ETV Bharat / bharat

ಬಾಲಿವುಡ್ ಪ್ಯಾನ್ಸ್​ಗೆ ಸಂತಸದ ಸುದ್ದಿ: ನಕ್ಕು ನಗಿಸಲು ಜೋಡಿಯಾಗುತ್ತಿದ್ದಾರೆ ಅಕ್ಷಯ್ ಕುಮಾರ್ - ಟೈಗರ್ ಶ್ರಾಫ್

author img

By

Published : Dec 23, 2021, 8:48 PM IST

ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ ಅವರ 'ಬಡೇ ಮಿಯಾನ್-ಛೋಟೆ ಮಿಯಾನ್' ಸಿನಿಮಾ ಮಾಡಲು ತಯಾರಿ ನಡೆಸಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರನ್ನು ಜೋಡಿಯಾಗಿ ತೋರಿಸುವ ಉತ್ಸಾಹದಲ್ಲಿದ್ದಾರೆ. ಚಿತ್ರವು ಮುಂದಿನ ವರ್ಷ ತೆರೆಗೆ ಬರಲಿದೆ.

ಅಕ್ಷಯ್ ಕುಮಾರ್ - ಟೈಗರ್ ಶ್ರಾಫ್
ಅಕ್ಷಯ್ ಕುಮಾರ್ - ಟೈಗರ್ ಶ್ರಾಫ್

ಹೈದರಾಬಾದ್: ಬಾಲಿವುಡ್ ಅಭಿಮಾನಿಗಳಿಗೆ ಸಂತಸದ ಸುದ್ದಿಯೊಂದು ಹೊರಬಿದ್ದಿದೆ. ಅಮಿತಾಬ್ ಬಚ್ಚನ್ ಮತ್ತು ಗೋವಿಂದ ಅಭಿನಯದ ಕಾಮಿಡಿ ಡ್ರಾಮಾ ಬ್ಲಾಕ್​ಬಸ್ಟರ್​ ಚಿತ್ರ 'ಬಡೆ ಮಿಯಾನ್-ಛೋಟೆ ಮಿಯಾನ್' ಮತ್ತೊಮ್ಮೆ ದೊಡ್ಡ ಪರದೆಯ ಮೇಲೆ ಕಾಣಿಸಿಕೊಳ್ಳಲಿದೆ.

ಹೌದು, ಈ ಬಾರಿ ಅಮಿತಾಭ್ - ಗೋವಿಂದರಂತೆ ನಗಿಸಲು ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಜೋಡಿಯಾಗಲಿದೆ. ಮುಂದಿನ ವರ್ಷ ಚಿತ್ರ ಆರಂಭವಾಗಲಿದೆ. ಇನ್ನು 'ಬಡೆ ಮಿಯಾನ್-ಛೋಟೆ ಮಿಯಾನ್' 1998 ರಲ್ಲಿ ಬಿಡುಗಡೆಯಾಗಿತ್ತು. ಚಿತ್ರದಲ್ಲಿ ಅಮಿತಾಬ್ - ಗೋವಿಂದ ಜೋಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ತೇಲಿಸಿತ್ತು.

ಇದನ್ನೂ ಓದಿ: ಅಪಘಾತಕ್ಕೀಡಾದ ನಟಿ ನೋರಾ ಫತೇಹಿ ಕಾರು..!

ನಿರ್ದೇಶಕ ಅಲಿ ಅಬ್ಬಾಸ್ ಜಾಫರ್ 'ಬಡೇ ಮಿಯಾನ್-ಛೋಟೆ ಮಿಯಾನ್' ಸಿನಿಮಾ ಮಾಡಲು ತಯಾರಿ ನಡೆಸುತ್ತಿದ್ದಾರೆ. ಚಿತ್ರದಲ್ಲಿ ಅಕ್ಷಯ್ ಕುಮಾರ್ ಮತ್ತು ಟೈಗರ್ ಶ್ರಾಫ್ ಅವರನ್ನು ಜೋಡಿಯಾಗಿ ತೋರಿಸುವ ಉತ್ಸಾಹದಲ್ಲಿದ್ದಾರೆ. ವಾಸು ಭಗ್ನಾನಿ ಈ ಚಿತ್ರವನ್ನು ಮಗ ಜಾಕಿ ಭಗ್ನಾನಿ ಮತ್ತು ಮಗಳು ದೀಪಶಿಖಾ ಭಗ್ನಾನಿ ದೇಶಮುಖ್ ಅವರೊಂದಿಗೆ ನಿರ್ಮಿಸಲಿದ್ದಾರೆ.

ಚಿತ್ರವು ಮುಂದಿನ ವರ್ಷ ತೆರೆ ಕಾಣಲಿದೆ. ಆದರೆ, ನಿರ್ದೇಶಕರು ಮತ್ತು ನಿರ್ಮಾಪಕರು ಇನ್ನೂ ಕೂಡ ಅಧಿಕೃತ ಘೋಷಣೆ ಮಾಡಿಲ್ಲ. ಅಕ್ಷಯ್ ಕುಮಾರ್ ಪ್ರಸ್ತುತ ನಿರ್ಮಾಪಕ ವಾಸು ಭಗ್ನಾನಿ ಅವರೊಂದಿಗೆ 'ಸಿಂಡ್ರೆಲ್ಲಾ' ಚಿತ್ರದಲ್ಲಿ ಬ್ಯುಸಿ ಆಗಿದ್ದಾರೆ. ಅಕ್ಷಯ್ ಕುಮಾರ್ ಅವರ ಪಟ್ಟಿಯಲ್ಲಿ ಪ್ರಸ್ತುತ ಒಂಬತ್ತು ಚಿತ್ರಗಳಿವೆ. ಅದರಲ್ಲಿ 'ಅತ್ರಂಗಿ ರೇ' ನಾಳೆ (ಡಿಸೆಂಬರ್ 24) ಬಿಡುಗಡೆಯಾಗುತ್ತಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.