ನವದೆಹಲಿ/ಶ್ರೀನಗರ: ಮೇಘಸ್ಫೋಟದಿಂದ ಉಂಟಾದ ಹಠಾತ್ ಪ್ರವಾಹದಿಂದಾಗಿ ಜಮ್ಮು ಮತ್ತು ಕಾಶ್ಮೀರದ ಅಮರನಾಥ ಪವಿತ್ರ ಗುಹೆಯ ಬಳಿ ಸಿಲುಕಿಕೊಂಡಿದ್ದ ಕನಿಷ್ಠ 15,000 ಯಾತ್ರಾರ್ಥಿಗಳನ್ನು ಪಂಜತರ್ನಿಯ ಕೆಳ ಬೇಸ್ ಕ್ಯಾಂಪ್‌ಗೆ ಸ್ಥಳಾಂತರಿಸಲಾಗಿದೆ.
ಯಾತ್ರಾರ್ಥಿಗಳು ಸ್ಥಳಾಂತರ: ಕಳೆದ ಸಂಜೆ ಸಂಭವಿಸಿದ ಹಠಾತ್ ಪ್ರವಾಹದಿಂದಾಗಿ ಪವಿತ್ರ ಗುಹೆ ಪ್ರದೇಶದ ಬಳಿ ಸಿಲುಕಿಕೊಂಡಿದ್ದ ಹೆಚ್ಚಿನ ಯಾತ್ರಿಗಳನ್ನು ಪಂಜತರ್ನಿಗೆ ಸ್ಥಳಾಂತರಿಸಲಾಗಿದೆ. ಈ ಕಾರ್ಯಾಚರಣೆ ನಸುಕಿನಜಾವ 3.38ರ ವರೆಗೆ ನಡೆಯಿತು. ಇದುವರೆಗೆ ಸುಮಾರು 15,000 ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ ಎಂದು ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ) ವಕ್ತಾರರು ತಿಳಿಸಿದ್ದಾರೆ.
ಸಾವು-ನೋವು: ಈ ದುರಂತದಲ್ಲಿ 15 ಮಂದಿ ಸಾವನ್ನಪ್ಪಿದ್ದು, 65ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ. ಪ್ರವಾಹದಲ್ಲಿ ತೀವ್ರವಾಗಿ ಗಾಯಗೊಂಡ ಒಂಬತ್ತು ರೋಗಿಗಳಿಗೆ ಅರೆಸೇನಾ ಪಡೆಯ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿ ಚಿಕಿತ್ಸೆ ನೀಡಿದ್ದಾರೆ. ಪಾದಯಾತ್ರೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ ಎಂದು ಭಾರತೀಯ ಸೇನೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಗಿತಗೊಂಡ ಯಾತ್ರೆ: ದುರಂತದ ನಂತರ ಜೂನ್ 30 ರಂದು ಪ್ರಾರಂಭವಾದ ಯಾತ್ರೆಯನ್ನು ಸ್ಥಗಿತಗೊಳಿಸಲಾಗಿದೆ ಮತ್ತು ರಕ್ಷಣಾ ಕಾರ್ಯಾಚರಣೆ ಮುಗಿದ ನಂತರ ಅದನ್ನು ಪುನಾರಂಭಿಸುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ಆಡಳಿತದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎಂಐ-17 ಹೆಲಿಕಾಪ್ಟರ್ದಿಂದ ರಕ್ಷಣಾ ಕಾರ್ಯ: ಭಾರತೀಯ ವಾಯುಪಡೆಯ ಎಂಐ-17 ಹೆಲಿಕಾಪ್ಟರ್‌ಗಳು ಅಮರನಾಥ ಗುಹೆಯ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಕೈಗೊಂಡಿವೆ. ಬೆಳಗ್ಗೆಯಿಂದ ವಿಮಾನವು ಸ್ಟ್ಯಾಂಡ್‌ಬೈನಲ್ಲಿತ್ತು. ಆದರೆ ಶ್ರೀನಗರ ಮತ್ತು ಪಕ್ಕದ ಪ್ರದೇಶಗಳಲ್ಲಿ ಕೆಟ್ಟ ಹವಾಮಾನದ ಕಾರಣ ಟೇಕ್ ಆಫ್ ಮಾಡಲು ಸಾಧ್ಯವಾಗಲಿಲ್ಲ. ಈಗ ಅವುಗಳ ಕಾರ್ಯಾಚರಣೆ ನಡೆಯುತ್ತಿದೆ. ರಕ್ಷಣಾ ಶ್ವಾನಗಳನ್ನೂ ಕಾರ್ಯಾಚರಣೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಐಎಎಫ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
-
#WATCH | 6 pilgrims evacuated as part of the air rescue operation, this morning. Medical teams present at Nilagrar helipad. Mountain rescue teams & lookout patrols are in the process of searching for the missing.#AmarnathYatra
— ANI (@ANI) July 9, 2022 " class="align-text-top noRightClick twitterSection" data="
