ETV Bharat / bharat

ಮದ್ಯಪಾನ ಮಾಡಿ ಹೆತ್ತಮ್ಮನ ಕಾಡಿನಲ್ಲಿ ಬಿಟ್ಟ ಬಂದ ಮಗ.. ಮುಂದೇನಾಯ್ತು!? - ಮದ್ಯಪಾನ ಮಾಡಿ ಹೆತ್ತಮ್ಮನ ಕಾಡಿನಲ್ಲಿ ಬಿಟ್ಟ ಬಂದ ಮಗ

ಕಂಠಪೂರ್ತಿ ಮದ್ಯಪಾನ ಮಾಡಿರುವ ವ್ಯಕ್ತಿಯೊಬ್ಬ ಹೆತ್ತಮ್ಮನಿಗೆ ಕಾಡಿನಲ್ಲಿ ಬಿಟ್ಟು ಬಂದಿರುವ ಘಟನೆ ರಾಜಸ್ಥಾನ ಕೋಟಾದಲ್ಲಿ ನಡೆದಿದೆ.

A woman found alone in the forest
A woman found alone in the forest
author img

By

Published : May 22, 2021, 4:44 PM IST

ಕೋಟಾ(ರಾಜಸ್ಥಾನ): ಮದ್ಯಪಾನ ಮಾಡಿದ ಮಗನೊಬ್ಬ ಹೆತ್ತಮ್ಮನಿಗೆ ಕಾಡಿನಲ್ಲಿ ಬಿಟ್ಟು ಬಂದಿರುವ ಘಟನೆ ನಡೆದಿದ್ದು, ಹಸಿವು ಹಾಗೂ ಬಾಯಾರಿಕೆಯಿಂದ ಬಳಲುತ್ತಿದ್ದ ವೃದ್ಧೆಯನ್ನ ಗ್ರಾಮಸ್ಥರು ಕಾಪಾಡಿದ್ದಾರೆ.

ಮದ್ಯಪಾನ ಮಾಡಿ ಹೆತ್ತಮ್ಮನ ಕಾಡಿನಲ್ಲಿ ಬಿಟ್ಟ ಬಂದ ಮಗ

ರಾಜಸ್ಥಾನದ ಕೋಟಾದ ಮುಕುಂದರ ಟೈಗರ್​ ರಿಸರ್ವ್​​ನ ಕೋಲಾನಾ ಕಾಡಿನಲ್ಲಿ ವೃದ್ಧ ಮಹಿಳೆ ಹಸಿವು ಹಾಗೂ ಬಾಯಾರಿಕೆಯಿಂದ ಬಳಲುತ್ತಿದ್ದರು. ಆಕೆಯನ್ನ ಕಾಡಿನಲ್ಲಿ ಬಿಟ್ಟು ಬಂದಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ಅಲ್ಲಿಗೆ ತೆರಳಿರುವ ಗ್ರಾಮಸ್ಥರು ರಕ್ಷಣೆ ಮಾಡಿ, ಕುಟುಂಬದ ಸದಸ್ಯರಿಗೆ ಹಸ್ತಾಂತರ ಮಾಡಿದ್ದಾರೆ.

ಇದನ್ನೂ ಓದಿ: DRDO ಅಭಿವೃದ್ಧಿ ಪಡಿಸಿರುವ ಕೋವಿಡ್​ ಲಸಿಕೆಯಲ್ಲಿ ಈ ಯುವ ವಿಜ್ಞಾನಿ ಪಾತ್ರ ಅನನ್ಯ

70 ವರ್ಷದ ವೃದ್ಧ ಮಹಿಳೆಯೊಬ್ಬರು ಎರಡು ದಿನಗಳಿಂದ ಕಾಡಿನಲ್ಲೇ ಕಳೆದಿದ್ದು, ತಿನ್ನಲು ಏನು ಸಿಗದೇ ತೊಂದರೆ ಅನುಭವಿಸಿದ್ದಾರೆ. ಈ ವೇಳೆ, ಅವರನ್ನ ಪ್ರಶ್ನೆ ಮಾಡಿದಾಗ ಮಗ ಈ ರೀತಿಯಾಗಿ ನಡೆದುಕೊಂಡಿದ್ದಾನೆಂದು ತಿಳಿಸಿದ್ದಾರೆ. ಕಾಡು ಪ್ರಾಣಿಗಳಿಂದ ತುಂಬಿರುವ ಈ ಕಾಡಿನಲ್ಲಿ ಜನರು ಹೋಗಲು ಹಿಂದೇಟು ಹಾಕುತ್ತಾರೆ. ಇದರ ಮಧ್ಯೆ ಮಹಿಳೆ ಎರಡು ದಿನ ಕಳೆದಿದ್ದು, ಆಕೆಯ ಮೇಲೆ ಯಾವುದೇ ಪ್ರಾಣ ದಾಳಿ ನಡೆಸಿಲ್ಲ. ಸದ್ಯ ಮಗನ ವಿರುದ್ಧ ಕ್ರಮ ಕೈಗೊಳ್ಳಲು ಗ್ರಾಮಸ್ಥರು ಮುಂದಾಗಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.