ETV Bharat / bharat

ಇಂದು ಸ್ಯಾನ್ ಫ್ರಾನ್ಸಿಸ್ಕೊ- ಬೆಂಗಳೂರು ವಿಮಾನಯಾನ ಆರಂಭ..! - ಕ್ಯಾಪ್ಟನ್ ಜೋಯಾ ಅಗರ್‌ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ

ಕ್ಯಾಪ್ಟನ್ ಜೋಯಾ ಅಗರ್‌ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ಮಹಿಳಾ ಕಾಕ್‌ಪಿಟ್ ಸಿಬ್ಬಂದಿ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವಿನ ಐತಿಹಾಸಿಕ ಉದ್ಘಾಟನಾ ಹಾರಾಟವನ್ನು ನಿರ್ವಹಿಸಲಿದ್ದಾರೆ ಎಂದು ಸಚಿವ ಪುರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ವಿಮಾನಯಾನ
ವಿಮಾನಯಾನ
author img

By

Published : Jan 9, 2021, 1:11 PM IST

ನವದೆಹಲಿ: ಇಂದು ಆರಂಭಗೊಳ್ಳಲಿರುವ ಸ್ಯಾನ್ ಫ್ರಾನ್ಸಿಸ್ಕೊ- ಬೆಂಗಳೂರು ಮಾರ್ಗದ ವಿಮಾನಗಳನ್ನು ಮಹಿಳಾ ಪೈಲಟ್​ಗಳೇ ಚಲಾಯಿಸಲಿದ್ದಾರೆ ಅಂತಾ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ತಿಳಿಸಿದ್ದಾರೆ.

ಏರ್ ಇಂಡಿಯಾ ವಿಮಾನವು ಅಟ್ಲಾಂಟಿಕ್ ಮಾರ್ಗವಾಗಿ ಬೆಂಗಳೂರು ತಲುಪಲಿದೆ ಎಂದು ವಿಮಾನಯಾನದ ಹಿರಿಯ ಅಧಿಕಾರಿ ಮಾಹಿತಿ ನೀಡಿದ್ದಾರೆ. ಕ್ಯಾಪ್ಟನ್ ಜೋಯಾ ಅಗರ್‌ವಾಲ್, ಕ್ಯಾಪ್ಟನ್ ಪಾಪಗರಿ ತನ್ಮೈ, ಕ್ಯಾಪ್ಟನ್ ಆಕಾಶಾ ಸೋನವೇರ್ ಮತ್ತು ಕ್ಯಾಪ್ಟನ್ ಶಿವಾನಿ ಮನ್ಹಾಸ್ ಅವರನ್ನೊಳಗೊಂಡ ಮಹಿಳಾ ಕಾಕ್‌ಪಿಟ್ ಸಿಬ್ಬಂದಿ ಬೆಂಗಳೂರು ಮತ್ತು ಸ್ಯಾನ್ ಫ್ರಾನ್ಸಿಸ್ಕೊ ನಡುವಿನ ಐತಿಹಾಸಿಕ ಉದ್ಘಾಟನಾ ಹಾರಾಟವನ್ನು ನಿರ್ವಹಿಸಲಿದ್ದಾರೆ ಎಂದು ಸಚಿವ ಪುರಿ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

ವಿಶ್ವದಲ್ಲಿ ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಬೆಂಗಳೂರು ನಡುವಿನ ವೈಮಾನಿಕ ಅಂತರವು ಹೆಚ್ಚಾಗಿದ್ದು, ಏರ್​ ಇಂಡಿಯಾ ಮೂಲಕ ‘ಮಹಿಳಾ ಶಕ್ತಿ’ ಇಡೀ ಜಗತ್ತಿಗೆ ಪಸರಿಸುತ್ತದೆ ಎಂದು ಪುರಿ ಅಭಿಪ್ರಾಯ ಪಟ್ಟಿದ್ದಾರೆ.

ಫ್ರಾನ್ಸಿಸ್ಕೋದಿಂದ ಎಐ 176 ವಿಮಾನವು ಶನಿವಾರ ರಾತ್ರಿ 8.30 (ಸ್ಥಳೀಯ ಸಮಯ) ಕ್ಕೆ ಹೊರಡಲಿದ್ದು, ಸೋಮವಾರ ಮುಂಜಾನೆ 3.45 ಕ್ಕೆ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಯಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.