ನವದೆಹಲಿ: ಭಾರತದಲ್ಲಿನ ಹಲವಾರು ಏರ್‌ಟೆಲ್ ಬಳಕೆದಾರರು ಗುರುವಾರ ಇಂಟರ್ನೆಟ್ ಮತ್ತು ಸಿಗ್ನಲ್ ಸ್ಥಗಿತ ಸಮಸ್ಯೆಗಳನ್ನು ಎದುರಿಸಿದ್ದಾರೆ ಎಂದು ವರದಿಯಾಗಿದ್ದು, ಸೇವೆಗಳನ್ನು ಮರುಪ್ರಾರಂಭಿಸಲಾಗಿದೆ ಎಂದು ಕಂಪನಿ ಹೇಳಿದೆ.
ಔಟೇಜ್-ಟ್ರ್ಯಾಕಿಂಗ್ ವೆಬ್‌ಸೈಟ್ ಡೌನ್‌ಡಿಟೆಕ್ಟರ್ ಪ್ರಕಾರ, ಮುಂಬೈ, ದೆಹಲಿ, ಜೈಪುರ, ಹೈದರಾಬಾದ್, ಬೆಂಗಳೂರು, ಚೆನ್ನೈ, ಕೋಲ್ಕತ್ತಾ ಮತ್ತು ಗುವಾಹಟಿ ಸೇರಿದಂತೆ ಇತರ ಪ್ರದೇಶಗಳಿಂದ ನೆಟ್‌ವರ್ಕ್ ಮತ್ತು ಇಂಟರ್ನೆಟ್ ಸಮಸ್ಯೆಯಾಗಿರುವುದರ ಬಗ್ಗೆ ವರದಿಗಳು ಬಂದಿವೆ. ಏರ್‌ಟೆಲ್ ಕಾರ್ಯ ಸ್ಥಗಿತದ ಬಗ್ಗೆ ಹಲವಾರು ಬಳಕೆದಾರರು ತಮ್ಮ ದೂರುಗಳನ್ನು ಟ್ವಿಟ್ಟರ್ ಮೂಲಕ ಸಲ್ಲಿಸಿದ್ದಾರೆ.
ಓದಿ: ವಿಂಡೋಸ್ 11ರಲ್ಲಿ ಗಮನಾರ್ಹ ಬದಲಾವಣೆ, ಅತಿ ವೇಗದ ಕೆಲಸ.. ಟೀಂ ಮೈಕ್ರೋಸಾಫ್ಟ್ ಬಣ್ಣನೆ
ಸಮಸ್ಯೆಯನ್ನು ತ್ವರಿತವಾಗಿ ಪರಿಹರಿಸುವಂತೆ ಗ್ರಾಹಕರು ಏರ್‌ಟೆಲ್ ಸೇವೆಗಳು ಮತ್ತು ಏರ್‌ಟೆಲ್ ಇಂಡಿಯಾಗೆ ಟ್ಯಾಗ್ ಮಾಡಿ ಒತ್ತಾಯಿಸಿದ್ದಾರೆ. ಬುಧವಾರ ಸಂಜೆ 4 ಗಂಟೆಯ ನಂತರ ಉಂಟಾದ ಈ ಸಮಸ್ಯೆಯಿಂದಾಗಿ ಗುರುವಾರ ಏರ್‌ಟೆಲ್ ವೆಬ್‌ಸೈಟ್‌ನಲ್ಲಿ ಕೇವಲ ಕಡಿಮೆ ಸಮಯದಲ್ಲಿ 3,500 ಕ್ಕೂ ಹೆಚ್ಚು ದೂರುಗಳು ಬಂದಿವೆ ಎಂದು DownDetector.com ಹೇಳಿದೆ.
15 ನಿಮಿಷಗಳ ಕಾಲ ಮಾತ್ರ ಏರ್ಟೇಲ್ ಸೇವೆಗಳು ಸ್ಥಗಿತಗೊಂಡಿದ್ದವು. ಅದನ್ನು ಸರಿಪಡಿಸಲಾಗಿದೆ ಎಂದು ಕಂಪನಿ ಹೇಳಿದೆ. ಈ ವರ್ಷದಲ್ಲಿ ಏರ್‌ಟೆಲ್ ವಿರುದ್ಧ ಇದು ಎರಡನೇ ವರದಿಯಾಗಿದೆ. ಈ ಹಿಂದೆ ಮಾರ್ಚ್ನಲ್ಲಿ ಜೈಪುರ, ಲಖನೌ, ನಾಗ್ಪುರ, ಕೋಲ್ಕತ್ತಾ ಮತ್ತು ಗುವಾಹಟಿ ಸೇರಿದಂತೆ ಏರ್‌ಟೆಲ್ ಬ್ಲ್ಯಾಕ್‌ಔಟ್ ಕಂಡಿತು ಎಂದು ತಿಳಿದುಬಂದಿದೆ.