಳಿರುವ ಮಾಜಿ ಕ್ರಿಕೆಟಿಗ, ಹಲವು ಕೂಟಗಳಲ್ಲಿ ಪಾಲ್ಗೊಂಡಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ನಲ್ಲಿ ಆಡಿದ್ದ ರಾಯುಡು, ಸಿಎಸ್ಕೆಯ ಸೋದರ ಫ್ರಾಂಚೈಸಿಯಾದ ಅಮೆರಿಕದ ಮೇಜರ್ ಕ್ರಿಕೆಟ್ ಲೀಗ್ನ (ಎಂಎಲ್ಸಿ) ಟೆಕ್ಸಾ ಸೂಪರ್ ಕಿಂಗ್ಸ್ ಪರವಾಗಿ ಆಡಲು ಒಪ್ಪಂದ ಮಾಡಿಕೊಂಡಿದ್ದಾರೆ. ಇದಕ್ಕೂ ಮುನ್ನ ಅವರು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ (ಸಿಪಿಎಲ್) ಸೇಂಟ್ ಕಿಟ್ಸ್ ಮತ್ತು ನೇವಿಸ್ ಪೈರೆಟ್ಸ್ ತಂಡವನ್ನು ಪ್ರತಿನಿಧಿಸಿದ್ದರು.
ವಿವಾದಗಳಲ್ಲೂ 'ರಾಯುಡು': ಅಂಬಟಿ ರಾಯುಡು ಈ ಹಿಂದೆ ಮೈದಾನದಲ್ಲೂ ಹಲವು ಕಾರಣಗಳಿಂದ ಸುದ್ದಿಯಲ್ಲಿದ್ದರು. 2019 ರ ವಿಶ್ವಕಪ್ ತಂಡದಲ್ಲಿ ಆಯ್ಕೆಯಾಗದ ಕಾರಣ ಸಿಟ್ಟಾಗಿದ್ದರು. 'ಈಗಿನ ತಂಡ ಹೇಗೆ ಆಡುತ್ತದೆ ಎಂದು ನಾನು ವಿಶೇಷ ಕನ್ನಡಕ ಖರೀದಿಸಿ ನೋಡುವೆ' ಎಂದು ಬಹಿರಂಗವಾಗಿ ದೂಷಿಸಿದ್ದರು. ಬಳಿಕ ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ಪರ ಆಡುತ್ತಿದ್ದಾಗ ಸಹ ಆಟಗಾರ ಹರ್ಭಜನ್ ಸಿಂಗ್ ಅವರೊಂದಿಗೆ ಮೈದಾನದಲ್ಲಿ ಫೀಲ್ಡಿಂಗ್ ವಿಚಾರವಾಗಿ ಕಿತ್ತಾಡಿಕೊಂಡಿದ್ದರು.
ಭಾರತದ ಪರವಾಗಿ ರಾಯುಡು 55 ಏಕದಿನ ಮತ್ತು 6 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಫಾರ್ಮ್ ಸಮಸ್ಯೆ ಮತ್ತು ಸ್ಪರ್ಧೆಯಿಂದಾಗಿ ಅವರು ಹಲವು ವರ್ಷಗಳಿಂದ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗದೇ 2023 ರ ಮೇ 29 ರಂದು ಎಲ್ಲ ಕ್ರಿಕೆಟ್ನಿಂದ ನಿವೃತ್ತಿ ಘೋಷಿಸಿದ್ದರು.
ಇದನ್ನೂ ಓದಿ: ಪಾಕ್ ವಿರುದ್ಧ ಆಸೀಸ್ 3-0 ಕ್ಲೀನ್ಸ್ವೀಪ್: ಗೆಲುವಿನೊಂದಿಗೆ ಟೆಸ್ಟ್ಗೆ ವಾರ್ನರ್ ವಿದಾಯ