ಸ್ಯಾನ್ ಫ್ರಾನ್ಸಿಸ್ಕೋ: ನ್ಯೂ ವರ್ಲ್ಡ್ ಮತ್ತು ಲಾಸ್ಟ್ ಆರ್ಕ್ ಆಫ್ ಲೈಫ್‌ನಂತಹ ಜನಪ್ರಿಯ ಆಟಗಳನ್ನು ಹೊರತಂದಿರುವ ಅಮೆಜಾನ್ ಗೇಮ್ಸ್‌ನ ಸ್ಟುಡಿಯೋ ಮುಖ್ಯಸ್ಥ ಮೈಕ್ ಫ್ರಾಝ್ಝಿನಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.
ಬ್ಲೂಮ್‌ಬರ್ಗ್ ವರದಿಯ ಪ್ರಕಾರ, ಮೈಕ್ ತಮ್ಮ ಕುಟುಂಬದ ಜೊತೆ ಹೆಚ್ಚು ಸಮಯ ಕಳೆಯಲು ಸ್ಟುಡಿಯೋವನ್ನು ತೊರೆಯುತ್ತಿದ್ದೇನೆ ಎಂದು ತಮ್ಮ ಸಿಬ್ಬಂದಿಗೆ ಹೇಳಿದ್ದಾರೆ. ಮೊದಲಿನಿಂದಲೂ ಅಮೆಜಾನ್ ಗೇಮ್ಸ್ ತಂಡದೊಂದಿಗೆ ಮೈಕ್ ಫ್ರಾಝ್ಝಿನಿ ಅವರು ಉತ್ತಮ ಸಂಬಂಧ ಹೊಂದಿದ್ದರು ಎಂದು ಅಮೆಜಾನ್ ವಕ್ತಾರರು ಹೇಳಿದ್ದಾರೆ.
ಅವರ ನಾಯಕತ್ವದಲ್ಲಿಯೇ ಅಮೆಜಾನ್ ಗೇಮ್ಸ್ ಇಷ್ಟೊಂದು ಯಶಸ್ವಿ ಸ್ಥಾನಕ್ಕೆ ತಲುಪಿದೆ. ಸಂಸ್ಥೆಯ ಬೆಳವಣಿಗೆಗೆ ಸಹಕರಿಸಿ ಮೈಕ್ ಅವರ ಕೊಡುಗೆಗೆ ಕಂಪೆನಿಯು ಕೃತಜ್ಞತೆಯನ್ನು ಸಲ್ಲಿಸುತ್ತದೆ. ಮತ್ತು ಅವರ ಉತ್ತಮ ಭವಿಷ್ಯಕ್ಕಾಗಿ ಶುಭ ಹಾರೈಸುತ್ತದೆ ಎಂದು ವಕ್ತಾರರು ಹೇಳಿದರು.
ಇದನ್ನೂ ಓದಿ: ಬಿಜೆಪಿ ಒತ್ತಾಯದ ಮೇರೆಗೆ ಸಚಿವ ಸಹಾನಿ ವಜಾ ಮಾಡಿದ ನಿತೀಶ್ ಕುಮಾರ್
ಮೈಕ್ 2004ರಲ್ಲಿ ತಮ್ಮ ವೃತ್ತಿಜೀವನವನ್ನು ಅಮೆಜಾನ್‌ನ ಪುಸ್ತಕ ವಿಭಾಗದಿಂದ ಪ್ರಾರಂಭಿಸಿದ್ದರು. ಅಮೆಜಾನ್ ತನ್ನ ಗೇಮಿಂಗ್ ವಿಭಾಗದ ಕಾರ್ಯಾಚರಣೆಗೆ ಪ್ರತಿ ವರ್ಷ ಸುಮಾರು $500 ಮಿಲಿಯನ್ ಖರ್ಚು ಮಾಡುತ್ತದೆ.