ETV Bharat / bharat

ವಿಶೇಷ ಅಂಕಣ: ದೇಶದ ಉಸಿರುಗಟ್ಟಿಸುತ್ತಿರುವ 'ವಾಯು ಮಾಲಿನ್ಯ'.. ಪರಿಹಾರವೆಲ್ಲಿದೆ?

ಸಿಎಸ್ಇ ಸಂಶೋಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಇನ್ನು ಈ ವಾಯು ಮಾಲಿನ್ಯ ತಂದಿಟ್ಟಿರುವ ಸಮಸ್ಯೆಗಳು ಒಂದೆರಡಲ್ಲ. ವಾಯು ಮಾಲಿನ್ಯದ ಕಾರಣಕ್ಕೆ ಮೆದುಳು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯ ತೀವ್ರ ಕುಸಿತ ವರದಿಯಾಗಿದೆ.

air-pollution-suffocating-the-nation
'ವಾಯು ಮಾಲಿನ್ಯ'
author img

By

Published : Feb 28, 2021, 6:13 PM IST

ಹೈದ್ರಾಬಾದ್: ದೇಶದ ಮುಂದಿರುವ ಬಹುದೊಡ್ಡ ಸವಾಲುಗಳಲ್ಲೊಂದು ತೀವ್ರ ಗತಿಯಲ್ಲಿ ಏರಿಕೆಯಾಗುತ್ತಿರುವ ವಾಯು ಮಾಲಿನ್ಯ. ಈ ಮಾಲಿನ್ಯ ಏರಿಕೆ, ಇನ್ನೂ ಹಲವು ಸಮಸ್ಯೆಗಳಿಗೆ ದಾರಿ ಮಾಡಿಕೊಟ್ಟಿದೆ. ಗಾಳಿಯಲ್ಲಿನ ಮಾಲಿನ್ಯಕಾರಕ ಸೂಕ್ಷ್ಮ ಅಂಶಗಳು ದೊಡ್ಡ ಮಟ್ಟದಲ್ಲಿ ಹೆಚ್ಚುತ್ತಿವೆ.

ಇದು, ಮಾನವನ ಆರೋಗ್ಯಕ್ಕೆ ಭಾರಿ ಹಾನಿ ಉಂಟು ಮಾಡಬಲ್ಲದು. ಒಂದು ಅಧ್ಯಯನದ ಪ್ರಕಾರ, ದೇಶದಲ್ಲಿ ಈಗ ಸಂಭವಿಸುತ್ತಿರುವ 8 ಮರಣಗಳ ಪೈಕಿ ಒಂದಕ್ಕೆ ವಾಯು ಮಾಲಿನ್ಯ ಕಾರಣವಾಗಿದೆ. ಇದು ದೇಶದ ನಾಗರಿಕರ ಜೀವಿತಾವಧಿಯನ್ನು ಐದು ವರ್ಷಗಳಷ್ಟು ಕುಗ್ಗಿಸುತ್ತದೆ. ನಮ್ಮ ದೇಶದ ವಾತಾವರಣದಲ್ಲಿ ಇಂತಹ ಮಾಲಿನ್ಯಕಾರಕ ಕಣಗಳ ಸಂಖ್ಯೆ ವಿಶ್ವ ಅರೋಗ್ಯ ಸಂಸ್ಥೆ ಸೂಚಿಸಿದ್ದಕ್ಕಿಂತ 10 ರಿಂದ 11 ಪಟ್ಟು ಹೆಚ್ಚಿದೆ. ಇದು ಸಮಸ್ಯೆಯ ಗಂಭೀರತೆಯನ್ನು ಸೂಚಿಸುತ್ತದೆ.

