ನವದೆಹಲಿ: ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ (ಎಐಕೆಎಸ್‌ಸಿಸಿ)ಯೂ ಸೋಮವಾರ ಕನ್ವೀನರ್ ಹುದ್ದೆಯನ್ನು ತೆಗೆದುಹಾಕಲು ನಿರ್ಧರಿಸಿದ್ದು, ಇದನ್ನು ವಿ. ಎಂ. ಸಿಂಗ್ ಅವರು ನಿಭಾಯಿಸುತ್ತಿದ್ದರು. ಕಾರಣ ಶನಿವಾರ ಅವರು ರೈತರು ಕೇಂದ್ರದೊಂದಿಗೆ ಮಾತುಕತೆಗೆ ಸಿದ್ಧರಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು.
ಇನ್ಮುಂದೆ ಎಲ್ಲ ನಿರ್ಧಾರಗಳನ್ನು ಕಾರ್ಯನಿರತ ಗುಂಪು ಮಾತ್ರ ತೆಗೆದುಕೊಳ್ಳುತ್ತದೆ. ಅದು ಎಐಕೆಎಸ್‌ಸಿಸಿಯ ಅಧಿಕೃತ ಸ್ಥಾನವಾಗಿರುತ್ತದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಎಐಕೆಎಸ್‌ಸಿಸಿಯ ರಾಷ್ಟ್ರೀಯ ಕಾರ್ಯನಿರತ ಗುಂಪುೆ ಸಭೆ ಸೇರಿ ಕನ್ವೀನರ್ ಹುದ್ದೆಯನ್ನು ತೆಗೆದುಹಾಕಲು ನಿರ್ಧರಿಸಿದೆ. ಇನ್ಮುಂದೆ ಎಐಕೆಎಸ್‌ಸಿಸಿಯ ಎಲ್ಲ ನಿರ್ಧಾರಗಳನ್ನು ಕಾರ್ಯನಿರತ ಗುಂಪು ಮಾತ್ರ ತೆಗೆದುಕೊಳ್ಳುತ್ತದೆ, ಅದು ಎಐಕೆಎಸ್‌ಸಿಸಿಯ ಅಧಿಕೃತ ಸ್ಥಾನವಾಗಿರುತ್ತದೆ ”ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ.
ಜೈಪುರ - ದೆಹಲಿ ಹೆದ್ದಾರಿಯಯನ್ನು ಭಾನುವಾರ ಶಾಜಾಪುರ ಗಡಿಯಲ್ಲಿ ತೆರೆಯಲಾಯಿತು. ರೈತ ಸಂಘಟನೆಗಳು ರಾತ್ರಿಯಿಡಿ ಗಡಿಯಲ್ಲಿ ಬೀಡುಬಿಟ್ಟಿವೆ. ಇಂದಿನಿಂದ ರಾಜಸ್ಥಾನ ಮತ್ತು ಹರಿಯಾಣದ ರೈತರು ಶಾಜಾಪುರಕ್ಕೆ ತೆರಳುತ್ತಿದ್ದಾರೆ.
ಇದನ್ನು ಓದಿ:ದೆಹಲಿ ಚಲೋ: ರೈತರಿಂದ ಇಂದು ಉಪವಾಸ ಸತ್ಯಾಗ್ರಹ
ಎಲ್ಲ ರಾಜ್ಯಗಳಲ್ಲಿ ಟೋಲ್ ಪ್ಲಾಜಾಗಳನ್ನು ನಿರ್ಬಂಧಿಸಲಾಗಿದೆ. ಪ್ರತಿಭಟನಾಕಾರರು ಹಲವಾರು ರಿಲಯನ್ಸ್ ಮಾಲ್, ಅಂಗಡಿಗಳು ಮತ್ತು ಪೆಟ್ರೋಲ್ ಪಂಪ್‌ಗಳಲ್ಲಿ ವಿಶೇಷವಾಗಿ ಮಹಾರಾಷ್ಟ್ರ, ಜಾರ್ಖಂಡ್ ಮತ್ತು ಒಡಿಶಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.
"ಬಿಜೆಪಿ ನೇತೃತ್ವದ ಸರ್ಕಾರಗಳು ನಮ್ಮ ಪ್ರತಿಭಟನೆಗಳನ್ನು ಹತ್ತಿಕ್ಕಲು ನಾಯಕರನ್ನು ಬಂಧಿಸುತ್ತಿವೆ" ಎಂದು ಸಮಿತಿ ಹೇಳಿದೆ.