ETV Bharat / bharat

ಒಂದೇ ವರ್ಷದಲ್ಲಿ ಮದ್ಯವ್ಯಸನಿ ರೋಗಿಗಳ ಸಂಖ್ಯೆಯಲ್ಲಿ ದ್ವಿಗುಣ - ಮದ್ಯ ವ್ಯಸನಿಗಳ ಕೇಂದ್ರ

2019-20ರಲ್ಲಿ ನೀಡಲಾದ ನವೀಕೃತ ಮತ್ತು ಹೊಸ ಪರವಾನಿಗೆಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 13,776 ಮದ್ಯಪಾನ ರೋಗಿಗಳಿದ್ದು, ಅವರ ಚಿಕಿತ್ಸೆಗಾಗಿ ಆಲ್ಕೋಹಾಲ್‌​ನ ಅಗತ್ಯವಿದೆ..

alcohol-permit-applicants-in-gujarat-double-in-3-years
ಒಂದೇ ವರ್ಷದಲ್ಲಿ ಮದ್ಯವ್ಯಸನಿ ರೋಗಿಗಳ ಸಂಖ್ಯೆಯಲ್ಲಿ ದ್ವಿಗುಣ
author img

By

Published : Mar 13, 2021, 5:04 PM IST

ಗಾಂಧಿನಗರ (ಗುಜರಾತ್​​): ರಾಜ್ಯ ವಿಧಾನಸಭೆಯಲ್ಲಿ ಮಂಡಿಸಲಾದ ಮದ್ಯಪಾನ ರೋಗಿಗಳ ಹೊಸ ದತ್ತಾಂಶವು ಆರೋಗ್ಯ ಇಲಾಖೆಯ ವೈಫಲ್ಯ ಹಾಗೂ ಅಧಿಕಾರಿಗಳ ನಿರ್ಲಕ್ಷ್ಯವನ್ನು ಎತ್ತಿತೋರಿಸುತ್ತದೆ.

ಗುಜರಾತ್​​ನಲ್ಲಿ ಮದ್ಯವ್ಯಸನಿ ರೋಗಿಗಳ ಸಂಖ್ಯೆ ಅಕ್ಟೋಬರ್ 2017ರಿಂದ ಸೆಪ್ಟೆಂಬರ್ 2020ರವರೆಗೆ ದ್ವಿಗುಣಗೊಂಡಿದೆ ಎಂದು ತಿಳಿಸಲಾಗಿದೆ. ಅಕ್ಟೋಬರ್ 2017ರಿಂದ ಸೆಪ್ಟೆಂಬರ್ 2018ರವರೆಗೆ 1,717 ರೋಗಿಗಳು ಮದ್ಯವನ್ನು ಆರೋಗ್ಯ ಪರವಾನಿಗೆಯೊಳಗೆ ತರುವಂತೆ ಅರ್ಜಿ ಸಲ್ಲಿಸಿದ್ದಾರೆ. ಅಲ್ಲದೆ, 2019ರ ಅಕ್ಟೋಬರ್‌ನಿಂದ 2020ರ ಸೆಪ್ಟೆಂಬರ್‌ವರೆಗೆ ಒಟ್ಟು 3,587 ರೋಗಿಗಳಿಗೆ ಇಂತಹ ಪರವಾನಿಗೆ ನೀಡಲಾಗಿದ್ದು, ಇದು ದ್ವಿಗುಣವಾಗಿದೆ.