ಇತ್ತೀಚಿಗೆ ಬಿಡುಗಡೆಗೊಂಡ, ನವದೆಹಲಿಯ ವಿಜ್ಞಾನ ಮತ್ತು ಪರಿಸರ ಸಂಸ್ಥೆ (ಸಿಎಸ್ಇ) ಯ ಅಧ್ಯಯನ ವರದಿಯಲ್ಲಿ ಈ ಅಂಶ ಖಚಿತ ಪಟ್ಟಿದೆ. ಇದರ ಜೊತೆಗೆ ಲಾಕ್ ಡೌನ್ ಬಳಿಕದ ಅವಧಿಯಲ್ಲಿ ಹಿಂದಿನ ವರ್ಷಕ್ಕಿಂತಲೂ ಹೆಚ್ಚಿನ ಮಾಲಿನ್ಯ ದೇಶದ ಹಲವೆಡೆಗಳಿಂದ ವರದಿಯಾಗಿದೆ ಎನ್ನುತ್ತದೆ ಈ ವರದಿ. ಅಕ್ಟೋಬರ್ 2020 ಮತ್ತು ಜನವರಿ 2021 ರ ನಡುವಿನ ಅವಧಿಯ ವಾಯುಮಾಲಿನ್ಯ ಮಟ್ಟವು ಹಿಂದಿನ ವರ್ಷದಲ್ಲಿ ಇದೆ ಅವಧಿಯ ವಾಯುಮಾಲಿನ್ಯಕ್ಕಿಂತ ಹೆಚ್ಚಳಗೊಂಡಿದೆ ಎಂದು ವರದಿ ಸೂಚಿಸುತ್ತದೆ. ಅಂದರೆ, ಈಗ ಲಾಕ್ ಡೌನ್ ಬಳಿಕ, ಮತ್ತೆ ವಾಯು ಮಾಲಿನ್ಯದ ಪ್ರಮಾಣ ನಮ್ಮನ್ನು ದೊಡ್ಡ ಮಟ್ಟದಲ್ಲಿ ಕಾಡುತ್ತಿದೆ.

ಈ ನಡುವೆ, ಕೇಂದ್ರ ಮಾಲಿನ್ಯ ನಿಯಂತ್ರಣ ನಡೆಸಿದ ಅಧ್ಯಯನಗಳ ಫಲಿತಾಂಶ ಕೂಡ ನಮ್ಮನ್ನು ಆತಂಕಕ್ಕೆ ದೂಡುವಂತಿದೆ. ದೇಶದ 99 ನಗರಗಳಲ್ಲಿನ ಮಂಡಳಿಯು ಮಾಲಿನ್ಯ ಅಧ್ಯಯನ ನಡೆಸಿತ್ತು. ಈ ಅಧ್ಯಯನ ಪ್ರಕಾರ 43 ನಗರಗಳಲ್ಲಿ ವಾಯುಮಾಲಿನ್ಯ ಆತಂಕಕಾರಿ ಪರಿಸ್ಥಿತಿಗೆ ತಲುಪಿದೆ. ಹೀಗೆ ಆತಂಕದ ಪರಿಸ್ಥಿತಿ ಎದುರಿಸುತ್ತಿರುವ ನಗರಗಳ ಪಟ್ಟಿಯಲ್ಲಿ ಗುರುಗ್ರಾಮ್, ಲಕ್ನೋ, ಜೈಪುರ, ಆಗ್ರಾ, ನವೀ ಮುಂಬೈ, ಜೋಧ್‌ಪುರ, ಕೋಲ್ಕತಾ, ವಿಶಾಖಪಟ್ಟಣಂ ಮತ್ತು ಇತರ ನಗರಗಳಿವೆ. ತಾಪಮಾನ ಇಳಿಕೆಗೂ, ಮಾಲಿನ್ಯಕ್ಕೂ ಸಂಬಂಧವಿದೆಯೇ? ಈ ವರದಿ ಪ್ರಕಾರ, ವಾತಾವರಣದಲ್ಲಿನ ತಾಪಮಾನ ಕುಸಿದಂತೆ, ಔರಂಗಾಬಾದ್, ಇಂದೋರ್, ಭೋಪಾಲ್, ಕೊಚ್ಚಿ, ಕೋಜಿಕ್ಕೋಡ್ ಮತ್ತಿತರ ನಗರಗಳಲ್ಲಿ ಮಾಲಿನ್ಯ ಪ್ರಮಾಣ ಜಾಸ್ತಿ ಆಗಿದೆ. ಇದು, ತಜ್ಞರನ್ನು ಆತಂಕಕ್ಕೆ ದೂಡಿದೆ.

