ETV Bharat / bharat

44 ವಿದೇಶ, 110 ನಗರ ಸುತ್ತಿದ 5 ವರ್ಷದ ಬಾಲಕಿ! - ಈಟಿವಿ ಭಾರತ ಕನ್ನಡ ನ್ಯೂಸ್​

ಮಧ್ಯಪ್ರದೇಶದ ಗ್ವಾಲಿಯರ್​ನ 5 ವರ್ಷದ ಬಾಲಕಿಯೊಬ್ಬಳು 44 ವಿದೇಶಗಳನ್ನು ಪರ್ಯಟನೆ ಮಾಡಿ ಇತಿಹಾಸ ನಿರ್ಮಿಸಿದ್ದಾಳೆ. ಈ ಮಗುವಿನ ಹೆಸರೀಗ ಬುಕ್​ ಆಫ್​ ರೆಕಾರ್ಡ್ಸ್​​ನಲ್ಲಿ ದಾಖಲಾಗಿದೆ.

amazing-5-year-girl-traveled-to-44-countries
44 ವಿದೇಶ, 110 ನಗರಗಳ ಸುತ್ತಿದ್ದ 5 ವರ್ಷದ ಬಾಲಕಿ
author img

By

Published : Aug 2, 2022, 9:32 AM IST

ಗ್ವಾಲಿಯರ್(ಮಧ್ಯಪ್ರದೇಶ): ಚಿಕ್ಕ ಮಕ್ಕಳು ಆಟ - ಪಾಠಕ್ಕೆ ಮಾತ್ರ ಸೀಮಿತ ಎಂಬಂತೆ ನೋಡುತ್ತೇವೆ. ಆದರೆ, ಈ ಬಾಲಕಿ ಮಾತ್ರ ವಿಭಿನ್ನ. ತನ್ನ 5 ವರ್ಷ ವಯಸ್ಸಿನಲ್ಲೇ 44 ದೇಶಗಳು, 110 ಅಂತಾರಾಷ್ಟ್ರೀಯ ನಗರಗಳನ್ನು ಪ್ರದಕ್ಷಿಣೆ ಹಾಕಿದ್ದಾಳೆ. ಮಗುವಿನ ಈ ಸಾಧನೆ ಬುಕ್​ ಆಫ್​ ರೆಕಾರ್ಡ್ಸ್​​ನಲ್ಲಿ ದಾಖಲಾಗಿದೆ.

ಪುಟ್ಟ ಬಾಲಕಿಯ ದಿಟ್ಟ ನೋಟ
ಪುಟ್ಟ ಬಾಲಕಿಯ ದಿಟ್ಟ ನೋಟ

ಗ್ವಾಲಿಯರ್​ ನಿವಾಸಿಯಾದ ಈ ವಿಶಿಷ್ಟ ಬಾಲಕಿಯ ಹೆಸರು ಪಾರಿಜಾ ಖಾನ್​. ಅಪ್ಪ ನೌಕಾಪಡೆಯಲ್ಲಿ ಕ್ಯಾಪ್ಟನ್​. 2016 ರಲ್ಲಿ ಜನಿಸಿದ ಪಾರಿಜಾ ಬರೋಬ್ಬರಿ 44 ದೇಶಗಳನ್ನು ಪರ್ಯಟನೆ ಮಾಡಿದ್ದಾಳೆ. ಹಲವು ಖ್ಯಾತ ನಗರಗಳಿಗೆ ಭೇಟಿ ನೀಡಿದ್ದಾಳೆ.

ವಿದೇಶದಲ್ಲಿ ಬಾಲಕಿ
ವಿದೇಶದಲ್ಲಿ ಬಾಲಕಿ

ಹೇಗೆ ಶುರುವಾಯ್ತು ಪರ್ಯಟನೆ: ನೌಕಾಪಡೆಯಲ್ಲಿ ಕ್ಯಾಪ್ಟನ್​ ಆಗಿದ್ದ ತಂದೆ ಶಾಹಿದ್​ ರಜಾ ಅವರು ಪದೇ ಪದೆ ವರ್ಗಾವಣೆಯಾಗುತ್ತಿದ್ದರು. ಇದರಿಂದ ಕುಟುಂಬವೂ ಜೊತೆಗೆ ವರ್ಗವಾಗುತ್ತಿತ್ತು. ಈ ವೇಳೆ, ಮಗಳು ಪಾರಿಜಾ ಅಪ್ಪನ ಜೊತೆ ವಿವಿಧ ದೇಶಗಳ ಪರ್ಯಟನೆ ಶುರು ಮಾಡಿದ್ದಳು. ಇದಲ್ಲದೇ, ಕುಟುಂಬಸ್ಥರು ಹಲವು ಕಡೆ ಪ್ರವಾಸ ಹೋಗಿದ್ದಾರೆ. ಹೀಗೆ ಪಾರಿಜಾ 44 ದೇಶಗಳನ್ನು ಸುತ್ತಿದ್ದಾರೆ.

ಬುಕ್​ ಆಫ್​ ರೆಕಾರ್ಡ್ಸ್​​ ಜೊತೆ ಬಾಲಕಿ ಕುಟುಂಬ

ಇದರೊಂದಿಗೆ ಅಟ್ಲಾಂಟಿಕ್ ಮಹಾಸಾಗರ, ಪೆಸಿಫಿಕ್ ಸಾಗರ, ಮೆಡಿಟರೇನಿಯನ್ ಸಮುದ್ರ, ಹಿಂದೂ ಮಹಾಸಾಗರ, ತೈವಾನ್ ಸಮುದ್ರ, ಪನಾಮ ಕಾಲುವೆಗಳನ್ನು ದಾಟಿದ ಕೀರ್ತಿಯನ್ನೂ ಹೊಂದಿದ್ದಾಳೆ.

ವಿದೇಶದಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ ಬಾಲಕಿ
ವಿದೇಶದಲ್ಲಿ ಕ್ಯಾಮೆರಾಗೆ ಪೋಸ್​ ನೀಡಿದ ಬಾಲಕಿ

ದಾಖಲೆ ಸೃಷ್ಟಿ: ಈ ಬಗ್ಗೆ ತಂದೆ ಶಾಹಿದ್​ ರಜಾ ಅವರು ಸ್ನೇಹಿತರಿಗೆ ಮಾಹಿತಿ ನೀಡಿದ್ದಾರೆ. ಆಗ ಅವರೆಲ್ಲ ಇದನ್ನು ಬುಕ್​ ಆಫ್​​ ರೆಕಾರ್ಡ್ಸ್​ನಲ್ಲಿ ದಾಖಲಿಸಲು ತಿಳಿಸಿದ್ದಾರೆ. ಗೆಳೆಯರ ಮಾತಿನಂತೆ ಶಾಹಿದ್​ ಅರ್ಜಿ ಸಲ್ಲಿಸಿದ್ದರು. ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿ, ನಂತರ ಪಾರಿಜಾಗೆ ಅತಿ ಹೆಚ್ಚು ವಿದೇಶ ಸುತ್ತಿದ ಬಾಲಕಿ ಎಂಬ ಗೌರವ ನೀಡಿ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್​ನಲ್ಲಿ ಹೆಸರು ದಾಖಲಿಸಲಾಗಿದೆ.

ಓದಿ: ಮನೆಯಲ್ಲಿ ಜಿರಳೆ ಕಾಟವೆಂದು ಔಷಧ ಸಿಂಪಡಣೆ: ಬೆಂಗಳೂರಲ್ಲಿ ಬಾಲಕಿ ಸಾವು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.