ಸ್ಥಳೀಯ ವೈದ್ಯಕೀಯ ಮಂಡಳಿಯ ಶಿಫಾರಸಿನ ನಂತರವೇ ರಾಜ್ಯ ಸರ್ಕಾರ ರೋಗಿಗೆ ಮದ್ಯದ ಪರವಾನಿಗೆ ನೀಡುತ್ತದೆ. ಬಜೆಟ್ ಅಧಿವೇಶನದಲ್ಲಿ ಈ ಅಂಕಿ-ಅಂಶಗಳನ್ನು ಗುಜರಾತ್ ವಿಧಾನಸಭೆಯಲ್ಲಿ ಬಿಡುಗಡೆ ಮಾಡಲಾಗಿದೆ. ಗುಜರಾತ್‌ನಲ್ಲಿ ಅಕ್ಟೋಬರ್ 2017ರಿಂದ ಸೆಪ್ಟೆಂಬರ್ 2020ರವರೆಗೆ ನೀಡಲಾದ ಪರವಾನಿಗೆಗಳ ಬಗ್ಗೆ ಡ್ಯಾನಿಲಿಮ್ಡಾದ ಕಾಂಗ್ರೆಸ್ ಶಾಸಕ ಶೈಲೇಶ್ ಪರ್ಮಾರ್ ಮಾಹಿತಿ ಕೋರಿದ್ದರು.

ಇದು ಕೇವಲ ಹೆಚ್ಚುತ್ತಿರುವ ವ್ಯಸನಿಗಳ ಸಂಖ್ಯೆ ಕುರಿತ ಆತಂಕ ಮಾತ್ರವಲ್ಲ. ಈಗಾಗಲೇ ಚಿಕಿತ್ಸೆ ಪಡೆಯುತ್ತಿರುವ ವ್ಯಸನಿಗಳ ಆರೋಗ್ಯ ಮಟ್ಟ ಸುಧಾರಿಸದೆ ಇರುವುದು ಆತಂಕ್ಕೆ ಕಾರಣವಾಗಿದೆ.

ಈ ಪರವಾನಿಗೆಗಳ ನವೀಕರಣವು 2017-18ರಲ್ಲಿ ಒಟ್ಟು 6,259 ರಿಂದ 2018-19ರಲ್ಲಿ 8,309 ಪರವಾನಿಗೆ ನೀಡಿದ್ದರಿಂದ ಶೇ.33ರಷ್ಟು ರೋಗಿಗಳ ಸಂಖ್ಯೆಯಲ್ಲಿ ಏರಿಕೆಯಾಗಿತ್ತು. ಇದೀಗ ಪರವಾನಿಗೆ ಸಂಖ್ಯೆ 10,189ಕ್ಕೆ ತಲುಪಿರುವುದು ರೋಗಿಗಳ ಸಂಖ್ಯೆ ಶೇ.23ರಷ್ಟು ಏರಿಕೆಗೆ ಕಾರಣವಾಗಿದೆ.

2019-20ರಲ್ಲಿ ನೀಡಲಾದ ನವೀಕೃತ ಮತ್ತು ಹೊಸ ಪರವಾನಿಗೆಗಳ ಪ್ರಕಾರ, ರಾಜ್ಯದಲ್ಲಿ ಒಟ್ಟು 13,776 ಮದ್ಯಪಾನ ರೋಗಿಗಳಿದ್ದು, ಅವರ ಚಿಕಿತ್ಸೆಗಾಗಿ ಆಲ್ಕೋಹಾಲ್‌​ನ ಅಗತ್ಯವಿದೆ.

ರಾಜಧಾನಿ ಅಹಮದಾಬಾದ್​​ನಲ್ಲಿ ಒಟ್ಟು 5,101 ರೋಗಿಗಳು, ಸೂರತ್‌ನಲ್ಲಿ ಅತೀ ಹೆಚ್ಚು 1,600 ರೋಗಿಗಳಿದ್ದು, ವಡೋದರಾ 1,345, ರಾಜ್‌ಕೋಟ್ 717,ಕಚ್​​​-ಭುಚ್​​ ರೋಗಿಗಳಲ್ಲಿ ರಾಜಧಾನಿ ಅಹಮದಾಬಾದ್​​​ನಲ್ಲಿ 5,101 ರೋಗಿಗಳಿದ್ದರೆ, ಸೂರತ್​ನಲ್ಲಿ ಅತೀ ಹೆಚ್ಚು 1,600, ವಡೋದರಾ 1,345, ರಾಜ್​ಕೋಟ್​​ 717, ಆನಂದ್566, ಪೋರಬಂದರ್564 , ಜಮ್ನಗರ್ 444 ಮತ್ತು ಭಾವನಗರದಲ್ಲಿ 350 ರೋಗಿಗಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.