ETV Bharat / bharat

ಗುಜರಾತ್​ ಚುನಾವಣೆ: ಸೂರತ್​ನ ಎಲ್ಲ ಅಭ್ಯರ್ಥಿಗಳು ಅಜ್ಞಾತ ಸ್ಥಳಕ್ಕೆ ಶಿಫ್ಟ್​ ಮಾಡಿದ ಆಪ್​

ಗುಜರಾತ್​ ಚುನಾವಣೆಗೆ ನಾಮಪತ್ರ ಸಲ್ಲಿಸಿರುವ ಸೂರತ್ ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಆಮ್​ ಆದ್ಮಿ ಪಕ್ಷ ಅಜ್ಞಾತ ಸ್ಥಳಕ್ಕೆ ಸ್ಥಳಾಂತರಗೊಳಿಸಿದೆ.

All candidates from Surat Aam Admi party shifted to unknown location
ಗುಜರಾತ್​ ಚುನಾವಣೆ: ಸೂರತ್​ನ ಎಲ್ಲ ಅಭ್ಯರ್ಥಿಗಳು ಅಜ್ಞಾತ ಸ್ಥಳಕ್ಕೆ ಶಿಫ್ಟ್​ ಮಾಡಿದ ಆಪ್​
author img

By

Published : Nov 17, 2022, 4:53 PM IST

ಸೂರತ್ (ಗುಜರಾತ್): ಗುಜರಾತ್ ವಿಧಾನಸಭಾ ಚುನಾವಣೆಗೆ ಮತದಾನ ದಿನಾಂಕ ಹತ್ತಿರವಾಗುತ್ತಿದೆ. ಬುಧವಾರ ನಡೆದ ಹೈಡ್ರಾಮದಲ್ಲಿ ಸೂರತ್​ನ ಪೂರ್ವ ಕ್ಷೇತ್ರದ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿಯಾಗಿದ್ದ ಕಾಂಚನ್ ಜರಿವಾಲಾ ಏಕಾಏಕಿ ತಮ್ಮ ನಾಮಪತ್ರ ವಾಪಸ್​ ಪಡೆದುಕೊಂಡು ಶಾಕ್​ ನೀಡಿದ್ದಾರೆ. ಇದರಿಂದ ಆಪ್​ ನಾಯಕರು ಎಚ್ಚೆತ್ತುಕೊಂಡಿದ್ದು, ಸೂರತ್​ ಜಿಲ್ಲೆಯಲ್ಲಿ ಬರುವ ವಿಧಾನಸಭಾ ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ.

ಒಟ್ಟಾರೆ 182 ಸದಸ್ಯ ಬಲದ ಗುಜರಾತ್​ ವಿಧಾನಸಭೆಗೆ ಡಿ.1 ಮತ್ತು 5ರಂದು ಎರಡು ಹಂತದಲ್ಲಿ ಚುನಾವಣೆ ನಡೆಯಲಿದೆ. ಅದರಲ್ಲೂ ಮೊದಲ ಹಂತದ ಚುನಾವಣೆಗೆ ನಾಮಪತ್ರ ಹಿಂಪಡೆಯಲು ಇಂದು ಕೊನೆಯ ದಿನವಾಗಿದೆ. ಆದ್ದರಿಂದ ಕಾಂಚನ್ ಜರಿವಾಲಾ ಇದ್ದಕ್ಕಿದ್ದಂತೆ ನಾಮಪತ್ರ ಹಿಂಪಡೆದಿದ್ದರಿಂದ ಆಮ್ ಆದ್ಮಿ ಪಕ್ಷ ಮುಂದೆಯೂ ಇಂತಹ ಯಾವುದೇ ಅಪಾಯವನ್ನು ಮೈಮೇಲೆ ಎಳೆದುಕೊಳ್ಳಲು ಸಿದ್ಧವಾಗಿಲ್ಲ.

ಆಮ್​ ಆದ್ಮಿ ಲೆಕ್ಕಾಚಾರ: ದಕ್ಷಿಣ ಗುಜರಾತ್‌ನಲ್ಲಿ ಆಮ್ ಆದ್ಮಿ ಪಕ್ಷ ತನ್ನದೇ ಆಗ ಲೆಕ್ಕಾಚಾರವನ್ನು ಹೊಂದಿದೆಯಂತೆ. ಹೀಗಾಗಿಯೇ ಈ ಲೆಕ್ಕಾಚಾರ ತಲೆ ಕೆಳಗಾಗದಂತೆ ನೋಡಿಕೊಳ್ಳಲು ಮುಂದಾಗಿದೆ. ವಿಶೇಷವಾಗಿ ಈ ಹಿಂದೆ ಆಮ್ ಆದ್ಮಿ ಪಕ್ಷವು ಸೂರತ್‌ ಪಾಲಿಕೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿತ್ತು. ಇದರ ಫಲಿತಾಂಶದ ಆಧಾರದ ಮೇಲೆ ವಿಧಾನಸಭೆ ಚುನಾವಣೆಯನ್ನೂ ಎದುರಿಸಲು ಆಮ್ ಆದ್ಮಿ ಪಕ್ಷ ಸಜ್ಜಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ಆಮ್ ಆದ್ಮಿ ಪಕ್ಷದ ವರಿಷ್ಠ ಅರವಿಂದ್ ಕೇಜ್ರಿವಾಲ್ ಭಾರಿ ಪ್ರಚಾರದಲ್ಲೂ ತೊಡಗಿಸಿಕೊಂಡಿದ್ದಾರೆ. ಆದರೆ, ಇದರ ನಡುವೆ ಸೂರತ್​ನ ಪೂರ್ವ ಕ್ಷೇತ್ರದ ಅಭ್ಯರ್ಥಿಯಾಗಿದ್ದ ಕಾಂಚನ್ ಜರಿವಾಲಾ ತಮ್ಮ ನಾಮಪತ್ರ ಹಿಂಪಡೆದಿರುವುದು ಆಮ್​ ಆದ್ಮಿ ಪಕ್ಷವನ್ನು ಚಿಂತೆಗೀಡು ಮಾಡಿದೆ. ನಾಮಪತ್ರಗಳ ವಾಪಸ್​ ಪಡೆಯುವಂತೆ ಪ್ರತಿಪಕ್ಷಗಳು ಆಪ್​ ಅಭ್ಯರ್ಥಿಗಳ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂಬ ಸಂಶಯವೂ ಆಪ್​ಗೆ ಕಾಡುತ್ತಿದೆಯಂತೆ.

