ETV Bharat / bharat

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಮಾಜಿ ರಕ್ಷಣಾ ಕಾರ್ಯದರ್ಶಿ, ಸಿಎಜಿ ವಿರುದ್ಧ ಸಿಬಿಐ ಚಾರ್ಜ್​​​ಶೀಟ್​

12 ಹೆಲಿಕಾಪ್ಟರ್​​ಗಳ ಪೂರೈಕೆಗೆ ಸಂಬಂಧಿಸಿದಂತೆ ಲಂಚ ಪಡೆದ ಗಂಭೀರ ಆರೋಪ ಕುರಿತಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ ತನಿಖೆ ನಡೆಯುತ್ತಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಒಪ್ಪಂದವನ್ನು 2014ರಲ್ಲಿ ಎನ್​ಡಿಎ ಸರ್ಕಾರ ರದ್ದು ಮಾಡಿದೆ.

agusta westland scam
agusta westland scam
author img

By

Published : Mar 16, 2022, 6:11 PM IST

ನವದೆಹಲಿ: ಅಗಸ್ಟಾ ವೆಸ್ಟ್‌ಲ್ಯಾಂಡ್ ವಿವಿಐಪಿ ಹೆಲಿಕಾಪ್ಟರ್​​ಗಳ ಹಗರಣ ಸಂಬಂಧ ಕೇಂದ್ರ ತನಿಖಾ ದಳ (ಸಿಬಿಐ) ಬುಧವಾರ ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ, ಮಾಜಿ ಕಂಟ್ರೋಲರ್​ ಹಾಗೂ ಅಡಿಟ್​​ ಜನರಲ್​ (ಸಿಎಜಿ) ಶಶಿಕಾಂತ ಶರ್ಮಾ ಸೇರಿದಂತೆ ವಾಯುಪಡೆಯ ಹಲವು ನಿವೃತ್ತ ಅಧಿಕಾರಿಗಳ ವಿರುದ್ಧ ಪೂರಕ ಚಾರ್ಜ್​​​ಶೀಟ್​ ಸಲ್ಲಿಸಿದೆ.

ದೆಹಲಿಯ ರೋಸ್ ಅವೆನ್ಯೂ ನ್ಯಾಯಾಲಯದಲ್ಲಿ ಸಿಬಿಐ ವಿಶೇಷ ನ್ಯಾಯಾಧೀಶ ಅರವಿಂದ್​ ಕುಮಾರ್ ಮುಂದೆ ಸಿಬಿಐ ವಕೀಲ, ವಿಶೇಷ ಸರ್ಕಾರಿ ಅಭಿಯೋಜಕ ಡಿ.ಪಿ.ಸಿಂಗ್​ ಈ ದೋಷಾರೋಪಣ ಪಟ್ಟಿಯನ್ನು ಸಲ್ಲಿಸಿದ್ದಾರೆ. ಅಲ್ಲದೇ, ರಕ್ಷಣಾ ಇಲಾಖೆಯ ಮಾಜಿ ಕಾರ್ಯದರ್ಶಿ ವಿರುದ್ಧ ಪ್ರಾಸಿಕ್ಯೂಷನ್ ಅನುಮತಿ ಸಹ ಪಡೆಯಲಾಗಿದೆ ಎಂದು ಹೇಳಲಾಗಿದೆ.

3,600 ಕೋಟಿ ರೂ. ವೆಚ್ಚದ ವಿವಿಐಪಿ ಹೆಲಿಕಾಪ್ಟರ್​​ಗಳ ಡೀಲ್​ನಲ್ಲಿ ಅಕ್ರಮ ಎಸಗಿದ ಆರೋಪದಡಿ 2020ರ ಸೆಪ್ಟೆಂಬರ್​ನಲ್ಲಿ ಖಾಸಗಿ ಕಂಪನಿ ಮತ್ತು ಕೆಲ ವ್ಯಕ್ತಿಗಳು ಸೇರಿ 15 ಜನರ ವಿರುದ್ಧ ಸಿಬಿಐ ಚಾರ್ಜ್​​​ಶೀಟ್ ಸಲ್ಲಿಸಿತ್ತು. 12 ಹೆಲಿಕಾಪ್ಟರ್​​ಗಳ ಪೂರೈಕೆಗೆ ಸಂಬಂಧಿಸಿದಂತೆ ಲಂಚ ಪಡೆದ ಆರೋಪ ಕುರಿತಂತೆ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದಿಂದ (ಇಡಿ) ತನಿಖೆ ನಡೆಯುತ್ತಿದೆ.

ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದಿದ್ದ ಈ ಒಪ್ಪಂದವನ್ನು 2014ರಲ್ಲಿ ಎನ್​ಡಿಎ ಸರ್ಕಾರ ರದ್ದು ಮಾಡಿದೆ.

ಇದನ್ನೂ ಓದಿ: ಕಾಂಗ್ರೆಸ್​ನಲ್ಲಿ ಮತ್ತೆ ಕಿಡಿ ಹೊತ್ತಿಸಿದ ಕಪಿಲ್​ ಸಿಬಲ್​ ಹೇಳಿಕೆ: ಹಿರಿಯ ನಾಯಕನ ವಿರುದ್ಧ ಮುಗಿಬಿದ್ದ ಪಕ್ಷ ನಿಷ್ಠರು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.