ETV Bharat / bharat

ಕಾಂಗ್ರೆಸ್​ ಆಧಾರಸ್ತಂಭದಂತಿದ್ದ ಅಹ್ಮದ್​ ಪಟೇಲ್​ ವಿಧಿವಶ - ಅಹ್ಮದ್​ ಪಟೇಲ್​ ಜೀವನ

ಕೋವಿಡ್​ -19 ಸೋಂಕು ತಗುಲಿ ಗುರುಗ್ರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಿರಿಯ ಕಾಂಗ್ರೆಸ್ ಮುಖಂಡ ಅಹ್ಮದ್ ಪಟೇಲ್ ಇಂದು ಮುಂಜಾನೆ ಕೊನೆಯುಸಿರೆಳೆದರು. ಇವರಿಗೆ ಬಹು ಅಂಗಾಂಗ ವೈಫಲ್ಯ ಸಮಸ್ಯೆ ಕೂಡ ಇತ್ತು.

A staunch pillar of the Congress
ಅಹ್ಮದ್​ ಪಟೇಲ್​ ವಿಧಿವಶ
author img

By

Published : Nov 25, 2020, 9:53 AM IST

ನವದೆಹಲಿ: ಕೊವಿಡ್-19 ಸೋಂಕಿನಿಂದ ಕಾಂಗ್ರೆಸ್ ಹಿರಿಯ ಮುಖಂಡ ಅಹ್ಮದ್ ಪಟೇಲ್ ಇಂದು ಬೆಳಗ್ಗೆ ವಿಧಿವಶರಾಗಿದ್ದಾರೆ. ಇವರಿಗೆ 71 ವರ್ಷ ವಯಸ್ಸಾಗಿತ್ತು.

ಅಹ್ಮದ್​ ಪಟೇಲ್​ ಜೀವನ ಮತ್ತು ಪ್ರಮುಖ ರಾಜಕೀಯ ಹಂತಗಳು:

