ETV Bharat / bharat

ಚುನಾವಣೆಗೂ ಮುನ್ನವೇ ಮುರಿದು ಬೀಳುತ್ತಾ ಬಿಜೆಪಿಯೊಂದಿಗಿನ ಮೈತ್ರಿ..?: ಎಐಎಡಿಎಂಕೆ ಹೇಳೋದೇನು? - ಬಿಜೆಪಿಯೊಂದಿಗಿನ ಮೈತ್ರಿ ಸುದ್ದಿ

ತಮಿಳುನಾಡಿನಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪಿಸುತ್ತಿದ್ದಂತೆ ರಾಜಕೀಯದಲ್ಲಿ ಸಾಕಷ್ಟು ಬೆಳವಣಿಗೆಗಳು ಕಾಣುತ್ತಿವೆ. ಬಿಜೆಪಿಯೊಂದಿಗೆ ಎಐಎಡಿಎಂ ಪಕ್ಷದ ಮೈತ್ರಿ ಮುಂದುವರೆಯುವುದು ಅನುಮಾನ ಎಂಬ ಮಾತಿಗೆ ಮತ್ತಷ್ಟು ಪುಷ್ಠಿ ದೊರೆಯುತ್ತಿದೆ.

aiadmk and bjp
ಎಐಎಡಿಎಂಕೆ ಮತ್ತು ಬಿಜೆಪಿ
author img

By

Published : Dec 27, 2020, 7:37 PM IST

ಚೆನ್ನೈ (ತಮಿಳುನಾಡು) : ಬಿಜೆಪಿ ಪಕ್ಷ ತಮಿಳುನಾಡಿನಲ್ಲಿ ಅಷ್ಟೇನೂ ಪರಿಣಾಮ ಬೀರುವುದಿಲ್ಲ. ಮುಂದಿನ ಬಾರಿ ಸರ್ಕಾರ ರಚಿಸಿದರೆ ಬಿಜೆಪಿಗೆ ಸರ್ಕಾರದಲ್ಲಿ ಅವಕಾಶ ನೀಡಲಾಗುತ್ತದೆ ಎಂದು ಎಐಎಡಿಎಂಕೆ ಹೇಳಿದೆ.

ಮುಂದಿನ ವಿಧಾನಸಭಾ ಚುನಾವಣೆಗಳ ಹಿನ್ನೆಲೆಯಲ್ಲಿ ಮಾತನಾಡಿದ ಎಐಎಡಿಎಂಕೆ ಹಿರಿಯ ನಾಯಕ ಕೆ.ಪಿ.ಮುನುಸಾಮಿ ತಮಿಳುನಾಡಿನಲ್ಲಿ ಕೆ.ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಜೆಪಿ ಒಪ್ಪಿಕೊಳ್ಳುವುದರ ಜೊತೆಗೆ ಇತರ ನಿಯಮಗಳಿಗೆ ಒಪ್ಪಿಕೊಳ್ಳಬೇಕು ಎಂದಿದ್ದಾರೆ.

ಒಂದು ವೇಳೆ ಈ ನಿಯಮಗಳಿಗೆ ಒಪ್ಪಿಕೊಳ್ಳದಿದ್ದರೆ 2021ರಲ್ಲಿ ಬಿಜೆಪಿ ಪಕ್ಷ ಮೈತ್ರಿಯಲ್ಲಿ ಸ್ಪರ್ಧಿಸಬೇಕೋ..? ಅಥವಾ ಏಕಾಂಗಿಯಾಗಿ ಸ್ಪರ್ಧಿಸಬೇಕೋ..? ಎಂಬುದನ್ನು ಪುನರ್ವಿಮರ್ಶೆ ಮಾಡಿಕೊಳ್ಳಬೇಕೆಂದು ಮುನುಸಾಮಿ ಆಗ್ರಹಿಸಿದ್ದಾರೆ.

