ವಿಜಯವಾಡ( ಆಂಧ್ರ ಪ್ರದೇಶ): ಇತ್ತೀಚೆಗಷ್ಟೇ ವೈಎಸ್ಆರ್ಸಿಪಿ ಪಕ್ಷದಿಂದ ಹೊರಬರುವ ಮೂಲಕ ಅಚ್ಚರಿಯ ಬೆಳವಣಿಗೆಗೆ ಕಾರಣರಾಗಿದ್ದ ಮಾಜಿ ಕ್ರಿಕೆಟಿಗ ಅಂಬಟಿ ರಾಯುಡು, ಬುಧವಾರ ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ. ಅವರ ಭೇಟಿ ಬಗ್ಗೆ ಸ್ವತಃ ರಾಯುಡು ಜಾಲತಾಣದಲ್ಲಿ ಕೆಲವು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
- — ATR (@RayuduAmbati) January 10, 2024 " class="align-text-top noRightClick twitterSection" data="
— ATR (@RayuduAmbati) January 10, 2024
">— ATR (@RayuduAmbati) January 10, 2024
''ಆಂಧ್ರಪ್ರದೇಶದ ಜನರ ಸೇವೆ ಮಾಡಲು ಒಳ್ಳೆಯ ಉದ್ದೇಶದಿಂದ ನಾನು ರಾಜಕೀಯಕ್ಕೆ ಬಂದಿರುವೆ. ಈ ಆಸೆಗಳು ಈಡೇರಬಹುದು ಎಂಬ ಕಾರಣದಿಂದ ವೈಎಸ್ಆರ್ಪಿ ಪಕ್ಷವನ್ನು ಸೇರಿಸಿಕೊಂಡಿದ್ದೆ. ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಜನರ ಸಮಸ್ಯೆಗಳನ್ನು ಆಲಿಸಿದ್ದೇನೆ. ವೈಯಕ್ತಿಕವಾಗಿ ಪರಿಹರಿಸಲು ನನ್ನ ಕೈಲಾದಷ್ಟು ಪ್ರಯತ್ನ ಕೂಡ ಮಾಡುತ್ತಿದ್ದೇನೆ. ಆದರೆ, ವೈಎಸ್ಆರ್ಪಿ ಪಕ್ಷದಿಂದ ನಾನು ಕಂಡ ಕನಸು ಈಡೇರದು ಎಂಬ ಕಾರಣದಿಂದ ಪಕ್ಷವನ್ನು ತೊರೆಯಬೇಕಾಯಿತು. ನನ್ನ ಸಿದ್ಧಾಂತ ಮತ್ತು ವೈಎಸ್ಆರ್ಪಿ ಪಕ್ಷದ ಸಿದ್ಧಾಂತ ಹೊಂದಾಣಿಕೆಯಾಗಲಿಲ್ಲ. ರಾಜಕೀಯದಿಂದ ಹಿಂದೆ ಸರಿಯಲೂ ನಿರ್ಧರಿಸಿದ್ದೆ. ಈ ನಡುವೆ ನನ್ನ ಹಿತೈಷಿಗಳು, ಆತ್ಮೀಯ ಸ್ನೇಹಿತರು ಮತ್ತು ಕುಟುಂಬದವರು ಜನಸೇನಾ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗುವಂತೆ ಸಲಹೆ ನೀಡಿದ್ದರು. ಅದರಂತೆ ನಾನು ಅವರನ್ನು ಭೇಟಿಯಾಗಿರುವೆ. ರಾಜಕೀಯ ಸೇರಿ ಅವರೊಂದಿಗೆ ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದೇನೆ. ಅವರ ವಿಚಾರಧಾರೆ ಮತ್ತು ದೃಷ್ಟಿ ನನ್ನಂತೆಯೇ ಇದೆ ಎಂದು ಹೇಳಲು ನನಗೆ ತುಂಬಾ ಸಂತೋಷ ಅನ್ನಿಸುತ್ತಿದೆ. ನನ್ನ ಕ್ರಿಕೆಟ್ ಬದ್ಧತೆಗಳಿಗಾಗಿ ನಾನು ದುಬೈಗೆ ತೆರಳಲಿದ್ದೇನೆ. ಆಂಧ್ರಪ್ರದೇಶದ ಜನರ ಪರ ನಾನು ಸದಾ ಇರುತ್ತೇನೆ'' ಎಂದು ರಾಯುಡು ಪೋಸ್ಟ್ನಲ್ಲಿ ಬರೆದುಕೊಂಡಿದ್ದಾರೆ.
