ತಿರುವನಂತಪುರಂ: ಕೇರಳ ವಿಧಾನಸಭೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಸಭಾಧ್ಯಕ್ಷರು ಮತ್ತು ಉಪಸಭಾಪತಿಗಳ ಅನುಪಸ್ಥಿತಿಯಲ್ಲಿ ಎಲ್ಲಾ ಮಹಿಳಾ ಅಧ್ಯಕ್ಷರ ಸಮಿತಿಯು ಸದನದ ಕಲಾಪಗಳ ಅಧ್ಯಕ್ಷತೆ ವಹಿಸಲಿದೆ. ಸ್ಪೀಕರ್ ಎ.ಎನ್ ಶಂಶೀರ್ ಐತಿಹಾಸಿಕ ನಿರ್ಧಾರ ಕೈಗೊಂಡಿದ್ದಾರೆ.
ಸಾಮಾನ್ಯವಾಗಿ ಮೂವರು ಸದಸ್ಯರ ಸಮಿತಿಯಲ್ಲಿ ಒಬ್ಬ ಮಹಿಳೆ ಇರುತ್ತಾರೆ. ಆದರೆ, ಈ ಬಾರಿಯ ವಿಧಾನಸಭೆ ಅಧಿವೇಶನದಲ್ಲಿ ಮೂವರೂ ಮಹಿಳೆಯರೇ ಆಗಿರುತ್ತಾರೆ. ಆಡಳಿತಾರೂಢ ಎಡಪಕ್ಷಗಳು ಎರಡು ಮತ್ತು ವಿರೋಧ ಪಕ್ಷವಾದ ಯುಡಿಎಫ್ ಒಬ್ಬರನ್ನು ಸೂಚಿಸಿವೆ. ತ್ರಿಸದಸ್ಯ ಸಮಿತಿಯು ಸಿಪಿಐನಿಂದ ಶಾಸಕಿ ಆಶಾ ಸಿ.ಕೆ, ಸಿಪಿಐ(ಎಂ) ನಿಂದ ಯು.ಪ್ರತಿಭಾ ಮತ್ತು ಯುಡಿಎಫ್ ಮಿತ್ರಪಕ್ಷವಾದ ರೆವಲ್ಯೂಷನರಿ ಮಾರ್ಕ್ಸಿಸ್ಟ್ ಪಾರ್ಟಿ ಆಫ್ ಇಂಡಿಯಾದ ಕೆ.ಕೆ ರೆಮಾ ಅವರನ್ನು ಒಳಗೊಂಡಿದೆ.
ಕೇರಳ ವಿಧಾನಸಭೆಯ ಮೊದಲ ಅಧಿವೇಶನದಿಂದ ಪ್ರಸಕ್ತ ಅಧಿವೇಶನದವರೆಗೆ ಒಟ್ಟು 515 ಸದಸ್ಯರಲ್ಲಿ 32 ಮಹಿಳೆಯರು ಮಾತ್ರ ಅದರ ಭಾಗವಾಗಿದ್ದಾರೆ. ಸದನದಲ್ಲಿ ಕಾಂಗ್ರೆಸ್ ಶಾಸಕಿ ಉಮಾ ಥಾಮಸ್ ಇದ್ದರೂ ಯುಡಿಎಫ್ ರೆಮಾ ಅವರ ಹೆಸರನ್ನು ಸೂಚಿಸಿದೆ. ಎಂ.ಬಿ.ರಾಜೇಶ್ ಬದಲಿಗೆ ಶಂಸೀರ್ ಅವರು ಸ್ಪೀಕರ್ ಆದ ನಂತರ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಅಧಿವೇಶನ ಡಿ.5 ರಿಂದ 15 ರವರೆಗೆ ನಡೆಯಲಿದೆ.
ಇದನ್ನೂ ಓದಿ: ಹಿಂದು ಸಂಪ್ರದಾಯಕ್ಕೆ ತಲೆಬಾಗಿದ ಬ್ರೆಜಿಲ್ ಭಕ್ತರು.. ಕಾಳಹಸ್ತೇಶ್ವರನಿಗೆ ವಿಶೇಷ ಪೂಜೆ