ETV Bharat / bharat

ಮದರಸಾ ಪ್ರಾಂಶುಪಾಲರಿಂದ ಆರನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಆರೋಪ - ವಿದ್ಯಾರ್ಥಿನಿ ಮೇಲೆ ಅತ್ಯಾಚಾರ

ಬಾಲಕಿಗೆ ಮೊಬೈಲ್​ ನೀಡುವುದಾಗಿ ಆಸೆ ತೋರಿಸಿ, ಮೊಬೈಲ್​ ಬಳಸಲು ಕೊಟ್ಟು ಬಾಲಕಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ. ಸುಮಾರು ಎರಡು ತಿಂಗಳ ಕಾಲ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

Allegation Madrasa Principal Raped 6th Class Girl
ಮದರಸಾ ಪ್ರಾಂಶುಪಾಲರಿಂದ ಆರನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ ಆರೋಪ
author img

By

Published : Nov 12, 2022, 7:55 PM IST

ಗಾಜಿಯಾಬಾದ್(ಉತ್ತರಪ್ರದೇಶ): ಗಾಜಿಯಾಬಾದ್‌ನ ಮಸ್ಸೂರಿ ಪ್ರದೇಶದ ಮದರಸಾವೊಂದರಲ್ಲಿ ಆರನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರವೆಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಹಲವು ದಿನಗಳಿಂದ ಬಾಲಕಿ ಮೇಲೆ ನಿರಂತರವಾಗಿ ಅತ್ಯಾಚಾರವಾಗುತ್ತಿದ್ದು, ಬಾಲಕಿ ಯಾರ ಜೊತೆಯೂ ಹಂಚಿಕೊಂಡಿರಲಿಲ್ಲ. ವಿಷಯ ತಿಳಿದ ಕೂಡಲೇ ಪೋಷಕರು ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆಯ ತಾಯಿ ನೀಡಿರುವ ದೂರಿನಲ್ಲಿ, ಕೆಲವು ಸಮಯದ ಹಿಂದೆ 13 ವರ್ಷದ ಮಗಳನ್ನು ಮದರಸಾ ಶಾಲೆಗೆ ಸೇರಿಸಿದ್ದೆವು. ಕೆಲವು ದಿನಗಳಿಂದ ಮಗಳ ಆರೋಗ್ಯದಲ್ಲಿ ಬದಲಾವಣೆ ಕಂಡು ಬಂದಿದ್ದು, ತಾಯಿ ಮಗಳನ್ನು ವಿಚಾರಿಸಿದ್ದಾರೆ. ಒತ್ತಾಯ ಮಾಡಿ ವಿಚಾರಿಸಿದಾಗ ಮಗಳು ಶಾಲೆಯಲ್ಲಿ ತನ್ನ ಮೇಲೆ ಅತ್ಯಾಚಾರ ನಡೆದಿರುವು ಕುರಿತು ತಿಳಿಸಿದ್ದಾರೆ ಎಂದು ಹೇಳಿದ್ದಾರೆ.

ಶಾಲೆ ಮುಗಿದ ನಂತರ ಪಾಠ ಹೇಳಿಕೊಡುವ ನೆಪದಲ್ಲಿ ಶಾಲೆಯ ಪ್ರಾಂಶುಪಾಲ ಶಹಾದತ್​ ಅಸಭ್ಯವಾಗಿ ವರ್ತಿಸಿರುವುದಾಗಿ ಮಗಳು ಹೇಳಿಕೊಂಡಿದ್ದಾಳೆ. ಪ್ರಾಂಶುಪಾಲ ಹಲವು ದಿನಗಳ ಕಾಲ ಇದೇ ರೀತಿ ಮಾಡುತ್ತಿದ್ದನು. ಬಾಲಕಿಗೆ ಮೊಬೈಲ್​ ನೀಡುವುದಾಗಿ ಆಸೆ ತೋರಿಸಿ, ಮೊಬೈಲ್​ ಬಳಸಲು ಕೊಟ್ಟು ಬಾಲಕಿ ಜೊತೆ ಅಶ್ಲೀಲವಾಗಿ ನಡೆದುಕೊಳ್ಳುತ್ತಿದ್ದ. ಸುಮಾರು ಎರಡು ತಿಂಗಳ ಕಾಲ ಬಾಲಕಿಯನ್ನು ಬೆದರಿಸಿ ನಿರಂತರವಾಗಿ ಅತ್ಯಾಚಾರ ಎಸಗಿದ್ದಾರೆ ಎಂದು ಪೋಷಕರು ದೂರಿನಲ್ಲಿ ತಿಳಿಸಿದ್ದಾರೆ.

ಈ ವಿಷಯವನ್ನು ಪೋಷಕರಿಗೆ ತಿಳಿಸಿದರೆ, ಬಾಲಕಿಯ ಸಹೋದರನನ್ನು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ಆದ್ದರಿಂದ ಈ ವಿಷಯವನ್ನು ಬಾಲಕಿ ಮನೆಯವರಿಗೆ ಹೇಳದೆ, ಮುಚ್ಚಿಟ್ಟಿದ್ದಳು. ವಿಷಯ ತಿಳಿಯುತ್ತಿದ್ದಂತೆ ಮನೆಯವರು ನೀಡಿದ ದೂರಿನ ಮೇರೆಗೆ ಪೊಲೀಸರು ಎಫ್​ಐಆರ್​ ದಾಖಲಿಸಿಕೊಂಡಿದ್ದಾರೆ. ಆರೋಪಿಗಳನ್ನು ಶೀಘ್ರವೇ ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಇದನ್ನೂ ಓದಿ: Kalburgi Rape and murder Case: ಅಶ್ಲೀಲ ವಿಡಿಯೋಗಳನ್ನು ನೋಡಿ ಪ್ರಚೋದನೆಗೊಂಡು ಕೃತ್ಯ!

ETV Bharat Logo

Copyright © 2025 Ushodaya Enterprises Pvt. Ltd., All Rights Reserved.