(Source: Chinar Corps, Indian Army) pic.twitter.com/NccAaPFsMt
">#WATCH | 6 pilgrims evacuated as part of the air rescue operation, this morning. Medical teams present at Nilagrar helipad. Mountain rescue teams & lookout patrols are in the process of searching for the missing.#AmarnathYatra
— ANI (@ANI) July 9, 2022
(Source: Chinar Corps, Indian Army) pic.twitter.com/NccAaPFsMt#WATCH | 6 pilgrims evacuated as part of the air rescue operation, this morning. Medical teams present at Nilagrar helipad. Mountain rescue teams & lookout patrols are in the process of searching for the missing.#AmarnathYatra
— ANI (@ANI) July 9, 2022
(Source: Chinar Corps, Indian Army) pic.twitter.com/NccAaPFsMt
ಬಿಎಸ್‌ಎಫ್ ತಂಡ ನಿಯೋಜನೆ: ಪವಿತ್ರ ಗುಹೆಯಿಂದ ಬರುವ ಯಾತ್ರಾರ್ಥಿಗಳಿಗೆ ಸಹಾಯ ಮಾಡಲು ನೀಲ್‌ಗ್ರಾತ್ ಹೆಲಿಪ್ಯಾಡ್‌ನಲ್ಲಿ ಸಣ್ಣ ಬಿಎಸ್‌ಎಫ್ ತಂಡವನ್ನು ಸಹ ನಿಯೋಜಿಸಲಾಗಿದೆ. ಶುಕ್ರವಾರ ರಾತ್ರಿ ಪಂಜತರ್ನಿಯಲ್ಲಿ ರಚಿಸಲಾದ ಬಿಎಸ್‌ಎಫ್ ಶಿಬಿರದಲ್ಲಿ ಸುಮಾರು 150 ಯಾತ್ರಿಗಳು ಉಳಿದುಕೊಂಡಿದ್ದರು. ಶನಿವಾರ ಬೆಳಗ್ಗೆ 15 ಗಾಯಾಳುಗಳನ್ನು ಬಾಲ್ಟಾಲ್‌ಗೆ ವಿಮಾನದ ಮೂಲಕ ಕಳುಹಿಸಲಾಗಿದೆ ಎಂದು ಸೇನಾಧಿಕಾರಿ ಹೇಳಿದ್ದಾರೆ.
-
Jammu & Kashmir | 15 dead in the Amarnath cloud burst incident. Rescue operation continues. The foot yatra has been temporarily suspended: Indian Army officials pic.twitter.com/7N5iBpftbW
— ANI (@ANI) July 9, 2022 " class="align-text-top noRightClick twitterSection" data="
">Jammu & Kashmir | 15 dead in the Amarnath cloud burst incident. Rescue operation continues. The foot yatra has been temporarily suspended: Indian Army officials pic.twitter.com/7N5iBpftbW
— ANI (@ANI) July 9, 2022Jammu & Kashmir | 15 dead in the Amarnath cloud burst incident. Rescue operation continues. The foot yatra has been temporarily suspended: Indian Army officials pic.twitter.com/7N5iBpftbW
— ANI (@ANI) July 9, 2022
ಸಹಾಯವಾಣಿ: ಈ ದುರ್ಘಟನೆಯಲ್ಲಿ ನಿಮ್ಮ ಸಂಬಂಧಿಕರು ಸಿಲುಕೊಂಡಿದ್ರೆ Indian Army ಸಹಾಯವಾಣಿ ಸಂಖ್ಯೆ - 9149720998 ಗೆ ಕರೆ ಮಾಡಿ ಮಾಹಿತಿ ತಿಳಿದುಕೊಳ್ಳಬಹುದಾಗಿದೆ.