ಮುಂಬೈ (ಮಹಾರಾಷ್ಟ್ರ): ಮಹಾರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷವಾದ ಎನ್‌ಸಿಪಿ ನಾಯಕ ಅಜಿತ್ ಪವಾರ್ ತಾವು ಬಿಜೆಪಿ ಸೇರುವ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಎನ್‌ಸಿಪಿಯಲ್ಲೇ ಇರುವುದಾಗಿ ಮತ್ತು ಪಕ್ಷದ ಸೂಚನೆಯಂತೆ ನಡೆದುಕೊಳ್ಳುವುದಾಗಿಯೂ ಸ್ಪಷ್ಟಪಡಿಸಿದ್ದಾರೆ. ಪಕ್ಷದ ವರಿಷ್ಠರಾದ ಚಿಕ್ಕಪ್ಪ ಶರದ್ ಪವಾರ್ ಆಯೋಜಿಸಿರುವ ಇಫ್ತಾರ್ ಕೂಟದಲ್ಲಿ ಅಜಿತ್ ಪಾಲ್ಗೊಳ್ಳುವ ನಿರೀಕ್ಷೆಯಿದೆ.
ಮಹಾರಾಷ್ಟ್ರ ವಿಧಾನಸಭೆಯ ಪ್ರತಿಪಕ್ಷದ ನಾಯಕ ಅಜಿತ್ ಪವಾರ್ ಪಕ್ಷ ತೊರೆದು ಬಿಜೆಪಿ ಸೇರುತ್ತಾರೆ ಎಂಬ ಊಹಾಪೋಹಗಳು ಮಹಾರಾಷ್ಟ್ರ ರಾಜಕೀಯದಲ್ಲಿ ಮತ್ತೆ ಸಂಚಲನ ಸೃಷ್ಟಿಸಿತ್ತು. ಮತ್ತೊಂದೆಡೆ, ಇಂದು ಬೆಳಿಗ್ಗೆ ಎನ್‌ಸಿಪಿ ಸಂಸದೆ, ಸಹೋದರಿ ಸಂಸದೆ ಸುಪ್ರಿಯಾ ಸುಳೆ, ''ಮುಂದಿನ 15 ದಿನಗಳಲ್ಲಿ ಎರಡು ಪ್ರಮುಖ ಸ್ಫೋಟಗಳು ಸಂಭವಿಸಲಿದ್ದು, ಒಂದು ದೆಹಲಿಯಲ್ಲಿ ಮತ್ತೊಂದು ಮಹಾರಾಷ್ಟ್ರದಲ್ಲಿ" ಎಂದು ಹೇಳಿದ್ದರು. ಈ ಹೇಳಿಕೆ ರಾಜ್ಯ ಮಾತ್ರವಲ್ಲದೇ ರಾಷ್ಟ್ರ ಮಟ್ಟದಲ್ಲೂ ಮತ್ತಷ್ಟು ಸಂಚಲನ ಹಾಗೂ ಕುತೂಹಲಕ್ಕೂ ಕಾರಣವಾಗಿತ್ತು.
-
#WATCH | All these are baseless & wrong rumours. I appeal to all to stop such rumours," NCP leader Ajit Pawar amid speculations of him joining the BJP.#Maharashtra pic.twitter.com/zlQdXse2ft
— ANI (@ANI) April 18, 2023 " class="align-text-top noRightClick twitterSection" data="
">#WATCH | All these are baseless & wrong rumours. I appeal to all to stop such rumours," NCP leader Ajit Pawar amid speculations of him joining the BJP.#Maharashtra pic.twitter.com/zlQdXse2ft
— ANI (@ANI) April 18, 2023#WATCH | All these are baseless & wrong rumours. I appeal to all to stop such rumours," NCP leader Ajit Pawar amid speculations of him joining the BJP.#Maharashtra pic.twitter.com/zlQdXse2ft
— ANI (@ANI) April 18, 2023
ಇದೇ ವೇಳೆ ಮಹಾರಾಷ್ಟ್ರ ಸ್ಪೀಕರ್ ರಾಹುಲ್ ನಾರ್ವೇಕರ್ ತಮ್ಮ ಜಪಾನ್ ಭೇಟಿಯನ್ನು ಮೊಟಕುಗೊಳಿಸಿದರು. ಸ್ಪೀಕರ್ ಮುಂಬೈಗೆ ಹಿಂತಿರುಗುತ್ತಿದ್ದಾರೆ ಎಂಬ ವರದಿಗಳು ಇದಕ್ಕೆ ಪುಷ್ಟಿ ನೀಡುವಂತಾಗಿತ್ತು. ಇದೆಲ್ಲರ ಬೆನ್ನಲ್ಲೇ ಖುದ್ದು ಅಜಿತ್ ಪವಾರ್ ಪ್ರತಿಕ್ರಿಯಿಸಿ ಸದ್ಯದ ಊಹಾಪೋಹಗಳಿಗೆ ತೆರೆ ಎಳೆಯುವ ಪ್ರಯತ್ನ ಮಾಡಿದ್ದಾರೆ.
''ನಾನು ಎನ್‌ಸಿಪಿಯಲ್ಲಿದ್ದೇನೆ. ಎನ್‌ಸಿಪಿಯಲ್ಲೇ ಇರುತ್ತೇನೆ. ಪಕ್ಷ ಏನು ಹೇಳುತ್ತದೋ ಅದನ್ನು ಮಾಡುತ್ತೇನೆ. ನನ್ನ ಬಗ್ಗೆ ಹರಡಿರುವ ವದಂತಿಗಳಲ್ಲಿ ಯಾವುದೇ ಸತ್ಯವಿಲ್ಲ'' ಎಂದು ತಾವು ಬಿಜೆಪಿಗೆ ಸೇರುವ ವರದಿಗಳನ್ನು ಅಲ್ಲಗಳೆದರು. ಅಲ್ಲದೇ, 40 ಶಾಸಕರ ಸಹಿ ಸಂಗ್ರಹಿಸಲಾಗಿದೆ ಎಂಬ ವಿಚಾರ ಕೂಡ ಸುಳ್ಳು. ನಾನು ಬಿಜೆಪಿ ಸೇರುವ ಪ್ರಶ್ನೆಯೇ ಇಲ್ಲ. ಎಲ್ಲ ತಪ್ಪು ಮಾಹಿತಿಯನ್ನು ಹರಿಬಿಡಲಾಗುತ್ತಿದೆ" ಎಂದು ಅಜಿತ್ ಪವಾರ್ ತಿಳಿಸಿದ್ದಾರೆ.
ಇದನ್ನೂ ಓದಿ: ಪುಣೆ ರ‍್ಯಾಲಿ ರದ್ದುಗೊಳಿಸಿದ ಅಜಿತ್ ಪವಾರ್: ಊಹಾಪೋಹಗಳಿಗೆ ತೆರೆ