  • ಅಹ್ಮದ್ ಪಟೇಲ್ ಎಂದೂ ಕರೆಯಲ್ಪಡುವ ಅಹ್ಮದ್ ಭಾಯಿ​ ಮೊಹಮ್ಮದ್​ ಭಾಯಿ ಪಟೇಲ್ ಅವರು ಆಗಸ್ಟ್ 21, 1949 ರಂದು ಬಾಂಬೆಯ (ಈಗಿನ ಗುಜರಾತ್​ನ) ಭರೂಚ್​​ನಲ್ಲಿ ಮೊಹಮ್ಮದ್ ಇಶಾಕ್​ ​ಜಿ ಪಟೇಲ್ ಮತ್ತು ಹವಾಬೆನ್ ಮೊಹಮ್ಮದ್ ಭಾಯಿ ದಂಪತಿಯ ಮಗನಾಗಿ ಜನಿಸಿದರು.
  • ಅಹ್ಮದ್ ಪಟೇಲ್ ದಕ್ಷಿಣ ಗುಜರಾತ್​ನ ವೀರ್ ನರ್ಮದ್ ವಿಶ್ವವಿದ್ಯಾಲಯದಲ್ಲಿ ಶಿಕ್ಷಣ ಪಡೆದರು.
  • 1976 ರಲ್ಲಿ, ಅಹ್ಮದ್ ಪಟೇಲ್ ಅವರು ಮೆಮೂನಾ ಅಹ್ಮದ್ ಪಟೇಲ್ ಅವರನ್ನು ವಿವಾಹವಾದರು. ಇವರಿಗೆ ಮುಮ್ತಾಜ್ ಪಟೇಲ್ ಎಂಬ ಮಗಳು ಮತ್ತು ಫೈಸಲ್ ಪಟೇಲ್ ಎಂಬ ಮಗನಿದ್ದಾನೆ.
  • 1976 ರಲ್ಲಿ ಗುಜರಾತ್‌ನ ಭರೂಚ್ ಜಿಲ್ಲೆಯಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಮೂಲಕ ಪಟೇಲ್ ರಾಜಕೀಯ ರಂಗಕ್ಕೆ ಪ್ರವೇಶಿಸಿದರು.
  • ಅವರು ಪಕ್ಷದ ರಾಜ್ಯ ಮತ್ತು ಕೇಂದ್ರದ ಪ್ರಮುಖ ಹುದ್ದೆಗಳನ್ನು ಅಲಂಕರಿಸಿ ರಾಜಕೀಯ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಗಳಿಸಿದ್ದರು. ಅಹ್ಮದ್ ಪಟೇಲ್ ಅವರು 1985 ರಲ್ಲಿ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಅವರ ಸಂಸದೀಯ ಕಾರ್ಯದರ್ಶಿ ಹುದ್ದೆಯಲ್ಲಿದ್ದರು.
  • ಸರ್ದಾರ್ ಸರೋವರ್ ಯೋಜನೆಯನ್ನು ಮೇಲ್ವಿಚಾರಣೆ ಮಾಡಲು ನರ್ಮದಾ ನಿರ್ವಹಣಾ ಪ್ರಾಧಿಕಾರ ಸ್ಥಾಪಿಸುವಲ್ಲಿ ಪಟೇಲ್ ಪಾತ್ರ ಬಹುಮುಖ್ಯವಾದುದು.
  • 1988 ರಲ್ಲಿ ಪಟೇಲ್ ಅವರನ್ನು ಜವಾಹರ್ ಭವನ್ ಟ್ರಸ್ಟ್‌ನ ಕಾರ್ಯದರ್ಶಿಯಾಗಿ ನೇಮಿಸಲಾಯಿತು ಮತ್ತು ಆಗಿನ ಪ್ರಧಾನಿ ರಾಜೀವ್ ಗಾಂಧಿಯವರು ನವದೆಹಲಿಯ ರೈಸಿನಾ ರಸ್ತೆಯಲ್ಲಿ 10 ವರ್ಷದಿಂದ ಪೂರ್ಣಗೊಳ್ಳದೇ ಸ್ಥಗಿತಗೊಂಡಿದ್ದ ಜವಾಹರ್ ಭವನ ನಿರ್ಮಾಣದ ಮೇಲ್ವಿಚಾರಣೆಯನ್ನು ಪಟೇಲ್​ಗೆ ವಹಿಸಿದ್ದರು. ಅಹ್ಮದ್​ ಪಟೇಲ್​ ಆ ಭವನವನ್ನು ಕೇವಲ ಒಂದು ವರ್ಷದಲ್ಲಿ ಯಶಸ್ವಿಯಾಗಿ ಕಾಮಗಾರಿ ಮುಗಿಸಿದರು. ಈ ಭವನ ಕಂಪ್ಯೂಟರ್, ಟೆಲಿಫೋನ್ ಮತ್ತು ಇಂಧನ ಉಳಿಸುವ ಹವಾನಿಯಂತ್ರಣ ವ್ಯವಸ್ಥೆ ಹೊಂದಿದ್ದ ಹೆಚ್ಚು ಕಾಲ ಉಳಿಯಬಲ್ಲ ಕಟ್ಟಡವಾಗಿದೆ. ಕಾಂಗ್ರೆಸ್ ಶಾಸಕರ ಹಣವನ್ನು ಬಳಸಿ ಈ ಕಟ್ಟಡ ನಿರ್ಮಾಣ ಮಾಡಿದರು.