ಗುಂಟೂರು ಜಿಲ್ಲೆಯ ಮಂಗಳಗಿರಿ ಜನಸೇನಾ ಕಚೇರಿಯಲ್ಲಿ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿರುವ ಅಂಬಟಿ ರಾಯುಡು, ಮೂರು ಗಂಟೆಗಳ ಕಾಲ ಚರ್ಚೆ ಸಹ ನಡೆಸಿದ್ದಾರೆ ಎಂಬ ಮಾಹಿತಿ ಕೂಡ ಇದೆ. ರಾಯುಡು, ಆಂಧ್ರಪ್ರದೇಶ ಸಿಎಂ ವೈಎಸ್ ಜಗನ್ಮೋಹನ್ರೆಡ್ಡಿ ಅವರ ನೇತೃತ್ವದ ವೈಎಸ್‌ಆರ್‌ಸಿಪಿಗೆ ಸೇರಿದ್ದರು. ಸೇರಿಕೊಂಡ ಹತ್ತು ದಿನದಲ್ಲಿಯೇ ಪಕ್ಷದಿಂದ ಹೊರ ಬಂದಿದ್ದರು. ಸದ್ಯ ಪವನ್ ಕಲ್ಯಾಣ್ ಅವರೊಂದಿಗಿನ ಈ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.
ಮುಂಬರುವ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಅಂಬಟಿ ರಾಯುಡು ಗುಂಟೂರು ಅಥವಾ ಪಲ್ನಾಡು ಜಿಲ್ಲೆಯಿಂದ ಸ್ಪರ್ಧಿಸುವ ಸಾಧ್ಯತೆ ಇದೆ ಎಂದು ಜನಸೇನಾ ಮೂಲಗಳು ಬಹಿರಂಗಪಡಿಸಿವೆ. ಆದರೆ, ರಾಯುಡು ಆಗಲಿ ಅಥವಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಆಗಲಿ ಅಧಿಕೃತ ಹೇಳಿಕೆ ನೀಡಿಲ್ಲ.
ಡಿಸೆಂಬರ್ 28 ರಂದು ಅಂಬಟಿ ಅವರು ಸಿಎಂ ವೈಎಸ್ ಜಗನ್, ಉಪ ಮುಖ್ಯಮಂತ್ರಿ ನಾರಾಯಣಸ್ವಾಮಿ ಮತ್ತು ಸಂಸದ ಪೆದ್ದಿರೆಡ್ಡಿ ಮಿಥುನ್ ರೆಡ್ಡಿ ಅವರ ಸಮ್ಮುಖದಲ್ಲಿ ವೈಎಸ್‌ಆರ್‌ಸಿಪಿಗೆ ಸೇರ್ಪಡೆಗೊಂಡಿದ್ದರು. ಪಕ್ಷ ಸೇರಿದ ಹತ್ತೇ ದಿನದಲ್ಲಿ ಪಕ್ಷದಿಂದ ಹೊರ ಬಂದಿದ್ದರು. ಇದು ರಾಜಕೀಯ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಮೈದಾನಕ್ಕಿಳಿಯುವ ಮುನ್ನವೇ ಅಂಬಟಿ ಅವರ ವಿಕೆಟ್ ಪತನವಾಗಿದೆ ಎಂಬ ಹೇಳಿಕೆಗಳು ಕೇಳಿ ಬಂದಿದ್ದವು.
ಇದನ್ನು ಓದಿ: 'ಭಾರತ್ ಜೋಡೋ ನ್ಯಾಯ ಯಾತ್ರೆ'ಗೆ ಇನ್ನೂ ಅನುಮತಿ ನೀಡದ ಅಸ್ಸೋಂ ಸರ್ಕಾರ: ಕಾಂಗ್ರೆಸ್ ಗರಂ