ಇನ್ನು, ಈ ವಾಯು ಮಾಲಿನ್ಯದ ಬಲಿಪಶುಗಳಲ್ಲಿ ಚಿಕ್ಕ ಮಕ್ಕಳು ಕೂಡ ಸೇರಿದ್ದಾರೆ. ವಿಶ್ವದ ಪ್ರತಿಷ್ಠಿತ ಶೈಕ್ಷಣಿಕ ಸಂಸ್ಥೆಗಳಾದ ದೆಹಲಿಯ ಐಐಟಿ ಮತ್ತು ಹಾರ್ವರ್ಡ್ ವಿಶ್ವವಿದ್ಯಾಲಯ ನಡೆಸಿದ ಜಂಟಿ ಅಧ್ಯಯನವು ಅದನ್ನು ಬಹಿರಂಗಪಡಿಸಿದೆ. ವಾಯುಮಾಲಿನ್ಯ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚುವಂತೆ ಮಾಡಿದೆ ಎನ್ನುತ್ತದೆ ಸಂಶೋಧನಾ ವರದಿ. ವಾಯು ಮಾಲಿನ್ಯ ಹೆಚ್ಚಳಗೊಂಡಂತೆ ಈ ವಯಸ್ಸಿನ ಮಕ್ಕಳಲ್ಲಿ ರಕ್ತಹೀನತೆ ಹೆಚ್ಚುವುದನ್ನು ಈ ವರದಿ ಶ್ರುತಪಡಿಸಿವೆ.

ಸಿಎಸ್ಇ ಸಂಶೋಧನೆಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಈ ನಿಟ್ಟಿನಲ್ಲಿ ಯೋಚಿಸಬೇಕಿದೆ. ಇನ್ನು ಈ ವಾಯು ಮಾಲಿನ್ಯ ತಂದಿಟ್ಟಿರುವ ಸಮಸ್ಯೆಗಳು ಒಂದೆರಡಲ್ಲ. ವಾಯು ಮಾಲಿನ್ಯದ ಕಾರಣಕ್ಕೆ ಮೆದುಳು ಮತ್ತು ಮೂತ್ರಪಿಂಡಗಳ ಕಾರ್ಯಕ್ಷಮತೆಯ ತೀವ್ರ ಕುಸಿತ ವರದಿಯಾಗಿದೆ. ವಾಯು ಮಾಲಿನ್ಯ ಹೆಚ್ಚಿರುವ ಸ್ಥಳಗಳಲ್ಲಿ ವಾಸಿಸುತ್ತಿರುವ ಜನರಲ್ಲಿ ಈ ಸಮಸ್ಯೆ ಹೆಚ್ಚುತ್ತಿರುವುದು ಸಂಶೋಧನೆಗಳಿಂದ ದೃಢ ಪಟ್ಟಿದೆ. ಇದರ ಜೊತೆಗೆ ವಾಯುಮಾಲಿನ್ಯಕ್ಕೆ ದೀರ್ಘಕಾಲದವರೆಗೆ ಒಡ್ಡಿಕೊಳ್ಳುವ ವ್ಯಕ್ತಿಗಳು ಶ್ವಾಸಕೋಶದ ಕಾಯಿಲೆಗಳ ಅಪಾಯ ಎದುರಿಸುತ್ತಿದ್ದಾರೆ. ಅವರ ಶ್ವಾಸಕೋಶ ಬೇಗವಾಗಿ ದುರ್ಬಲಗೊಳ್ಳುತ್ತವೆ ಎನ್ನುತ್ತವೆ ವರದಿಗಳು.