ಓದಿ: ರಜಿನಿ ಜತೆ ಮೈತ್ರಿಗೆ ಕೇವಲ ಒಂದು ಕರೆಯ ಅಂತರವಿದೆ; ಕಮಲ್‌ ಹಾಸನ್

ಎಐಎಡಿಎಂಕೆ ಪಕ್ಷದ ಅಧಿನಾಯಕಿಯಾಗಿದ್ದ ದಿವಂಗತ ಕುಮಾರಿ ಜಯಲಲಿತಾ ಹಾಗೂ ಡಿಎಂಕೆ ನಾಯಕರಾಗಿದ್ದ ಎಂ.ಕರುಣಾನಿಧಿ ಅಂತವರ ಗೈರಿನಲ್ಲಿ ಅವರ ಕೆಲವು ಪಕ್ಷಗಳು ತಮಿಳುನಾಡು ರಾಜಕೀಯಕ್ಕೆ ಪ್ರವೇಶ ಪಡೆಯಲು ಹಾತೊರೆಯುತ್ತಿವೆ ಎಂದು ಎಐಎಡಿಎಂಕೆ ಹಿರಿಯ ನಾಯಕ ಕೆ.ಪಿ.ಮುನುಸಾಮಿ ಆರೋಪಿಸಿದ್ದಾರೆ.

ಕೆಲವು ರಾಷ್ಟ್ರೀಯ ಪಕ್ಷಗಳು ಅವಕಾಶವಾದಿಗಳು, ಮೋಸಗಾರರಾಗಿದ್ದು, ದ್ರಾವಿಡರ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದಿರುವ ಮುನುಸಾಮಿ ಆಡಳಿತಾರೂಢ ಎಐಎಡಿಎಂಕೆ ವಿರುದ್ಧ ಯಾರೂ ಯಾವ ಆರೋಪವನ್ನು ಮಾಡಲು ಸಾಧ್ಯವಿಲ್ಲ. ರಾಜ್ಯ ಸರ್ಕಾರ ಹಲವಾರು ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದು, ಕೇಂದ್ರ ಸರ್ಕಾರ ಹಲವಾರು ಪ್ರಶಸ್ತಿಗಳನ್ನು ನೀಡಿದೆ ಎಂದು ಅವರು ಹೇಳಿದ್ದಾರೆ.

ಈ ಆರೋಪಗಳಿಂದ ಮೈತ್ರಿಯ ಮೊದಲ ಚುನಾವಣೆಯಲ್ಲಿಯೇ ಭಿನ್ನಾಭಿಪ್ರಾಯಗಳು ಮೂಡುವ ಸಾಧ್ಯತೆ ಇದೆ ಎನ್ನಲಾಗಿದೆ. ಕೆಲವು ದಿನಗಳ ಹಿಂದಷ್ಟೇ ಸಿಎಂ ಎಐಎಡಿಎಂ ಹಾಗೂ ಬಿಜೆಪಿ ಮೈತ್ರಿ 2021ರ ಚುನಾವಣೆವರೆಗೆ ಮುಂದುವರೆಯುತ್ತದೆ ಎಂದು ಹೇಳಿದ್ದು ಕೂಡಾ ಇಲ್ಲಿ ನಗಣ್ಯವಾಗುತ್ತಿದೆ ಎಂದು ಅಂದಾಜಿಸಲಾಗಿದೆ.

ಕೆಲವು ದಿನಗಳ ಹಿಂದೆ ಬಿಜೆಪಿ ರಾಜ್ಯಾಧ್ಯಕ್ಷ ಎಲ್. ಮುರುಗನ್ ಆಡಳಿತಾರೂಢ ಎಐಡಿಎಂಕೆಯೊಂದಿಗೆ ಬಿಜೆಪಿ ಮೈತ್ರಿ ಅಂತಿಮಗೊಳಿಸಲಾಗಿಲ್ಲ. ಈ ಬಗ್ಗೆ ರಾಷ್ಟ್ರೀಯ ನಾಯಕರು ತೀರ್ಮಾನ ಕೈಗೊಳ್ಳುತ್ತಾರೆ ಎಂದು ಹೇಳುವ ಮೂಲಕ, ಮೈತ್ರಿ ಬಗ್ಗೆ ಅನುಮಾನದ ಸುಳಿವನ್ನ ಬಿಟ್ಟುಕೊಟ್ಟಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.