ETV Bharat / bharat

ಪ್ರಮುಖ ರಾಜಕಾರಣಿಗಳ ಕ್ಷೇತ್ರದಲ್ಲೇ ರಾಶಿ ರಾಶಿ ಸಮಸ್ಯೆ: ಈ ಗ್ರಾಮಕ್ಕೆ ಇಲ್ಲ ಸರಿಯಾದ ಮೂಲ ಸೌಕರ್ಯ! - ಕೇರಳದಲ್ಲಿ ಮೂಲಸೌಕರ್ಯ ಕೊರತೆ

ಕೇರಳದ ಅಲಪ್ಪುಳ ಜಿಲ್ಲೆಯ ಅಂಬಲಪುಳ ಗ್ರಾಮಕ್ಕೆ ರಸ್ತೆಗಳಿಲ್ಲ, ಕುಡಿಯುವ ನೀರಿನ ಕೊರತೆ ಮತ್ತು ಇತರ ಸೌಲಭ್ಯಗಳು ಮಾಯವಾಗಿದೆ. ರಸ್ತೆಗಳಿಲ್ಲದ ಕಾರಣ ಅನಾರೋಗ್ಯ ಬಂದಾಗ ಆಸ್ಪತ್ರೆಗೆ ತಲುಪುವುದು ಕಷ್ಟ. ಕುಡಿಯುವ ನೀರು ವಾರಕ್ಕೊಮ್ಮೆ ಬರುತ್ತದೆ ನಾಯಕರು ಮತದಾನದ ಸಮಯದಲ್ಲಿ ಭರವಸೆ ನೀಡುತ್ತಾರೆ ಆದರೆ, ಅವುಗಳನ್ನು ಪೂರೈಸುವುದಿಲ್ಲ" ಹೀಗೆಂದು ಇಲ್ಲಿನ ಗ್ರಾಮಸ್ಥರು ಹೇಳುತ್ತಾರೆ.

Ambalapuzha village
ಅಂಬಲಪುಳ ಗ್ರಾಮ ಸರಿಯಾದ ಸೌಕರ್ಯಗಳೇ ಇಲ್ಲ
author img

By

Published : Mar 24, 2021, 7:15 AM IST

ಅಲ್ಲೆಪ್ಪಿ(ಕೇರಳ) : ರಸ್ತೆಗಳಿಲ್ಲ, ಕುಡಿಯುವ ನೀರಿನ ಕೊರತೆ ಮತ್ತು ಇತರ ಸೌಲಭ್ಯಗಳು ಮಾಯವಾಗಿದೆ ಎಂದು ಅಲಪ್ಪುಳ ಜಿಲ್ಲೆಯಿಂದ 13 ಕಿ.ಮೀ ದೂರದಲ್ಲಿರುವ ಅಂಬಲಪುಳ ಪಟ್ಟಣದ ಕಾಂಜಿಪಾಡಂ ಎಂಬ ಗ್ರಾಮದ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅಲ್ಲೆಪ್ಪಿ ಜಿಲ್ಲೆಯ ಅಂಬಲಪ್ಪುಳ (ಉತ್ತರ) ಗ್ರಾಮ ಪಂಚಾಯತ್‌ನ ಕಾಂಞಪದಂ ಗ್ರಾಮದ ಪಶ್ಚಿಮ ಭಾಗದ ನಿವಾಸಿಗಳು ಮಾಧ್ಯಮಕ್ಕೆ ತನ್ನ ಗ್ರಾಮದಲ್ಲಿನ ಸಮಸ್ಯೆಗಳ ಬಗ್ಗೆ ತಿಳಿಸಿದ್ದಾರೆ. "ನಮಗೆ ಇಲ್ಲಿ ರಸ್ತೆ ಇಲ್ಲ. ಯಾರಾದರೂ ಅನಾರೋಗ್ಯಕ್ಕೆ ಒಳಗಾಗಿದ್ದರೆ, ಆಸ್ಪತ್ರೆಗೆ ಹೋಗಲು ನಮಗೆ ಕಷ್ಟವಾಗುತ್ತದೆ. ಕುಡಿಯುವ ನೀರಿನ ಸಮಸ್ಯೆಗಳನ್ನೂ ಎದುರಿಸುತ್ತಿದ್ದೇವೆ" ಎಂದಿದ್ದಾರೆ.

"ಚುನಾವಣಾ ಸಮಯದಲ್ಲಿ ರಾಜಕಾರಣಿಗಳು ಯಾವಾಗಲೂ ನಮಗೆ ರಸ್ತೆಗಳು ಮತ್ತು ಇತರ ಮೂಲ ಸೌಲಭ್ಯಗಳನ್ನು ಒದಗಿಸುವ ಬಗ್ಗೆ ಭರವಸೆ ನೀಡುತ್ತಾರೆ. ಆದರೆ, ಚುನಾವಣೆಯ ನಂತರ ಯಾರೂ ಈ ಭಾಗಕ್ಕೆ ತಿರುಗುವುದಿಲ್ಲ" ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸಿಪಿಐ (ಎಂ)ನ ಜಿ.ಸುಧಾಕರನ್ ಅವರು 2006 ರಿಂದೀಚೆಗೆ ಸತತ ಮೂರು ಬಾರಿ ಅಂಬಲಪುಳದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಅಷ್ಟೇ ಅಲ್ಲದೆ, ಮುಂಬರುವ ಕೇರಳ ವಿಧಾನಸಭಾ ಚುನಾವಣೆಗೆ ಸಿಪಿಐ (ಎಂ)ನ ಅಲಪ್ಪುಳ (ಅಲೆಪ್ಪಿ) ಕ್ಷೇತ್ರದಿಂದ ಸ್ಪರ್ಧಿಸಲು ಕೇರಳ ರಾಜ್ಯ ಮತ್ಸ್ಯಾಫೆಡ್ ಅಧ್ಯಕ್ಷ ಪಿ.ಪಿ.ಚೀತಾರಂಜನ್ ಅವರನ್ನು ಆಯ್ಕೆ ಮಾಡಲಾಗಿದೆ.

ಚುನಾವಣೆ ಬಂದಾಗ ಮತಯಾಚನೆ ವೇಳೆ ಈ ಗ್ರಾಮದ ಬಗ್ಗೆ ರಾಜಕಾರಣಿಗಳಿಗೆ ಅತೀವ ಕಾಳಜಿ ಬರುತ್ತದೆ ಎಂಬುದು ಇಲ್ಲಿನ ಜನರ ಆರೋಪ. ಇನ್ನು ಕೇರಳದ 14 ಜಿಲ್ಲೆಗಳಲ್ಲಿ ಏಪ್ರಿಲ್ 6 ರಂದು ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ.

ಕೇರಳದಲ್ಲಿ ಒಟ್ಟು 2,67,88,268 ಮತದಾರರು ಇದ್ದು, 15ನೇ ವಿಧಾನಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದಾರೆ. ಅಸೆಂಬ್ಲಿ ಪೋಲ್ 2021ಕ್ಕೆ ಕೇರಳದ ಮತಗಟ್ಟೆಗಳ ಸಂಖ್ಯೆಯನ್ನು 21,498 ರಿಂದ 40,771 ಕ್ಕೆ ವಿಸ್ತರಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.