ಕೇಂದ್ರ ಸರಕಾರವು ಗಾಳಿಯ ಗುಣಮಟ್ಟವನ್ನು ಸುಧಾರಿಸಲು ರಾಷ್ಟ್ರೀಯ ಕ್ರಿಯಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ. ಆದರೆ ಅದರ ಅನುಷ್ಠಾನದಲ್ಲಿನ ಲೋಪಗಳು ಈ ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗಿದೆ. ಕೇಂದ್ರದ ನೀತಿ ಆಯೋಗವು, ವಾಯು ಮಾಲಿನ್ಯ ಹೆಚ್ಚಳಕ್ಕೆ ತಡೆಯೊಡ್ಡಲು, ಉಷ್ಣ ವಿದ್ಯುತ್ ಸ್ಥಾವರಗಳನ್ನು ಮುಚ್ಚಲು ಶಿಫಾರಸು ಮಾಡಿತ್ತು. ಜೊತೆಗೆ ತ್ಯಾಜ್ಯ ನಿರ್ವಹಣೆಯಲ್ಲೂ ಬದಲಾವಣೆಗೆ ಕರೆ ನೀಡಿದೆ. ಆದರೆ ಇದಾವುದೂ ಅನುಷ್ಠಾನಕ್ಕೆ ಬಂದಿಲ್ಲ.

ಎರಡೂ ಸಲಹೆಗಳು ಅತ್ಯಂತ ವಿವೇಕಯುಕ್ತವಾಗಿದ್ದವು. ಆದರೆ ಇಂತಹ ಸಲಹೆಗಳಿಗೆ ಯಾವುದೇ ಮೌಲ್ಯ ಇಲ್ಲ ಎನ್ನುವಂತೆ ತೋರುತ್ತಿದೆ. ಏಕೆಂದರೆ, ಸರಕಾರಗಳು ಇವುಗಳನ್ನು ಅನುಷ್ಠಾನಿಸಲು ಇಚ್ಛಿಸಿದಂತೆ ತೋರುತ್ತಿಲ್ಲ. ಇನ್ನು ಮಾಲಿನ್ಯ ನಿಯಂತ್ರಣಕ್ಕಾಗಿ ಉದ್ದೇಶಿಸಲಾದ ಕಾನೂನುಗಳ ಪಾಲನೆ, ಅನುಷ್ಠಾನಕ್ಕೆ ಕೂಡ ಹೆಚ್ಚಿನ ಗಮನ ನೀಡಲಾಗುತ್ತಿಲ್ಲ. ಅವುಗಳೆಲ್ಲ ಬರಿ ಕಾಗದದ ಮೇಲಿರುವಂತೆ ತೋರುತ್ತಿದೆ.

ತಮ್ಮ ನಾಗರಿಕರಲ್ಲಿ ಪರಿಸರ ಪ್ರಜ್ಞೆಯನ್ನು ಬಿತ್ತುತ್ತಿರುವ ದೇಶಗಳು ತಮ್ಮ ದೇಶದ ನೀರು ಮತ್ತು ಗಾಳಿಯ ಗುಣಮಟ್ಟ ಹೆಚ್ಚಿಸುವಲ್ಲಿ ಯಶಸ್ವಿಯಾಗುತ್ತಿವೆ. ಇದು ನಿಜಕ್ಕೂ ನಮ್ಮಲ್ಲೂ ಆಗಬೇಕಿದೆ. ಇಂಡೋನೇಷ್ಯಾದಂತಹ ದೇಶಗಳು ತಮ್ಮ ದೇಶದಲ್ಲಿ ಮರಗಳನ್ನು ಹೆಚ್ಚು ಹೆಚ್ಚು ಬೆಳೆಯುತ್ತಿದ್ದ್ದು, ಹಸಿರೀಕರಣಕ್ಕೆ ಹೆಚ್ಚಿನ ಒತ್ತು ನೀಡುತ್ತಿವೆ. ಇದರ ಜೊತೆಗೆ, ಸಾವಯವ ತ್ಯಾಜ್ಯದಿಂದ ಮೀಥೇನ್ ತಯಾರಿಕೆಗೆ ಗಮನ ನೀಡಲಾಗುತ್ತಿದೆ. ಈ ಮೂಲಕ ವಾಯು ಮಾಲಿನ್ಯ ನಿಯಂತ್ರಣದಲ್ಲಿ ಅವು ಯಶಸ್ಸು ಸಾಧಿಸುತ್ತಿವೆ.

