ನವದೆಹಲಿ: ದೇಶದ ಪ್ರಮುಖ ವಿಮಾನಯಾನ ಸಂಸ್ಥೆಯಾದ ಏರ್ ಇಂಡಿಯಾವು ಐತಿಹಾಸಿಕ ಕ್ರಮಕ್ಕೆ ಮುಂದಾಗಿದೆ. ವಿಮಾನ ತಯಾರಕ ಸಂಸ್ಥೆಗಳಾದ ಏರ್‌ಬಸ್ ಮತ್ತು ಬೋಯಿಂಗ್‌ನಿಂದ ಶತಕೋಟಿ ಮೌಲ್ಯದ ಸುಮಾರು 500 ಜೆಟ್‌ಲೈನರ್‌ಗಳನ್ನು ಖರೀದಿಗೆ ಏರ್ ಇಂಡಿಯಾ ಪ್ರಸ್ತಾಪ ಸಲ್ಲಿಸಿದೆ ಎಂದು ವರದಿಯಾಗಿದೆ.
ಏರ್ ಇಂಡಿಯಾವನ್ನು ಕೆಲ ತಿಂಗಳ ಹಿಂದೆಯಷ್ಟೇ ಟಾಟಾ ಗ್ರೂಪ್ ಖರೀದಿಸಿದ್ದು, ಈ ವಿಮಾನಯಾನ ಸಂಸ್ಥೆಯ ಪುನಶ್ಚೇತನಕ್ಕೆ 500 ವಿಮಾನಗಳ ಖರೀದಿಗೆ ಮುಂದಾಗಿದೆ. ಇದರಲ್ಲಿ 400 ಚಿಕ್ಕ ವಿಮಾನಗಳು ಮತ್ತು 100 ಏರ್‌ಬಸ್ A350 ಗಳು ಮತ್ತು ಬೋಯಿಂಗ್ 787 ಮತ್ತು 777 ಬೃಹತ್ ವಿಮಾನಗಳು ಸೇರಿವೆ ಎಂದು ಮೂಲಗಳು ತಿಳಿಸಿವೆ.
ಈ ಬಿಲಿಯನ್ ಡಾಲರ್ ಒಪ್ಪಂದಕ್ಕೆ ಅಂತಿಮ ಸ್ಪರ್ಶ ನೀಡದಿದ್ದರೂ ಬಲ್ಲಗ ಮೂಲಗಳಿಂದ ಮಾಹಿತಿ ಬಹಿರಂಗವಾಗಿದೆ. ಈ ಬಗ್ಗೆ ಏರ್‌ಬಸ್ ಮತ್ತು ಬೋಯಿಂಗ್‌ನ ಅಧಿಕಾರಿಗಳು ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ. ಆದರೆ, ಟಾಟಾ ಗ್ರೂಪ್ ಸಹ ಇಷ್ಟವಿಲ್ಲದ ನಂತರ ಪ್ರತಿಕ್ರಿಯಿಸಲು ಒಪ್ಪಿಕೊಂಡಿತು.
ಟಾಟಾ ಗ್ರೂಪ್ ಏರ್ ಇಂಡಿಯಾದೊಂದಿಗೆ ವಿಸ್ತಾರಾ ಸಂಸ್ಥೆಯನ್ನು ವಿಲೀನಗೊಳಿಸುವ ಘೋಷಣೆ ಕೆಲವು ದಿನಗಳ ನಂತರ ಈ ಸುದ್ದಿ ಹೊರ ಬಂದಿದೆ. ಟಾಟಾ ಏರ್‌ಲೈನ್ಸ್ ಅನ್ನು ಏರ್ ಇಂಡಿಯಾ ಎಂದು ಮರುನಾಮಕರಣ ಮಾಡಿರುವ ಟಾಟಾ ಸಮೂಹವು ವಿಮಾನಯಾನ ವಲಯಕ್ಕೆ ಮರು ಪ್ರವೇಶಿಸಲು ಬಯಸಿದೆ.
ಇದನ್ನೂ ಓದಿ: ಏರ್ ಇಂಡಿಯಾದ ಭವಿಷ್ಯಕ್ಕೆ ಸುಸ್ವಾಗತ: ಪ್ರಯಾಣಿಕರಿಗೆ ವಿಶೇಷ ಪ್ರಕಟಣೆ