  • 2005 ರಲ್ಲಿ ಜಾರಿಗೆ ಬಂದ ರಾಜೀವ್ ಗಾಂಧಿ ಗ್ರಾಮೀಣ ವಿದ್ಯುತ್ತೀಕರಣ ಯೋಜನೆಯಡಿ ಸೇರ್ಪಡೆಗೊಂಡ ಮೊದಲ ಐದು ಜಿಲ್ಲೆಗಳಲ್ಲಿ ಒಂದಾಗಿದೆ ಅಹ್ಮದ್ ಪಟೇಲ್ ಗೆದ್ದು ಬಂದ ಕ್ಷೇತ್ರ ಭರೂಚ್ ಜಿಲ್ಲೆ ಕೂಡ ಸ್ಥಾನ ಪಡೆದಿತ್ತು.
  • ಭರೂಚ್ ಮತ್ತು ಅಂಕಲೇಶ್ವರ ಅವಳಿ ನಗರಗಳ ನಡುವಿನ ವಾಹನದಟ್ಟಣೆ ಕಡಿಮೆಗೊಳಿಸಲು ಸರ್ದಾರ್ ಪಟೇಲ್ ಸೇತುವೆ ನಿರ್ಮಾಣ ಮಾಡಿದ್ದು, ಅವರು ನೀಡಿದ ಕೊಡುಗೆಗಳಲ್ಲಿ ಒಂದಾಗಿದೆ. ಇನ್ನು ಅದೇ ವರ್ಷ ಪಟೇಲ್ ನಾಲ್ಕನೇ ಅವಧಿಗೆ ರಾಜ್ಯಸಭೆಗೆ ಆಯ್ಕೆಯಾದರು.
  • ಸೋನಿಯಾ ಗಾಂಧಿಯವರ ಮುಖ್ಯ ಸಲಹೆಗಾರರೆಂದು ಪರಿಗಣಿಸಲಾಗಿದ್ದರೂ, ಅಹ್ಮದ್​ ಪಟೇಲ್​ 14 ಮತ್ತು 15 ನೇ ಲೋಕಸಭೆ ಚುನಾವಣೆ ವೇಳೆ ಯುಪಿಎ ಸರ್ಕಾರದಿಂದ ಹೊರಗುಳಿಯಲು ನಿರ್ಧರಿಸಿದರು.
  • ಗುಜರಾತ್‌ನಲ್ಲಿ ಎಹ್ಸಾನ್ ಜಾಫ್ರಿ ನಂತರ ಲೋಕಸಭಾ ಸಂಸದರಾಗಿ ಆಯ್ಕೆಯಾದ ಎರಡನೇ ಮುಸ್ಲಿಂ ಸಂಸದ ಅಹ್ಮದ್​ ಪಟೇಲ್.
  • 2004 ಮತ್ತು 2014 ರ ನಡುವಿನ ಯುಪಿಎ ಸರ್ಕಾರದ ಅವಧಿಯಲ್ಲಿ, ಸರ್ಕಾರ ಮತ್ತು ಪಕ್ಷದ ನಡುವಿನ ಪ್ರಮುಖ ಸಮಸ್ಯೆಗಳನ್ನು ಬಗೆಹರಿಸುವ ನಿಪುಣ, ಸಂಯೋಜಕ ಮತ್ತು ಅನುವಾದಕರಲ್ಲಿ ಪಟೇಲ್ ಕೂಡ ಒಬ್ಬರು. ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಲ್ಲಿ ಸೋನಿಯಾ ಗಾಂಧಿಯ ರಾಜಕೀಯ ಕಾರ್ಯದರ್ಶಿಯಾಗಿದ್ದರು.
  • 2017 ರಲ್ಲಿ ಅವರು ಮತ್ತೆ ರಾಜ್ಯಸಭೆಗೆ ಆಯ್ಕೆಯಾದರು. ಕರ್ನಾಟಕ ಕಾಂಗ್ರೆಸ್ ಮುಖಂಡ ಡಿ.ಕೆ.ಶಿವಕುಮಾರ್ ಭಿನ್ನಮತ ತಪ್ಪಿಸಲು ಗುಜರಾತ್ ಶಾಸಕರನ್ನು ಬೆಂಗಳೂರಿಗೆ ಕರೆದೊಯ್ದು ಅಹ್ಮದ್ ಪಟೇಲ್ ಅವರು ಚುನಾವಣೆಯಲ್ಲಿ ಗೆಲ್ಲಲು ಡಿಕೆಶಿ ಸಹಾಯ ಮಾಡಿದರು.
  • ರಾಜಕೀಯದ ಹೊರತಾಗಿ ಅಹ್ಮದ್​ ಪಟೇಲ್​ ನೆಹರು - ಗಾಂಧಿ ಕುಟುಂಬಕ್ಕೆ ಆಪ್ತರಾಗಿದ್ದರು.
  • ಅಹ್ಮದ್​ ಪಟೇಲ್​ ಪಬ್ಲಿಸಿಟಿ ಅಷ್ಟಾಗಿ ಇಷ್ಟಪಡುತ್ತಿರಲಿಲ್ಲ. ಸಾಮಾನ್ಯವಾಗಿ ಮಾಧ್ಯಮಗಳಿಂದ ಅಂತರ ಕಾಯ್ದುಕೊಂಡೇ ಪಟೇಲ್​ ತಮ್ಮ ಕಾರ್ಯನಿರ್ವಹಿಸುತ್ತಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.