ಇನ್ನು ವಿಶ್ವದ ಪ್ರಮುಖ ನಗರಗಳಾದ ಬರ್ಲಿನ್, ಶಾಂಘೈ, ಲಂಡನ್, ಮ್ಯಾಡ್ರಿಡ್ ಮತ್ತು ಸಿಯೋಲ್‌ನಂತಹ ನಗರಗಳು ವಾಯು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ, ತಮ್ಮಲ್ಲಿನ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಗಟ್ಟಿಗೊಳಿಸುತ್ತಿವೆ. ಇದು, ಅವುಗಳಿಗೆ ವಾಯು ಮಾಲಿನ್ಯ ನಿಯಂತ್ರಣಕ್ಕೆ ನೆರವಾಗುತ್ತಿವೆ. ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯಿಂದಾಗಿ, ಖಾಸಗಿ ವಾಹನ ಸಂಖ್ಯೆಯನ್ನು ಹತೋಟಿಯಲ್ಲಿಡಲು ಈ ನಗರಗಳಿಗೆ ಸಾಧ್ಯವಾಗಿದೆ. ಇದು ವಾಹನಗಳಿಂದ ಉಂಟಾಗುವ ವಾಯು ಮಾಲಿನ್ಯವನ್ನು ನಿಯಂತ್ರಣದಲ್ಲಿಡಲು ನೆರವಾಗುತ್ತಿವೆ.

ಕಳೆದ 15 ವರ್ಷಗಳಿಂದ ಇಂಧನ ಮೂಲಸೌಕರ್ಯಗಳ ಸುಧಾರಣೆಗೆ ಚೀನಾ ತನ್ನ ಬದ್ಧತೆ ತೋರುತ್ತಿದ್ದು, ಅದರ ಮೂಲಕ, ವಾಯು ಮಾಲಿನ್ಯದ ಮೇಲೆ ಅದು ಹತೋಟಿ ಸಾಧಿಸಿದೆ. ಚೀನಾ 1998 ರಿಂದ ಸ್ವಯಂ ಹೊಸ ಮಾಲಿನ್ಯ ನಿಯಂತ್ರಣ ಗುರಿಗಳನ್ನು ವಿಧಿಸಿಕೊಂಡು, ನಿಗದಿತ ಅವಧಿಯಲ್ಲಿ ಅದನ್ನು ಸಾಧಿಸಿ ತೋರಿಸುತ್ತಿದೆ. ಉದಾಹರಣೆಗೆ, ಕಳೆದ ವರ್ಷ, ತನ್ನ ರಾಜಧಾನಿ ಬೀಜಿಂಗ್​ನಲ್ಲಿ ವಾಯು ಮಾಲಿನ್ಯಕಾರಕ ಅಂಶವನ್ನು ಪ್ರತಿ ಘನ ಮೀಟರ್‌ಗೆ 38 ಮೈಕ್ರೊಗ್ರಾಂಗೆ ತಗ್ಗಿಸುವ ಗುರಿಯನ್ನು ಚೀನಾ ಹೊಂದಿತ್ತು, ಅದನ್ನು ಸಾಧಿಸಿತು. ಈ ವರ್ಷದ ಗುರಿ ಅದನ್ನು 34.5 ಕ್ಕೆ ಇಳಿಸುವ ಗುರಿ. ಈ ತೆರನಾದ ಪ್ರಯತ್ನದ ಮೂಲಕ, ಚೀನಾ ಸರಕಾರ, ಗಾಳಿಯ ಶುದ್ದಿಗೆ ಹೆಚ್ಚಿನ ಒತ್ತು ನೀಡುತ್ತಿದೆ.

