ETV Bharat / bharat

ಅತ್ಯಾಚಾರ ಪ್ರಕರಣ: ದಾಖಲೆಯ 36 ದಿನಗಳಲ್ಲಿ ತೀರ್ಪು ನೀಡಿದ ಆಗ್ರಾ ವಿಶೇಷ ಪೋಕ್ಸೊ ಕೋರ್ಟ್​​ - ಆಗ್ರಾದ ವಿಶೇಷ ಪೋಕ್ಸೊ ನ್ಯಾಯಾಲಯ

ಅತ್ಯಾಚಾರ ಪ್ರಕರಣ. ಆಗ್ರಾದ ವಿಶೇಷ ಪೋಕ್ಸೊ ನ್ಯಾಯಾಲಯದಿಂದ ದಾಖಲೆಯ 36 ದಿನಗಳಲ್ಲಿ ತೀರ್ಪು. ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 20 ಸಾವಿರ ರೂ. ದಂಡ.

Agra POCSO court
ಆಗ್ರಾ ಪೋಕ್ಸೊ ನ್ಯಾಯಾಲಯ
author img

By

Published : Oct 14, 2022, 3:16 PM IST

ಆಗ್ರಾ(ಉತ್ತರ ಪ್ರದೇಶ): ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಸಿದ ಆಗ್ರಾದ ಪೋಕ್ಸೊ ನ್ಯಾಯಾಲಯದ ವಿಶೇಷ ನ್ಯಾಯಾಧೀಶರು ದಾಖಲೆಯ 36 ದಿನಗಳಲ್ಲಿ ತೀರ್ಪು ನೀಡಿದ್ದಾರೆ. ವಿಶೇಷ ನ್ಯಾಯಾಧೀಶ ಪ್ರಮೇಂದ್ರ ಕುಮಾರ್ ಅವರಿದ್ದ ಪೀಠ ಆರೋಪಿಗೆ 20 ವರ್ಷಗಳ ಜೈಲು ಶಿಕ್ಷೆ ಮತ್ತು 20 ಸಾವಿರ ರೂ.ಗಳ ದಂಡವನ್ನು ವಿಧಿಸಿದೆ.

ಪ್ರಕರಣದ ವಿವರ: ಉತ್ತರ ಪ್ರದೇಶದ ಸಿಕಂದರಾ ಪ್ರದೇಶದ ನಿವಾಸಿ ಆರೋಪಿ ನೀರಜ್ ಸಂತ್ರಸ್ತೆಯ ಸಂಬಂಧಿಯಾಗಿದ್ದ. ಈತ ಬಾಲಕಿಯ ಸಾಮೀಪ್ಯ ದುರ್ಬಳಕೆ ಮಾಡಿಕೊಂಡು ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾನೆ ಎನ್ನಲಾಗಿದೆ. ಮಗಳ ಬಗ್ಗೆ ಅನುಮಾನಗೊಂಡ ಪೋಷಕರು ವಿಚಾರಿಸಿದಾಗ ಸಂತ್ರಸ್ತೆ ತನ್ನ ಪೋಷಕರಿಗೆ ತನ್ನ ದುಃಖವನ್ನು ಹೇಳಿಕೊಂಡು ಆರೋಪಿಯ ಹೆಸರನ್ನು ಬಹಿರಂಗಪಡಿಸಿದ್ದರು.

ಬಳಿಕ ಜುಲೈ 8, 2022 ರಂದು, ಆರೋಪಿ ನೀರಜ್ ವಿರುದ್ಧ ಎತ್ಮದ್ದೌಲಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದ ತನಿಖೆ ನಡೆಸಿದ ಪೊಲೀಸರು 15 ದಿನಗಳಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ಪೂರ್ಣಗೊಂಡ ನಂತರ, ವಿಶೇಷ ನ್ಯಾಯಾಲಯವು ಸೆ.8 2022 ರಂದು ಆರೋಪಗಳನ್ನು ರೂಪಿಸಿತು. ಗುರುವಾರ(ನಿನ್ನೆ), ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಪ್ರಮೇಂದ್ರ ಕುಮಾರ್ ಅವರು ಆರೋಪಿಗೆ ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.

ಇದನ್ನೂ ಓದಿ: ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ: ಪಾರ್ಟಿ ನಂತರ ಸ್ನೇಹಿತರಿಂದಲೇ ಕೃತ್ಯ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.