ನವದೆಹಲಿ: ದೆಹಲಿ ಹೈಕೋರ್ಟ್‌ನ ಆದೇಶವನ್ನು ಪ್ರಶ್ನಿಸಿ ಇ - ಕಾಮರ್ಸ್ ದೈತ್ಯ ಅಮೆಜಾನ್ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ರಿಲಯನ್ಸ್ ರೀಟೇಲ್ ಲಿಮಿಟೆಡ್ ಹಾಗೂ ಫ್ಯೂಚರ್ ರೀಟೇಲ್ ನಡುವಿನ 24,713 ಕೋಟಿ ಆಸ್ತಿ ಮಾರಾಟದ ವಿರುದ್ಧ ಅಮೆಜಾನ್ ನ್ಯಾಯಾಲಯದ ಮೊರೆ ಹೋಗಿದೆ.
ಸಿಂಗಾಪುರ್ ಇಂಟರ್ನ್ಯಾಷನಲ್ ಆರ್ಬಿಟ್ರೇಷನ್ ಸೆಂಟರ್ (ಎಸ್‌ಐಎಸಿ)ಯಲ್ಲಿ ತುರ್ತು ಮಧ್ಯಸ್ಥಿಕೆದಾರರ (ಇಎ) ಆದೇಶವನ್ನು ಜಾರಿಗೊಳಿಸಲು ಅಮೆಜಾನ್ ಪ್ರಯತ್ನಿಸುತ್ತಿದೆ. ಎಫ್‌ಆರ್‌ಎಲ್ ತನ್ನ ರೀಟೇಲ್ ಆಸ್ತಿಗಳನ್ನು ವರ್ಗಾಯಿಸಲು ಯಾವುದೇ ಕ್ರಮಗಳನ್ನು ತೆಗೆದುಕೊಳ್ಳದಂತೆ ತಡೆಯಲು ಮುಂದಾಗಿದೆ.
ಅಮೆಜಾನ್‌ನ ಮನವಿಯ ಮೇರೆಗೆ, ದೆಹಲಿ ಹೈಕೋರ್ಟ್‌ನ ಏಕ ನ್ಯಾಯಮೂರ್ತಿಗಳ ಪೀಠವು ಎಫ್‌ಆರ್‌ಎಲ್ ಮತ್ತು ಎನ್‌ಸಿಎಲ್‌ಟಿ, ಸೆಕ್ಯುರಿಟೀಸ್ ಅಂಡ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ ಸೇರಿದಂತೆ ವಿವಿಧ ಶಾಸನಬದ್ಧ ಅಧಿಕಾರಿಗಳಿಗೆ ರಿಲಯನ್ಸ್ ರಿಟೇಲ್‌ನೊಂದಿಗಿನ ತನ್ನ ಆಸ್ತಿ ಮಾರಾಟ ಒಪ್ಪಂದಕ್ಕೆ ಸಂಬಂಧಿಸಿದಂತೆ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಆದೇಶಿಸಿತ್ತು. ಆದರೆ, ಕಿಶೋರ್ ಬಿಯಾನಿ ನೇತೃತ್ವದ ಕಂಪನಿಗೆ ಹಾನಿಕಾರಕ ಪರಿಣಾಮಗಳನ್ನು ಉಂಟುಮಾಡಬಹುದು ಎಂದು ಎಫ್‌ಆರ್‌ಎಲ್ ಮೇಲ್ಮನವಿ ಸಲ್ಲಿಸಿದ ನಂತರ ಫೆಬ್ರವರಿ 8 ರಂದು ಹೈಕೋರ್ಟ್‌ನ ವಿಭಾಗೀಯ ಪೀಠ ಈ ಆದೇಶವನ್ನು ತಡೆ ಹಿಡಿದಿತ್ತು. ಎಫ್‌ಆರ್‌ಎಲ್ ಮತ್ತು ರಿಲಯನ್ಸ್ ರಿಟೇಲ್ ನಡುವಿನ ಆಸ್ತಿ ಮಾರಾಟ ಒಪ್ಪಂದದಲ್ಲಿ ಅಮೆಜಾನ್ ಒಂದು ಪಕ್ಷವಲ್ಲ ಎಂದು ಹೈಕೋರ್ಟ್‌ನ ವಿಭಾಗೀಯ ನ್ಯಾಯಪೀಠ ಹೇಳಿಕೆ ನೀಡಿತ್ತು.
ಫ್ಯೂಚರ್ ಕೂಪನ್ಸ್ ಪ್ರೈವೇಟ್ ಲಿಮಿಟೆಡ್ (ಎಫ್‌ಸಿಪಿಎಲ್) ಷೇರು ಹಿಡುವಳಿ ಒಪ್ಪಂದಕ್ಕೆ ಎಫ್‌ಆರ್‌ಎಲ್ ಸಹಿ ಹಾಕದಿದ್ದರೂ ಸಹ, ಎಫ್‌ಆರ್‌ಎಲ್ ಇನ್ನೂ ಮಧ್ಯಸ್ಥಿಕೆಯ ಪಕ್ಷವಾಗಿದೆ ಎಂಬ ಅಂಶವನ್ನು ಹೈಕೋರ್ಟ್ ಮೆಚ್ಚುವಲ್ಲಿ ವಿಫಲವಾಗಿದೆ ಎಂದು ಸುಪ್ರೀಂಕೋರ್ಟ್‌ನ ಮುಂದೆ ಅಮೆಜಾನ್ ವಾದಿಸಿದೆ. ಹೈಕೋರ್ಟ್‌ನ ಆದೇಶವು ಕಾನೂನು ಬಾಹಿರವಾಗಿದೆ ಮತ್ತು ನ್ಯಾಯವ್ಯಾಪ್ತಿಯಿಲ್ಲದೆ ಅನಿಯಂತ್ರಿತವಾಗಿದೆ ಎಂದು ನ್ಯಾಯಾಲಯದಲ್ಲಿ ಅಮೆಜಾನ್‌ನ ಮೇಲ್ಮನವಿ ಸಲ್ಲಿಸಿದೆ.