ಇವೆಲ್ಲದರ ಜೊತೆಗೆ ಮುಂಬರುವ ದಿನಗಳಲ್ಲಿ ಚೀನಾ ವಾಯುಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ನಾನಾ ಕ್ರಮಗಳನ್ನು ಈಗಾಗಲೇ ಘೋಷಿಸಿದೆ. ಮುಂದಿನ ಐದು ವರ್ಷಗಳಲ್ಲಿ ಕಲ್ಲಿದ್ದಲಿನ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಾಗಿ ಘೋಷಿಸಿದೆ. ಇದರ ಜೊತೆಗೆ, ಕಲ್ಲಿದ್ದಲಿನ ಬದಲಿಗೆ ಪರ್ಯಾಯ ಇಂಧನಗಳನ್ನು ಬಳಸಲು ತಾನು ಕಟಿಬದ್ದವಾಗಿರುವುದಾಗಿ ಅದು ಘೋಷಿಸಿದೆ. ಈಗಾಗಲೇ ಅಲ್ಲಿನ ಸರಕಾರ ಕಲ್ಲಿದ್ದಲು ಆಧಾರಿತ ಯಾವುದೇ ಹೊಸ ಕೈಗಾರಿಕೆಗಳಿಗೆ ಅನುಮತಿ ನೀಡುತ್ತಿಲ್ಲ. ದೇಶದ ಉದ್ದಗಲಕ್ಕೂ ಕಾಡುಗಳನ್ನು ಸಂರಕ್ಷಿಸಲು ಹೊಸ ವ್ಯವಸ್ಥೆಯನ್ನು ಅದು ಸ್ಥಾಪಿಸಿದೆ. ಇನ್ನು ಮಾಲಿನ್ಯಕಾರಕ ಉದ್ಯಮಗಳನ್ನು ನಿಯಂತ್ರಿಸಲು ಹೊಸ ವ್ಯವಸ್ಥೆಯನ್ನು ಅದು ರೂಪಿಸಿದೆ.

ಹೀಗೆ, ಚೀನಾ ವಾಯು ಮಾಲಿನ್ಯದಿಂದ ತನ್ನ ಪ್ರಜೆಗಳನ್ನು ರಕ್ಷಿಸಲು ಎಲ್ಲ ಕ್ರಮಗಳನ್ನು ಅತ್ಯಂತ ಕಟ್ಟು ನಿಟ್ಟಾಗಿ ಜಾರಿಗೊಳಿಸುತ್ತಿದೆ. ನಮ್ಮ ದೇಶದಲ್ಲೂ ಮಾಲಿನ್ಯಕಾರಕ ಕೈಗಾರಿಕೆಗಳ ನಿಯಂತ್ರಣಕ್ಕೆ ಕಾನೂನಿದೆ. ನಮ್ಮ ದೇಶ ಕೂಡ ಗಾಳಿಯ ಗುಣಮಟ್ಟ ರಕ್ಷಿಸಲು ಮಾರ್ಗಸೂಚಿಗಳನ್ನು ರಚಿಸಿದೆ. ಆದರೆ ಅದಾವುದೂ ಕಟ್ಟುನಿಟ್ಟಾಗಿ ಜಾರಿಗೊಳ್ಳದ ಕಾರಣಕ್ಕೆ, ನಮ್ಮಲ್ಲಿ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಅಧಿಕಾರಿಗಳು ಮತ್ತು ನಾಗರಿಕ ಸಮಾಜದಲ್ಲಿನ ಪರಿಸರ ಪ್ರಜ್ಞೆಯ ಕೊರತೆ ಈ ಎಲ್ಲ ಬಿಕ್ಕಟ್ಟುಗಳಿಗೆ ಮೂಲ ಕಾರಣ. ವಾಯು ಮಾಲಿನ್ಯ ವಾರ್ಷಿಕವಾಗಿ ಭಾರತದಲ್ಲಿ 12 ಲಕ್ಷ ಸಾವುಗಳಿಗೆ ಕಾರಣವಾಗುತ್ತಿದೆ. ಗಾಳಿಯ ಬಗೆಗಿನ ನಿರ್ಲಕ್ಷ್ಯ ಮನೋಭಾವವನ್ನು ತ್ಯಜಿಸುವುದು, ನಮ್ಮಲ್ಲಿನ ವಾಯು ಮಾಲಿನ್ಯ ತಗ್ಗಿಸುವ ನಿಟ್ಟಿನಲ್ಲಿ ನಾವು ತೆಗೆದುಕೊಳ್ಳುವ ಮೊದಲ ಹೆಜ್ಜೆಯಾಗಬೇಕು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.