ಇದನ್ನೂ ಓದಿ: ಪಶ್ಚಿಮ ಬಂಗಾಳ: ಕಾರ್ಯಕ್ರಮದ ವೇದಿಕೆಯಲ್ಲೇ ಕೇಂದ್ರ ಸಚಿವ ನಿತಿನ್​ ಗಡ್ಕರಿ ಅಸ್ವಸ್ಥ

ಆದ್ದರಿಂದ ತಮ್ಮ ಯಾವುದೇ ಅಭ್ಯರ್ಥಿಗಳ ನಾಮಪತ್ರಗಳನ್ನು ಹಿಂಪಡೆಯದಂತೆ ತಡೆಯುವ ಪ್ರಯತ್ನವಾಗಿದೆ ಎಂದು ಅಭ್ಯರ್ಥಿಗಳನ್ನು ಅಜ್ಞಾತ ಸ್ಥಳಕ್ಕೆ ಸ್ಥಳಾಂತರ ಮಾಡಿದೆ ಎಂದು ಹೇಳಲಾಗ್ತಿದೆ. ಚುನಾವಣೆ ಹತ್ತಿರವಾಗುತ್ತಿದ್ದಂತೆ ಹಲವಾರು ಅಭ್ಯರ್ಥಿಗಳು ಕೊನೆಯ ಕ್ಷಣದಲ್ಲಿ ಪಕ್ಷ ಬದಲಾಯಿಸುತ್ತಿರುವುದು ಕೂಡ ಇದಕ್ಕೆ ಕಾರಣವಂತೆ.

ನಿನ್ನೆ ಬಿಜೆಪಿ ವಿರುದ್ಧ ಆರೋಪ ಮಾಡಿದ್ದ ಆಪ್​: ಇನ್ನು, ಸೂರತ್ ಪೂರ್ವ ವಿಧಾನಸಭಾ ಕ್ಷೇತ್ರದಲ್ಲಿ ಆಮ್​ ಆದ್ಮಿ ಪಕ್ಷದಿಂದ ಕಾಂಚನ್ ಜರಿವಾಲಾ ಸಲ್ಲಿಸಿದ್ದ ನಾಮಪತ್ರ ಅನರ್ಹಗೊಳಿಸಲು ಬಿಜೆಪಿ ಹಲವು ಪ್ರಯತ್ನಗಳನ್ನು ಮಾಡಿತ್ತು ಎಂದು ಬುಧವಾರ ಆಮ್​ ಆದ್ಮಿ ಪಕ್ಷ ಆರೋಪಿಸಿತ್ತು. ಅಲ್ಲದೇ, ಚುನಾವಣೆಯಲ್ಲಿ ಸೋಲಿನ ಭೀತಿಯಿಂದ ಕಾಂಚನ್​ ಜರಿವಾಲಾರನ್ನು ಬಿಜೆಪಿಯವರು ಅಪಹರಿಸಿ, ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದ್ದಾರೆ ಎಂದೂ ಆಪ್​ ಹಿರಿಯ ನಾಯಕರಾದ ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ದೂರಿದ್ದರು.

ಆದರೆ, ಕಾಂಚನ್ ಜರಿವಾಲಾ ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ್ದರು. ಆಪ್​ ಕಾರ್ಯಕರ್ತರು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. 80 ಲಕ್ಷದಿಂದ 1 ಕೋಟಿ ರೂಪಾಯಿ ಖರ್ಚು ಮಾಡುವಷ್ಟು ಸಾಮರ್ಥ್ಯ ನನಗಿಲ್ಲ. ಅವರ ಬೇಡಿಕೆ ಎಷ್ಟಿತ್ತೆಂದರೆ ಅದನ್ನು ಈಡೇರಿಸಲು ಸಾಧ್ಯವಾಗುತ್ತಿರಲಿಲ್ಲ. ಅಲ್ಲದೇ, ಆಪ್​ ನಾಯಕರು ಬಿಜೆಪಿಯ ಮೇಲೆ ಸುಳ್ಳು ಆರೋಪ ಮಾಡುತ್ತಿದ್ದಾರೆ. ಬಿಜೆಪಿಯವರು ನನ್ನನ್ನು ಅಪಹರಿಸಿ ಇರಲಿಲ್ಲ ಎಂದು ಕಾಂಚನ್ ಜರಿವಾಲಾ ಹೇಳಿದ್ದರು.

ಇದನ್ನೂ ಓದಿ: ಗುಜರಾತ್​ನಲ್ಲಿ ಹೀಗೊಂದು ಹೈಡ್ರಾಮ: 'ಕಿಡ್ನಾಪ್​' ಆದ ಅಭ್ಯರ್ಥಿಯಿಂದ ನಾಮಪತ್ರ ವಾಪಸ್, ಆಪ್ ನಾಯಕರಿಗೆ ಶಾಕ್

ETV Bharat Logo

Copyright © 2024 Ushodaya Enterprises Pvt. Ltd., All Rights Reserved.