ETV Bharat / bharat

ಹಲವು ಸುತ್ತಿನ ಸಭೆಗಳ ಬಳಿಕ ನುಸುಳುಕೋರನ ಮೃತದೇಹ ಸ್ವೀಕರಿಸಿದ ಪಾಕಿಸ್ತಾನ

ಮೊದಲು ಮೃತದೇಹವನ್ನು ಸ್ವೀಕರಿಸಲು ಪಾಕಿಸ್ತಾನ ಸಿದ್ಧವಿರಲಿಲ್ಲ. ಬಳಿಕ ಪಾಕಿಸ್ತಾನದ ರೇಂಜರ್ಸ್​ ಜೊತೆ ಎರಡು ಸುತ್ತಿನ ಮಾತುಕತೆ ಬಳಿಕ ಅವರು ಒಪ್ಪಿದರು ಎಂದು ಶ್ರೀ ಕರನ್ಪುರ್​ ಪೊಲೀಸ್​ ಠಾಣೆ ಎಸ್​ಎಚ್​ಒ ಬಲವಂತ್​ ರಾಮ್​ ತಿಳಿಸಿದ್ದಾರೆ.

ಹಲವು ಸುತ್ತಿನ ಸಭೆಗಳ ಬಳಿಕ ಕಡೆಗೂ ಒಳ ನುಸುಳುಕೋರನ ಮೃತದೇಹವನ್ನು ಸ್ವೀಕರಿಸಿದ ಪಾಕಿಸ್ತಾನ
after-several-rounds-of-meetings-pakistan-finally-received-the-dead-body-of-the-infiltrator
author img

By

Published : Dec 7, 2022, 11:25 AM IST

Updated : Dec 7, 2022, 11:30 AM IST

ಶ್ರೀ ಗಂಗಾನಗರ್​​: ಇಲ್ಲಿನ ಹರ್ಮುಖ್​ ಪೋಸ್ಟ್​ ಗಡಿಯಿಂದ ಭಾರತದ ಒಳನುಗ್ಗಲು ಯತ್ನಿಸಿದ ನುಸುಳುಕೋರನ ಮೇಲೆ ಬಿಎಸ್​ಎಫ್ ಸಿಬ್ಬಂದಿ​ ಗುಂಡಿನ ದಾಳಿ ಮಾಡಿ ಹೊಡೆದುರುಳಿಸಿದ್ದರು. ಪಾಕಿಸ್ತಾನ ಸೇನೆ ಜೊತೆ ಎರಡು ಸುತ್ತಿನ ಮಾತುಕತೆ ಬಳಿಕ ಬಿಎಸ್​ಎಫ್​ ನುಸುಳುಕೋರನ ಮೃತದೇಹವನ್ನು ಹಸ್ತಾಂತರಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೊದಲು ಮೃತದೇಹವನ್ನು ಸ್ವೀಕರಿಸಲು ಪಾಕಿಸ್ತಾನ ಸಿದ್ಧವಿರಲಿಲ್ಲ. ಬಳಿಕ ಪಾಕಿಸ್ತಾನದ ಸೇನೆ​ ಜೊತೆ ಬಿಎಸ್​ಎಫ್​​ ಎರಡು ಸುತ್ತಿನ ಮಾತುಕತೆ ನಡೆಸಿದೆ. ಇದಾದ ನಂತರ ಮೃತದೇಹ ಸ್ವೀಕರಿಸಲು ಒಪ್ಪಿದರು ಎಂದು ಶ್ರೀ ಕರನ್ಪುರ್​ ಪೊಲೀಸ್​ ಠಾಣೆ ಎಸ್​ಎಚ್​ಒ ಬಲವಂತ್​ ರಾಮ್​ ತಿಳಿಸಿದ್ದಾರೆ.

ಪಾಕಿಸ್ತಾನಿ ಅಧಿಕಾರಿಗಳೊಂದಿಗೆ ಮಂಗಳವಾರ ಮತ್ತು ಫ್ಲಾಗ್​ ಮೀಟಿಂಗ್​ ನಡೆಸಲಾಯಿತು. ಮೂರನೇ ಸುತ್ತಿನ ಮಾತುಕತೆಯಲ್ಲಿ, ಅವರು ಮೃತದೇಹ ಪಡೆಯಲು ಒಪ್ಪಿದರು. ಅಗತ್ಯ ಔಪಚಾರಿಕತೆ ಬಳಿಕ ಅವರಿಗೆ ಮೃತದೇಹ ಹಸ್ತಾಂತರಿಸಲಾಗಿದೆ.

ಭಾನುವಾರ ರಾಜಸ್ಥಾನ ಜಿಲ್ಲೆಯ ಗಂಗಾನಗರ್​ ಗ್ರಾಮದ ಮಜಿವಾಲಬಳಿಯ ಹರ್ಮುಖ ಅಂತಾರಾಷ್ಟ್ರೀಯ ಗಡಿಯಲ್ಲಿ ಬಿಎಸ್​ಎಫ್​ ಸಿಬ್ಬಂದಿ ಗಸ್ತು ತಿರುಗುವಾಗ ಅನುಮಾನಾಸ್ಪದ ಚಟುವಟಿಕೆ ಕಂಡು ಬಂದಿದೆ. ಈ ವೇಳೆ ನುಸುಳುಕೋರನಿಗೆ ನಿಲ್ಲುವಂತೆ ಸೂಚನೆ ನೀಡಲಾಗಿದೆ. ಆದರೆ, ಆತ ಮಾತು ಕೇಳದೇ ಶೂನ್ಯ ರೇಖೆ ದಾಟಿದ್ದಾನೆ.

ಈ ಹಿನ್ನೆಲೆ ಆತನ ಮೇಲೆ ದಾಳಿ ನಡೆಸಲಾಗಿದೆ. ಪರಿಶೀಲನೆ ನಡೆಸಿಸಿದಾಗ ಆತನ ಬಳಿ ಪಾಕಿಸ್ತಾನದ ನಗದು, ಸಿಗರೇಟ್​, ಬೆಂಕಿಪೊಟ್ಟಣ, ಹಗ್ಗಗಳು ಪತ್ತೆಯಾಗಿವೆ. ಈತ ಪಾಕಿಸ್ತಾನದ ಬಜವಲ್​ನಗರ​ದ ನಿವಾಸಿಯಾಗಿದ್ದು, ವಿಶೇಷ ಚೇತನ ವ್ಯಕ್ತಿಯಾಗಿದ್ದಾನೆ ಎಂದು ಎಸ್​ಎಚ್​ಒ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ಜಮ್ಮುಕಾಶ್ಮೀರ: ಅನಂತ್‌ನಾಗ್‌ನಲ್ಲಿ ಹೈಬ್ರಿಡ್ ಉಗ್ರನ ಹತ್ಯೆಗೈದ ಭದ್ರತಾ ಪಡೆ

Last Updated : Dec 7, 2022, 11:30 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.