ಲಖನೌ (ಉತ್ತರಪ್ರದೇಶ) : ಪೊಲೀಸ್ ಕಾನ್ಸ್ಟೇಬಲ್ಗಳು ಗಡ್ಡ ಬೆಳೆಸಲು ಅನುಮತಿ ನಿರಾಕರಿಸಿರುವ ಅಲಹಾಬಾದ್ ಹೈಕೋರ್ಟ್, ಉನ್ನತ ಅಧಿಕಾರಿಗಳ ಸೂಚನೆಯ ಹೊರತಾಗಿಯೂ ಗಡ್ಡ ಕತ್ತರಿಸಲು ನಿರಾಕರಿಸಿದರೆ ಅದು ಪೊಲೀಸರೇ ಮಾಡುವ ಅಪರಾಧವಾಗುತ್ತದೆ ಎಂದು ತಿಳಿಸಿದೆ.
ಮೊಹಮ್ಮದ್ ಫರ್ಮನ್ ಎಂಬ ಕಾನ್‌ಸ್ಟೇಬಲ್ ಒಬ್ಬರು ಗಡ್ಡ ಬೆಳೆಸಲು ಅನುಮತಿ ಕೋರಿ ಉನ್ನತ ನ್ಯಾಯಾಲಯಕ್ಕೆ ರಿಟ್ ಅರ್ಜಿ ಸಲ್ಲಿಸಿದ್ದರು. ಅರ್ಜಿಯ ವಿಚಾರಣೆ ನಡೆಸಿರುವ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅವರನ್ನೊಳಗೊಂಡ ನ್ಯಾಯಪೀಠವು, ಭಾರತದ ಸಂವಿಧಾನದ 25ನೇ ವಿಧಿಯ ಪ್ರಕಾರ ಶಿಸ್ತಿನ ಪಡೆಯ ಸದಸ್ಯರು ಗಡ್ಡ ಬೆಳೆಸುವಂತಿಲ್ಲ ಎಂದು ಹೇಳಿದೆ.
ಇದನ್ನೂ ಓದಿ: ದೇಶದಲ್ಲಿ 363 ಸಂಸದರು, ಶಾಸಕರ ವಿರುದ್ಧ ಕ್ರಿಮಿನಲ್ ಕೇಸ್; ಬಿಜೆಪಿಗೆ ಅಗ್ರ ಸ್ಥಾನ-ADR Report
2020ರ ಅಕ್ಟೋಬರ್ 26ರಂದೇ ಲಖನೌ ಪೊಲೀಸ್ ಮಹಾನಿರ್ದೇಶಕರು ಈ ಬಗ್ಗೆ ಸುತ್ತೋಲೆ ಹೊರಡಿಸಿದ್ದರು. ಉನ್ನತ ಅಧಿಕಾರಿಗಳ ಸೂಚನೆಯ ಹೊರತಾಗಿಯೂ ಗಡ್ಡ ಬಿಟ್ಟರೆ ಅಥವಾ ಗಡ್ಡವನ್ನು ಕತ್ತರಿಸಲು ನಿರಾಕರಿಸಿದರೆ ಇದು ಕೇವಲ ತಪ್ಪು ನಡವಳಿಕೆ ಮಾತ್ರವಲ್ಲದೇ ಅಪರಾಧ ಕೂಡ ಹೌದು ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.